ರಾಯಚೂರು: ಗಾಳಿಸಹಿತ ಸುರಿದ ಭಾರೀ ಮಳೆಗೆ ರಾಯಚೂರು ನಗರದ ಎಂ.ಈರಣ್ಣ ಸರ್ಕಲ್‌ನಲ್ಲಿ ಬೃಹತ್ ಬೇವಿನಮರ ವಿದ್ಯುತ್ ತಂತಿ ಮತ್ತು ತರಕಾರಿ ಮಾರಾಟದ ತಳ್ಳುವ ಬಂಡಿಯ ಮೇಲೆ ಬಿತ್ತು. ವಿದ್ಯುತ್ ತಂತಿ ಮೇಲೆ ಮರ ಬಿದ್ದುದರಿಂದ ಸಮೀಪದ ಬಡಾವಣೆಯಲ್ಲಿ ವಿದ್ಯುಚ್ಛಕ್ತಿ ಪೂರೈಕೆಯಲ್ಲಿ ವ್ಯತ್ಯಯವಾಯಿತು.
ನಗರದಲ್ಲಿ ಎರಡ್ಮೂರು ತಾಸು ಮಳೆ ಅಬ್ಬರಿಸಿತು. ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ತಗ್ಗು ದಿಣ್ಣೆಗಳಲ್ಲಿ ರಸ್ತೆ ಮೇಲೆ ನಿಂತು ವಾಹನ ಸವಾರರು ಪರದಾಡಿದರು. ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಯಾವುದೇ ಪ್ರಾಣಾಪಾಯದ ಕುರಿತು ವರದಿಯಾಗಿಲ್ಲ.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ: ಜೂನ್ 6 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ - Karnataka Rain Forecast