ETV Bharat / state

'ನಮ್ಮ ಮೆಟ್ರೋ' ಹಳದಿ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ರೈಲು ಸಂಚಾರ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಶೀಘ್ರದಲ್ಲೇ ಬಿಎಂಆರ್‌ಸಿಎಲ್ ಪ್ರಾಯೋಗಿಕ ರೈಲು ಸಂಚಾರ ನಡೆಸಲಿದೆ.

ನಮ್ಮ ಮೆಟ್ರೋ
ನಮ್ಮ ಮೆಟ್ರೋ
author img

By ETV Bharat Karnataka Team

Published : Jan 30, 2024, 9:17 AM IST

ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗದ ವಾಣಿಜ್ಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರವೇ ಪ್ರಾಯೋಗಿಕ ರೈಲು ಸಂಚಾರ ನಡೆಯಲಿದೆ. ಒಪ್ಪಂದದಂತೆ ಚೀನಾ ಸಂಸ್ಥೆೆಯು ಪ್ರೋಟೋ ಟೈಪ್ ಬೋಗಿಗಳನ್ನು ಒದಗಿಸುತ್ತಿದೆ. ಈಗಾಗಲೇ ಬೋಗಿಗಳು ಭಾರತಕ್ಕೆೆ ರವಾನೆಯಾಗಿವೆ. ಮುಂದಿನ ತಿಂಗಳ ಫೆಬ್ರುವರಿಯಲ್ಲಿ ಬೆಂಗಳೂರಿಗೆ ಆಗಮಿಸಲಿದ್ದು, ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದು ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಯೋಗಿಕ ಕಾರ್ಯಾಚರಣೆಗೆಂದೇ ಬೋಗಿ ಪೂರೈಸಿದ ಕಂಪನಿಯ ಸುಮಾರು 15 ಅಧಿಕಾರಿಗಳು ಆಗಮಿಸಲಿದ್ದಾರೆ. ಬಳಿಕ ಒಂದಷ್ಟು ತಾಂತ್ರಿಕ ಅನುಮೋದನೆಗಳು ಮತ್ತು ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಯಲಿದೆ. ಹಳದಿ ಮಾರ್ಗದಲ್ಲಿ ಸಿವಿಲ್ ಮತ್ತು ಟ್ರ್ಯಾಕ್ ಪರಿಶೀಲನೆ ಕೆಲಸ ಮುಗಿದಿದ್ದು, ಇನ್ನಷ್ಟು ಕೆಲಸಗಳು ನಡೆಯುತ್ತಿವೆ. ಆ ಬಳಿಕ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆೆ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.

90 ಕೋಚ್ ಅಳವಡಿಕೆ: ಈ ಹಿಂದೆ ಚೀನಾ ಕಂಪನಿಯು ನಮ್ಮ ಮೆಟ್ರೋಗೆ 216 ಕೋಚ್‌ಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ 216 ಕೋಚ್‌ಗಳಲ್ಲಿ 90 ಕೋಚ್​ಗಳನ್ನು 19.15 ಕಿಮೀ ಹಳದಿ ಮಾರ್ಗದಲ್ಲಿ ಓಡಿಸಲು ನಮ್ಮ ಮೆಟ್ರೋ ಪ್ಲಾನ್ ಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ, ಬಿಎಂಟಿಸಿ ನಡುವೆ ಒಪ್ಪಂದ: ಫೀಡರ್ ಬಸ್‌ಗಳ ಸಂಖ್ಯೆ ಹೆಚ್ಚಿಸಲು ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.