ETV Bharat / state

ನಾಥೂರಾಂ ಗೋಡ್ಸೆ ಭಾರತದ ಮೊಟ್ಟಮೊದಲ ಭಯೋತ್ಪಾದಕ: ಬಿ ಕೆ ಹರಿಪ್ರಸಾದ್ - ಮಂಗಳೂರು

ಮಹಾತ್ಮಾ ಗಾಂಧಿ ಅವರನ್ನ ಕೊಂದ ನಾಥೂರಾಂ ಗೋಡ್ಸೆಯನ್ನು ನಾನು ಉಗ್ರಗಾಮಿ ಎಂದು ಹೇಳಲ್ಲ. ಆತ ದೇಶದ ಮೊಟ್ಟಮೊದಲ ಭಯೋತ್ಪಾದಕನಾಗಿದ್ದ ಎಂದು ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಬಿ ಕೆ ಹರಿಪ್ರಸಾದ್
ಬಿ ಕೆ ಹರಿಪ್ರಸಾದ್
author img

By ETV Bharat Karnataka Team

Published : Jan 29, 2024, 10:02 PM IST

ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್

ಮಂಗಳೂರು: ಭಾರತದಲ್ಲಿರುವ ಸಾವಿರಾರು ಭಾಷೆ, ಜಾತಿಗಳನ್ನು ಒಂದಾಗಿ ಕೊಂಡೊಯ್ಯಬೇಕಾದರೆ ಯಾವುದಾದರೂ ಒಂದು ದೊಡ್ಡ ತತ್ವ ಅಥವಾ ಸಿದ್ಧಾಂತ ಬೇಕು. ಅದನ್ನೇ ಮಹಾತ್ಮಾ ಗಾಂಧಿಯವರು ಸರ್ವಧರ್ಮ ಸಮಭಾವ ಎಂದು ಕರೆದರು. ಆ ಸಿದ್ಧಾಂತಕ್ಕೋಸ್ಕರ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ನಾನು ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಉಗ್ರಗಾಮಿ ಎಂದು ಹೇಳಲ್ಲ. ಆತ ಈ ದೇಶದ ಮೊಟ್ಟಮೊದಲ ಭಯೋತ್ಪಾದಕನಾಗಿದ್ದ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ನಗರದ ಸಹೋದಯ ಸಭಾಂಗಣದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಭಯೋತ್ಪಾದನೆ ಆರಂಭವಾಗಿದ್ದೇ ನಾಥೂರಾಮ್​ ಗೋಡ್ಸೆಯಿಂದ. ಹಿಂದೂ ಧರ್ಮದ ಮೇಲೆ ನಂಬಿಕೆಯಿಟ್ಟಿದ್ದ ಗಾಂಧೀಜಿ ಅವರನ್ನು ಕೊಂದ ಹಿಂದೂವನ್ನು ಏನೆಂದು ಕರೆಯಬೇಕು? ಎಂದು ಇದೇ ವೇಳೆ ಅವರು ಪ್ರಶ್ನಿಸಿದ್ದಾರೆ.

