ETV Bharat / state

ರಾಜ Vs ಸಾಮಾನ್ಯ; ಸಿಎಂ ತವರಲ್ಲಿ ಹೇಗಿದೆ ಸೋಲು-ಗೆಲುವಿನ ಲೆಕ್ಕಾಚಾರ? - MYSURU KODAGU CONSTITUENCY

author img

By ETV Bharat Karnataka Team

Published : Jun 2, 2024, 1:41 PM IST

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜ ವರ್ಸಸ್ ಸಾಮಾನ್ಯ ಪ್ರಜೆ ಮಧ್ಯೆ ಹಣಾಹಣೆ ಇದೆ. ತವರು ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತು ಸಿಎಂ ಪ್ರಚಾರ ನಡೆಸಿದ್ದರು. ಈ ಮಧ್ಯೆ ರಾಜವಂಶಸ್ಥರ ಕೊಡುಗೆಗಳು, ಮೋದಿ ಅಲೆ ಬಿಜೆಪಿ ಮತಗಳನ್ನು ಕ್ರೋಢೀಕರಿಸುತ್ತಾ ಎಂಬುದು ಎರಡೇ ದಿನದಲ್ಲಿ ಗೊತ್ತಾಗಲಿದೆ.

ಯದುವೀರ್ ಒಡೆಯರ್, ಎಂ ಲಕ್ಷ್ಮಣ್
ಯದುವೀರ್ ಒಡೆಯರ್, ಎಂ ಲಕ್ಷ್ಮಣ್ (ETV Bharat)

ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ. ಸಿಎಂ ಸ್ಥಾನದಲ್ಲಿರುವುದರಿಂದ ಕ್ಷೇತ್ರ ಗೆಲ್ಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಮೇಲಿದೆ. ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ ಪತಾಕೆ ಹಾರಿಸಲು ರಾಜವಂಶಸ್ಥರಿಗೆ ಬಿಜೆಪಿ ಮಣೆ ಹಾಕಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಎಂ ಲಕ್ಷ್ಮಣ್ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಸೋಲು-ಗೆಲುವಿನ ವಿಶ್ಲೇಷಣೆ ನಡೆಯುತ್ತಿದೆ. ಎರಡು ಪಕ್ಷಗಳು ಗೆಲುವಿನ ವಿಶ್ವಾಸದಲ್ಲಿವೆ. ಹಾಗಾದರೆ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ ಅನ್ನೋದನ್ನು ನೋಡೋಣ..

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಕ್ಷೇತ್ರ ಪುನರ್‌ ವಿಂಗಡನೆಗೂ ಮುನ್ನ ಇದು ಕಾಂಗ್ರೆಸ್​​ನ ಭದ್ರಕೋಟೆಯಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. 2014 ರಿಂದ ಪ್ರತಾಪ್ ಸಿಂಹ ಎರಡು ಬಾರಿ ಬಿಜೆಪಿ ಸಂಸದರಾಗಿದ್ದರು. ಆದರೆ ಈ ಬಾರಿ ಬಿಜೆಪಿ ರಾಜವಂಶಸ್ಥರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್​​ನಿಂದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್‌ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯದುವೀರ್‌ ಒಡೆಯರ್‌ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದಾರೆ.

ಯದುವೀರ್ ಒಡೆಯರ್
ಯದುವೀರ್ ಒಡೆಯರ್ (ETV Bharat)

ರಾಜವಂಶಸ್ಥರ ಕೈ ಹಿಡಿತಾರಾ ಮತದಾರ?: ಮೊದಲ ಬಾರಿಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಮೈಸೂರಿಗೆ ರಾಜವಂಶಸ್ಥರು ನೀಡಿರುವ ಕೊಡುಗೆಗಳು ಮತ್ತು ಅವರ ವರ್ಚಸ್ಸು ಇಲ್ಲಿ ಪರಿಣಾಮ ಬೀರಲಿವೆ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಬಿಜೆಪಿ ಹಾಗೂ ಜೆಡಿಎಸ್‌ ಮತಗಳ ಬೆಂಬಲದೊಂದಿಗೆ ಪ್ರಚಾರದ ಸಮಯದಲ್ಲಿ ಯುವ ಜನರನ್ನ ಸೆಳೆಯುವಲ್ಲಿ ಮಹಾರಾಜರು ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಗೆಲುವಿನ ನಂತರ ಮೈಸೂರನ್ನು ಪ್ರವಾಸಿ ತಾಣವಾಗಿ ಮಾಡುವ ಚಿಂತನೆ ಸೇರಿದಂತೆ ಹಲವು ಭರವಸೆ ನೀಡಿದ್ದರು. ಜೊತೆಗೆ ಚುನಾವಣಾ ಪ್ರಚಾರದಲ್ಲಿ ಯುವ ಜನರೊಂದಿಗೆ ನಡೆಸಿದ ಸಂವಾದ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಕೆಲಸ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ ಮೋದಿ ಅಲೆ ಜೊತೆಗೆ ಜೆಡಿಎಸ್ ಬಲದಿಂದ ಬಿಜೆಪಿ ಹ್ಯಾಟ್ರಿಕ್ ಸಾಧಿಸಲಿದೆ ಎನ್ನುವುದು ಕಮಲ ಪಾಳೆಯದಲ್ಲಿನ ಲೆಕ್ಕಾಚಾರ.

