ETV Bharat / state

ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್: ಯಾರ ವಿರುದ್ಧ ಯಾರು ಅಖಾಡದಲ್ಲಿದ್ದಾರೆ, ಇಲ್ಲಿದೆ ಸಂಪೂರ್ಣ ಮಾಹಿತಿ - Lok Sabha election 2024 - LOK SABHA ELECTION 2024

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಮತ್ತು ಕಾಂಗ್ರೆಸ್​ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು ಕಾಂಗ್ರೆಸ್​ ಅಭ್ಯರ್ಥಿಗಳ ಮಧ್ಯೆ ಬಿರುಸಿನ ಪೈಪೋಟಿ ನಡೆದಿದ್ದು, ಎರಡು ಹಂತದ ಚುನಾವಣೆಯಲ್ಲಿ ಯಾರು, ಎಲ್ಲಿಂದ, ಯಾರ ವಿರುದ್ಧ ಕಣಕ್ಕೆ ಇಳಿದಿದ್ದಾರೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

NDA AND CONGRESS PARTY  CANDIDATES FOR 28 CONSTITUENCIES  KARNATAKA STATE TICKET ANNOUNCE  Bengaluru
ರಾಜ್ಯದ 28 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿದ ಎನ್​ಡಿಎ ಮತ್ತು ಕಾಂಗ್ರೆಸ್​ ಪಕ್ಷ
author img

By ETV Bharat Karnataka Team

Published : Mar 30, 2024, 3:03 PM IST

Updated : Mar 31, 2024, 3:48 PM IST

ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಕರ್ನಾಟಕದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಆಯಾಯ ಕ್ಷೇತ್ರದಲ್ಲಿ ಯಾರ ವಿರುದ್ಧ ಯಾರು ಸ್ಪರ್ಧಿಸುತ್ತಿದ್ದಾರೆ. ಎಷ್ಟು ಸಚಿವರ ಮಕ್ಕಳಿಗೆ ಟಿಕೆಟ್​ ಭಾಗ್ಯ ದೊರೆತಿದೆ. ಯಾವ್ಯಾವ ಮಾಜಿ ಸಿಎಂಗಳಿಗೆ ಟಕೆಟ್​ ಒಲಿದಿದೆ ಎಂಬುದನ್ನು ನೋಡುವುದಾದರೆ,

ಎರಡು ಹಂತಗಳಲ್ಲಿ ಮತದಾನ: ದೇಶದ 543 ಲೋಕಸಭೆ ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆದರೆ, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಒಂದನೇ ಹಂತದಲ್ಲಿ, ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 26, ಶುಕ್ರವಾರದಂದು ನಡೆಯಲಿದ್ದು, ಎರಡನೇ ಹಂತದ ಚುನಾವಣೆ ಮೇ 7, ಮಂಗಳವಾರ ನಡೆಯಲಿದೆ.

ಏಪ್ರಿಲ್​ 26ರಂದು ಮತದಾನ: ಮೊದಲ ಹಂತದ ಚುನಾವಣೆ ಏಪ್ರಿಲ್​ 26ರಂದು ನಡೆಯಲಿದೆ. ಈಗಾಗಲೇ ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏ.4 ಇರಲಿದೆ. ನಾಮಪತ್ರ ಹಿಂಪಡೆಯುವ ಕೊನೆ ದಿನ ಏ.8 ಆಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಮತದಾನ ಮತ್ತು ಅಲ್ಲಿ ಯಾರ್ಯಾರ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎಂಬ ಮಾಹಿತಿ ಹೀಗಿದೆ.

NDA AND CONGRESS PARTY  CANDIDATES FOR 28 CONSTITUENCIES  KARNATAKA STATE TICKET ANNOUNCE  BENGALURU
ಏಪ್ರಿಲ್​ 26ರಂದು ಮತದಾನ

ಮೇ 7ರಂದು ಮತದಾನ: ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಎರಡನೇ ಹಂತದ ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಏಪ್ರಿಲ್‌ 12 ರಂದು ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 19 ಕೊನೆಯ ದಿನವಾಗಿರುತ್ತದೆ. ಏಪ್ರಿಲ್‌ 20 ರಂದು ನಾಮಪತ್ರ ಪರಿಶೀಲನೆ ನಡೆದರೆ, ನಾಮಪತ್ರ ವಾಪಸ್‌ ತೆಗೆದುಕೊಳ್ಳಲು ಏಪ್ರಿಲ್‌ 22 ಕೊನೆಯ ದಿನವಾಗಿರುತ್ತದೆ. ಎರಡನೇ ಹಂತದ ಚುನಾವಣೆಯಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಮತದಾನ ಮತ್ತು ಅಲ್ಲಿ ಯಾರ್ಯಾರ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎಂಬುದರ ಮಾಹಿತಿ ಹೀಗಿದೆ.

