ಮೈಸೂರು: ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡಿದ್ದ ವ್ಯಕ್ತಿಯ ಕೆಲಸದ ಬಿಲ್ ಪಾವತಿಸಲು ಲಂಚ ಸ್ವೀಕರಿಸುತ್ತಿದ್ದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಎಫ್ಡಿಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಿರಿಯಾಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಚೇರಿಯಲ್ಲಿ ಎಫ್ಡಿಎ ವಿಜಯ್ ಕುಮಾರ್ 30 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ದೂರುದಾರ ನಟೇಶ್ ಅವರು ತಾಲೂಕು ವ್ಯಾಪ್ತಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದರು. ಈ ಸಂಬಂಧ 4 ಲಕ್ಷ ರೂ. ಬಿಲ್ ಪಾವತಿಗೆ ಮನವಿ ಸಲ್ಲಿಸಿದ್ದರು. ಬಾಕಿ ಬಿಲ್ ಪಾವತಿಗಾಗಿ ಎಫ್ಡಿಎ ವಿಜಯ್ ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ನಟೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 30 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ಎಫ್ಡಿಎ ವಿಜಯಕುಮಾರ್ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಎಸ್ಪಿ ಸಜಿತ್ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ ಇನ್ಸ್‌ಪೆಕ್ಟರ್ ರವಿಕುಮಾರ, ರೂಪಶ್ರೀ, ಲೋಕೇಶ್ ಸಿಬ್ಬಂದಿಗಳಾದ ಮೋಹನ್ ಗೌಡ, ವೀರಭದ್ರ ಸ್ವಾಮಿ, ಆಶಾ, ತ್ರಿವೇಣಿ, ಪುಷ್ಪ ಲತಾ, ದಿನೇಶ್, ಲೋಕೇಶ್, ಪೃಥ್ವಿ, ಮೋಹನ್ ಗೌಡ, ಶೇಖರ್, ಲೋಕೇಶ್ ಅವರು ಭಾಗವಹಿಸಿದ್ದರು.
ಇದನ್ನೂಓದಿ:ಮಂಗಳೂರು:ಎಂಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರ ಬಂಧನ; ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ - MDMA Drug