ETV Bharat / state

ಅಪಘಾತ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಿಸಿದ ಮೈಸೂರು ಪೊಲೀಸರು - Accident Case - ACCIDENT CASE

ಅಪಘಾತ ಪ್ರಕರಣವನ್ನು ಉದ್ದೇಶಪೂರಕವಲ್ಲದ ಕೊಲೆ ಪ್ರಕರಣ ಎಂದು ಬದಲಿಸಿರುವ ಚಾರ್ಜ್​ ಶೀಟ್​​ ಸಲ್ಲಿಸಿರುವ ಬಗ್ಗೆ ಸ್ವತಃ ಎಡಿಜಿಪಿ ಅಲೋಕ್​ ಕುಮಾರ್​ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.​​

Mysuru Cirlcle
ಮೈಸೂರು ಸರ್ಕಲ್​ (ETV Bharat)
author img

By ETV Bharat Karnataka Team

Published : Jul 17, 2024, 6:12 PM IST

ಮೈಸೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣರಾಗಿದ್ದ ಕಾರು ಚಾಲಕನ ವಿರುದ್ಧ ದಾಖಲಾಗಿದ್ದ ಅಪಘಾತ ಪ್ರಕರಣವನ್ನು ಎಡಿಜಿಪಿ ಅಲೋಕ್‌ ಕುಮಾರ್‌ ಸೂಚನೆ ಮೇರೆಗೆ ಉದ್ದೇಶಪೂರಕವಲ್ಲದ ಕೊಲೆ ಪ್ರಕರಣ ಎಂದು ಪೊಲೀಸರು ಚಾರ್ಜ್​ಶೀಟ್‌ ಬದಲಿಸಿ ಕೋರ್ಟ್​ಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ವತಃ ಎಡಿಜಿಪಿ ಅಲೋಕ್‌ ಕುಮಾರ್‌ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಏನಿದು ಪ್ರಕರಣ?: ಏಪ್ರಿಲ್​ 14 ರಂದು ಮೈಸೂರು ವಿಶ್ವವಿದ್ಯಾಲಯದ ಬಳಿಯ ಚದುರಂಗ ರಸ್ತೆಯ, ಆಯುಷು ಸಂಸ್ಥೆಯ ಬಳಿ ಕಾರು, ಸ್ಕೂಟರ್‌ ಹಾಗೂ ಬೈಕ್‌ ನಡುವೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಸ್ಕೂಟರ್​ನಲ್ಲಿದ್ದ ಮೈಸೂರು ನಗರದ ಉಲ್ಲಾಸ್‌, ಕೇರಳ ಮೂಲದ ಶಿವಾನಿ ಎಂಬ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇವರಿಬ್ಬರು ಒಂದೇ ಸ್ಕೂಟರ್​ನಲ್ಲಿ ಇದ್ದರು. ಮತ್ತೊಬ್ಬ ಬೈಕ್‌ ಸವಾರ ಮಹಾದೇವ ಸ್ವಾಮಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ಸ್ಕೂಟರ್‌ ಹಾಗೂ ಬೈಕ್‌ ಸವಾರರಿಗೆ ಪಾನಮತ್ತನಾಗಿದ್ದ ಕಾರು ಚಾಲಕ ಡಿಕ್ಕಿ ಹೊಡೆದಿದ್ದ.

ಈ ಸಂಬಂಧ ನಗರದ ವಿವಿ ಪುರಂ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್‌ ಕುಮಾರ್‌, ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದರು. ಆಗ ಅಪಘಾತ ಮಾಡಿದ ಕಾರು ಚಾಲಕ ಪಾನಮತ್ತನಾಗಿದ್ದ ಎಂಬ ವರದಿ ಬಂದಿದೆ ಎಂದು ಸ್ಥಳೀಯ ಸಂಚಾರಿ ಪೊಲೀಸರು ಎಡಿಜಿಪಿಗೆ ಮಾಹಿತಿ ನೀಡಿದ್ದರು.

ನಂತರ ಎಡಿಜಿಪಿ ಅಲೋಕ್‌ ಕುಮಾರ್‌ ಅವರ ಸೂಚನೆ ಮೇರೆಗೆ ಈ ಪ್ರಕರಣವನ್ನು ಉದ್ದೇಶಪೂರಕವಲ್ಲದ ಕೊಲೆ ಪ್ರಕರಣ ಎಂದು ಚಾರ್ಜ್​ ಶೀಟ್‌ ಸಲ್ಲಿಸುವಂತೆ ಸೂಚಿಸಿದ್ದರು. ಈ ಪ್ರಕರಣದಲ್ಲಿ ಕಾರು ಚಾಲಕ ಅಜಾಗರೂಕತೆ ಮತ್ತು ಮದ್ಯ ಸೇವನೆ ಸೇರಿದಂತೆ ಇತರ ಸಾಕ್ಷ್ಯಗಳು ಸರಿಯಾಗಿದ್ದರೆ ಕಾರು ಚಾಲಕನಿಗೆ 10 ವರ್ಷ ಶಿಕ್ಷೆಯಾಗಲಿದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಮೊಬೈಲ್​ ಟಾರ್ಚ್ ಆನ್ ಮಾಡುವ ಭರದಲ್ಲಿ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ ಕಳ್ಳ - thief called emergency services

ETV Bharat Logo

Copyright © 2024 Ushodaya Enterprises Pvt. Ltd., All Rights Reserved.