ಮೇ 7ರಂದು ಮತದಾನ

ಎಂಟು ಮಹಿಳೆಯರಿಗೆ ಟಿಕೆಟ್​: 2029ರ ಲೋಕಸಭೆ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ರಾಷ್ಟ್ರಾದ್ಯಂತ ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಟ್ಟಿದೆ. ಅದರಲ್ಲಿ ರಾಜ್ಯದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇದ್ದು, 6 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ.

ಎಂಟು ಮಹಿಳೆಯರಿಗೆ ಟಿಕೆಟ್

ಆರು ಸಚಿವರ ಮಕ್ಕಳಿಗೆ ಒಲಿದ ಟಿಕೆಟ್​: ಲೋಕಸಭೆ ಚುನಾವಣೆ ರಂಗೇರಿದ್ದು, ಕಾಂಗ್ರೆಸ್​ ಪಕ್ಷದಲ್ಲಿ ಕುಟುಂಬ ರಾಜಕೀಯ ಮುಂದುವರಿದಿದೆ. ಕಾಂಗ್ರೆಸ್​ ಪಕ್ಷ ರಾಜ್ಯದ 28 ಅಭ್ಯರ್ಥಿಗಳ ಪೈಕಿ ಆರು ಸಚಿವರ ಮಕ್ಕಳಿಗೆ ಮಣೆ ಹಾಕಿದೆ. ಸಚಿವರ ಮಕ್ಕಳು ಪೈಪೋಟಿ ಎಲ್ಲಲ್ಲಿ ಮತ್ತು ಯಾರ್ಯಾರ ವಿರುದ್ಧ ಎಂಬುದರ ವಿವರ ಈ ಕೆಳಗಿನಂತಿದೆ.

Lok Sabha candidates
ಆರು ಸಚಿವರ ಮಕ್ಕಳಿಗೆ ಒಲಿದ ಟಿಕೆಟ್​

ಆರು ಸಚಿವರ ಮಕ್ಕಳಿಗೆ ಒಲಿದ ಟಿಕೆಟ್

ಮಾಜಿ ಸಿಎಂಗಳಿಗೆ ಟಿಕೆಟ್​ ಘೋಷಣೆ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್​ ಭಾಗ್ಯ ಒಲಿದಿದೆ. ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಮತ್ತು ಅವರ ವಿರುದ್ಧ ಯಾರು ಕಣಕ್ಕಿಳಿದಿದ್ದಾರೆ ಎಂಬುದನ್ನ ನೋಡುವುದಾದರೆ.

Lok Sabha candidates
ಮಾಜಿ ಸಿಎಂಗಳಿಗೆ ಟಿಕೆಟ್​ ಘೋಷಣೆ

ವೋಟ್​ ಹಾಕುವುದು ಮರೆಯಬೇಡಿ: ಒಟ್ಟಿನಲ್ಲಿ ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಎಲ್ಲ ಅಭ್ಯರ್ಥಿಗಳು ಮತಬೇಟೆ ಆರಂಭಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನಡೆಯಲಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡ್ಬೇಕಾಗಿದೆ. ಅಂದಹಾಗೆ ನೀವು ವೋಟ್​ ಹಾಕುವುದನ್ನ ಮರೆಯಬೇಡಿ..

ಓದಿ: ಕೋಲಾರದಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ; ಕಾಂಗ್ರೆಸ್​ನಿಂದ​ ಕೆ. ವಿ. ಗೌತಮ್​ಗೆ ಟಿಕೆಟ್ - KOLAR LOK SABHA CONSTITUENCY

Last Updated : Mar 31, 2024, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.