ಅಯೋಧ್ಯೆಯಲ್ಲಿ ಯಾವುದೇ ದೇವಾಲಯ ಇರಲಿಲ್ಲ. ಆದರೆ, ಬಾಬರಿ ಮಸೀದಿಯನ್ನು ಕೆಡವಲಾಗಿದೆ ಎಂದು ಪುರಾತತ್ವ ಇಲಾಖೆ ಸ್ಪಷ್ಟವಾಗಿ ಹೇಳಿದೆ. ಆದರೂ ಬಹಜನ ವರ್ಗದ ಭಾವನೆಗಳನ್ನು ನಾವು ಒಪ್ಕೊಂಡಿದ್ದೇವೆ ಎಂದು ಹೇಳುತ್ತದೆ. ಇಂತಹ ವಿಚಾರವನ್ನು ಮಹಾತ್ಮಾ ಗಾಂಧಿಯವರು 1929 ರಲ್ಲೇ ಹೇಳಿದ್ದಾರೆ. ಆದ್ದರಿಂದ ಮಹಾತ್ಮಾ ಗಾಂಧಿಯವರ ಚಿಂತನೆ ಕೇವಲ ಗತಕಾಲದ ಇತಿಹಾಸವಲ್ಲ, ವರ್ತಮಾನದಲ್ಲಿ ಇರುವಂತಹದ್ದೂ ಅಲ್ಲ. ಭವಿಷ್ಯತ್ತಿನಲ್ಲೂ ಇರುವಂತಹದ್ದು. ದೇಶದಲ್ಲಿ ಇಂದು ಭಯದ, ಬೇಧ - ಭಾವದ ವಾತಾವರಣವನ್ನು ಸೃಷ್ಟಿ ಮಾಡಿರುವ ಪ್ರತಿಗಾಮಿ ಶಕ್ತಿಗಳು, ಉಗ್ರ ಬಲಪಂಥಿಯರನ್ನು ನಾವು ಎದುರಿಸಲು ಮಹಾತ್ಮಾಗಾಂಧಿ ಒಂದೇ ಮಂತ್ರ ಎಂದು ಪ್ರತಿಪಾದನೆ ಮಾಡಿದ್ದಾರೆ.

ವಾಟ್ಸ್​ಆ್ಯಪ್​ ಯುನಿವರ್ಸಿಟಿ ವಿರುದ್ಧ ಹರಿಪ್ರಸಾದ್​​​​​​​ ವಾಗ್ದಾಳಿ: ಗಾಂಧಿಯವರನ್ನು ಬಲಪಂಥೀಯ ಉಗ್ರಗಾಮಿಗಳು ಖಳನಾಯಕನಂತೆ ಮಾಡಲು ಹೊರಟಿದ್ದಾರೆ. 1991ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲಂತೂ ಗುಜರಾತ್​ನ ಪೋರಬಂದರ್ ಮಾಫಿಯಾದ ನಿಯಂತ್ರಣದಲ್ಲಿದೆ. ಇದು ಸದ್ಯ ದೇಶದಲ್ಲಿನ ಮಹಾತ್ಮಾ ಗಾಂಧಿಯವರ ಸ್ಥಿತಿಯನ್ನು ತೋರಿಸುತ್ತಿದೆ. ಇಲ್ಲ ಸಲ್ಲದ ಆರೋಪಗಳನ್ನು ವಾಟ್ಸ್ಆ್ಯಪ್ ಯುನಿವರ್ಸಿಟಿ ಮೂಲಕ ಸೃಷ್ಟಿ ಮಾಡಲಾಗುತ್ತಿದೆ. ಗಾಂಧಿ‌ ಚಿಂತನೆ ಎಂದಿಗೆ ಮುಗಿಯುತ್ತೆದೆಯೋ ಅಂದಿಗೆ ಈ ದೇಶವು ಮುಗಿಯುತ್ತದೆ ಎಂದು ಬಿ. ಕೆ ಹರಿಪ್ರಸಾದ್ ಅಭಿಪ್ರಾಯಪಟ್ಟರು. ಮಾಫಿಯಾಗಳನ್ನು ಮಟ್ಟ ಹಾಕಲು ಸಮರಸದ ಜೀವನ ನಡೆಸಲು ಗಾಂಧಿ ಚಿಂತನೆಗಳು ಸಮಾಜಕ್ಕೆ ಅತ್ಯಗತ್ಯ ಎಂದು ಇದೇ ವೇಳೆ ಅವರು ಬಲವಾಗಿ ಪ್ರತಿಪಾದಿಸಿದರು.

ಇದನ್ನೂ ಓದಿ: ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಬಿಜೆಪಿ ಕಾರ್ಯಕ್ರಮ: ಬಿ ಕೆ ಹರಿಪ್ರಸಾದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.