ತುಮಕೂರು : ಬರೋಬ್ಬರಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿಯ ರೂವಾರಿ ನಕ್ಸಲ್ ಕೊತ್ತಗೆರೆ ಶಂಕರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2005ರ ಫೆಬ್ರವರಿ 10ರಂದು ರಾತ್ರಿ 10.30ರ ವೇಳೆಯಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯ ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೋಯಿಸ್ಟ್ ನಕ್ಸಲೀಯರು ಬಂದೂಕುಗಳು, ಬಾಂಬ್, ಹ್ಯಾಂಡ್ ಗ್ರೇನೇಡ್ಗಳೊಂದಿಗೆ ದಾಳಿ ನಡೆಸಿದ್ದರು.
ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಕೊಲೆ ಮಾಡಿ, 5 ಮಂದಿ ಪೊಲೀಸ್ ಸಿಬ್ಬಂದಿಗೆ ಗಾಯಗಳನ್ನು ಮಾಡಿದ್ದರು. ಕ್ಯಾಂಪಿನ ಹೊರಗೆ ನಿಂತಿದ್ದ ಖಾಸಗಿ ಬಸ್ನ ಕ್ಲೀನರ್ನನ್ನು ಸಹ ಕೊಲೆ ಮಾಡಿ, ಕ್ಯಾಂಪ್ನಲ್ಲಿದ್ದ ಬಂದೂಕುಗಳು ಮತ್ತು ಗುಂಡುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈ ಪ್ರಕರಣದಲ್ಲಿ 32 ಮಂದಿ ತಲೆ ಮರೆಸಿಕೊಂಡಿದ್ದು, ಇವರ ಮೇಲೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ಇದನ್ನೂ ಓದಿ : ದಕ್ಷಿಣ ಕನ್ನಡ-ಕೊಡಗು ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ: ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್