ಇದನ್ನೂ ಓದಿ: 3ನೇ ಸಲವೂ ಎನ್​​ಡಿಎ ಅಧಿಕಾರಕ್ಕೆ ಬರುತ್ತೆ: ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳು!, ಅಷ್ಟಕ್ಕೂ NDA 400 ಸ್ಥಾನ ಗೆಲ್ಲುತ್ತಾ? - exit poll

ಒಕ್ಕಲಿಗ ಮತಗಳು ನಿರ್ಣಾಯಕ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸಿಎಂ ತವರು ಜಿಲ್ಲೆ. ಜೊತೆಗೆ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಜನ ಕಾಂಗ್ರೆಸ್‌ ಶಾಸಕರಿದ್ದು, ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರ ಮಾಡಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರಿಂದ ಇಲ್ಲಿ ಒಕ್ಕಲಿಗ ಸಮುದಾಯದ ಮತಗಳು ವಿಭಜನೆ ಆಗಿವೆ. ರಾಜ v/s ಸಾಮಾನ್ಯ ಪ್ರಜೆ ಎಂಬ ಕಾಂಗ್ರೆಸ್ ಪ್ರಚಾರವು ಬಿಜೆಪಿಯ ಜಯಕ್ಕೆ ತೊಡಕಾಗಬಹುದು ಎಂದು ಹೇಳಲಾಗುತ್ತಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 2019 ರಲ್ಲಿ 66.96 ರಷ್ಟು ಮತದಾನವಾಗಿದ್ದರೆ, ಈ ಬಾರಿ 69.21 ರಷ್ಟು ಮತದಾನವಾಗಿದೆ. ಈ ಹೆಚ್ಚುವರಿ ಮತದಾನ ಯಾವ ಪಕ್ಷಕ್ಕೆ ಎಂಬುದೇ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಎಂ ಲಕ್ಷ್ಮಣ್
ಎಂ ಲಕ್ಷ್ಮಣ್ (ETV Bharat)

47 ವರ್ಷಗಳ ಬಳಿಕ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್: ಒಕ್ಕಲಿಗ ಅಭ್ಯರ್ಥಿ ಎಂ.ಲಕ್ಷ್ಮಣ್​ಗೆ ಈ ಬಾರಿ ಸಿಎಂ ಟಿಕೆಟ್‌ ಕೊಡಿಸಿದ್ದಾರೆ. ಅಂತೆಯೇ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಗೆಲುವಿಗಾಗಿ ಸತತ ಪ್ರಚಾರ ನಡೆಸಿದ್ದಾರೆ. ಜೊತೆಗೆ ಹೆಚ್ಚು ಶಾಸಕರನ್ನ ಹೊಂದಿರುವ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಲೀಡ್‌ ಪಡೆಯುವ ವಿಶ್ವಾಸದಲ್ಲಿ ಕಾಂಗ್ರೆಸ್​ ಇದೆ. 47 ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರಿಂದ ಆ ಸಮುದಾಯದ ಮತದಾರರು ಕೈ ಬೆಂಬಲಿಸುವ ಸಾಧ್ಯತೆ ಇದೆ. ಮೈಸೂರು-ಕೊಡಗು ಲೋಕಸಭೆಗೆ ದಲಿತ, ಮುಸ್ಲಿಂ, ಕುರುಬ ಹಾಗೂ ಇತರ ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ ಎಂಬ ಲೆಕ್ಕಾಚಾರ ಕಾಗ್ರೆಸ್‌ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ ಮಹಾರಾಜರ ಜನಪ್ರಿಯತೆ ಹಾಗೂ ಮೋದಿ ಅಲೆಯಿಂದ ಕಾಂಗ್ರೆಸ್​​ಗೆ ಹಿನ್ನಡೆ ಆಗಬಹುದು ಅಂತಾನೂ ಹೇಳಲಾಗುತ್ತಿದೆ. ಜೂನ್ 4ರ ಫಲಿತಾಂಶ ಇದಕ್ಕೆಲ್ಲ ಉತ್ತರವಾಗಲಿದೆ.

ಇದನ್ನೂ ಓದಿ: ಸಟ್ಟಾ ಬಜಾರ್​ ಭವಿಷ್ಯ​: ಬಿಜೆಪಿಗೆ ಆಗುತ್ತಾ ನಷ್ಟ, ಕಾಂಗ್ರೆಸ್​​​​​​​​​ಗೆ ಈ ಬಾರಿ ಎಷ್ಟು ಸ್ಥಾನ, ಪಲೋಡಿ ಲೆಕ್ಕಾಚಾರ ಇಲ್ಲಿದೆ ನೋಡಿ! - Palodi Satta Bazaar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.