ETV Bharat / state

ದಸರಾ: ತಾಲೀಮು ನಂತರ ಗಜಪಡೆಗೆ ನಿತ್ಯ ಮೆಟಲ್‌ ಡಿಟೆಕ್ಟರ್‌ ಪರೀಕ್ಷೆ, ಮೊದಲ ಬಾರಿ ಅಳವಡಿಕೆ - Dasara Gajapade

author img

By ETV Bharat Karnataka Team

Published : Aug 27, 2024, 5:51 PM IST

Updated : Aug 27, 2024, 6:49 PM IST

ದಸರಾ ಗಜಪಡೆಯನ್ನು ಜಂಬೂ ಸವಾರಿಗೆ ತಯಾರಿ ಮಾಡಲಾಗುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ದಸರಾ ಆನೆಗಳಿಗೆ ಪ್ರತಿನಿತ್ಯ ಮೆಟಲ್ ಡಿಟೆಕ್ಟರ್ ಪರೀಕ್ಷೆ ನಡೆಸಲಾಗುತ್ತಿದೆ.

ಗಜಪಡೆ ತಯಾರಿ
ಗಜಪಡೆ ತಯಾರಿ (ETV Bharat)

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಯನ್ನು ಜಂಬೂಸವಾರಿಗೆ ಸಿದ್ಧಗೊಳಿಸಲಾಗುತ್ತಿದೆ. ಆನೆಗಳಿಗೆ ನಿತ್ಯ ವಿಶೇಷ ಆಹಾರ, ಸ್ನಾನ ಮಾಡಿಸಿ ತಯಾರು ಮಾಡಲಾಗುತ್ತಿದೆ. ಜೊತೆಗೆ ಪ್ರತಿನಿತ್ಯ ತಾಲೀಮು ನಡೆಸಿದ ನಂತರ ಗಜಪಡೆಯ ಪಾದಗಳಿಗೆ ಮೆಟಲ್‌ ಡಿಟೆಕ್ಟರ್‌ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನ ಮೊದಲ ಬಾರಿಗೆ ದಸರಾದಲ್ಲಿ ಅಳವಡಿಸಲಾಗಿದೆ.

ನಿತ್ಯ ಅರಮನೆಯಿಂದ ಕೆ.ಆರ್.‌ವೃತ್ತ, ಸಯ್ಯಾಜ್ಜಿರಾವ್‌ ರಸ್ತೆ, ಸರ್ಕಲ್‌ ಮೂಲಕ ಬನ್ನಿಮಂಟಪದವರೆಗೆ ಬೆಳಗ್ಗೆ ಮತ್ತು ಸಂಜೆ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ನಡೆಸಲಾಗುತ್ತದೆ. ಈ ವೇಳೆ ಆನೆ ಪಾದಗಳಿಗೆ ಲೋಹದ ಚೂರು, ಕಬ್ಬಿಣದ ವಸ್ತುಗಳು ಸೇರಿಕೊಳ್ಳಬಹುದು ಎಂಬ ಹಿನ್ನೆಲೆಯಲ್ಲಿ ತಾಲೀಮು ಮುಗಿಸಿದ ನಂತರ ಮೆಟಲ್‌ ಡಿಟೆಕ್ಟರ್‌ ಮೂಲಕ ಅರಣ್ಯ ಇಲಾಖೆಯಿಂದ ಪರೀಕ್ಷಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್‌ ಡಾ. ಪ್ರಭುಗೌಡ, ದಸರಾ ಗಜಪಡೆ ತಾಲೀಮಿನ ವೇಳೆ ಏನಾದರೂ ಲೋಹದ ವಸ್ತುಗಳು ಆನೆ ಪಾದಗಳಿಗೆ ಸೇರಿಕೊಂಡರೇ, ದೊಡ್ಡ ಗಾಯ ಆಗಿ, ಆನೆ ನಡೆಯಲು ಆಗದ ಸ್ಥಿತಿಗೆ ತಲುಪುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿನಿತ್ಯ ತಾಲೀಮು ಮುಗಿಸಿ ಬರುವ ಗಜಪಡೆಯ ಪಾದಗಳನ್ನ ಮೆಟಲ್‌ ಡಿಟೆಕ್ಟರ್​ನಿಂದ ಪರೀಕ್ಷೆ ಮಾಡುವ ಪ್ರಕ್ರಿಯೆಯನ್ನ ಸೋಮವಾರದಿಂದ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೀಮು ನಂತರ ದಸರಾ ಗಜಪಡೆಗೆ ನಿತ್ಯ ಮೆಟಲ್‌ ಡಿಟೆಕ್ಟರ್‌ ಪರೀಕ್ಷೆ
ತಾಲೀಮು ನಂತರ ದಸರಾ ಗಜಪಡೆಗೆ ನಿತ್ಯ ಮೆಟಲ್‌ ಡಿಟೆಕ್ಟರ್‌ ಪರೀಕ್ಷೆ (ETV Bharat)

ಇದನ್ನೂ ಓದಿ: ಜಂಬೂ ಸವಾರಿಗೆ 18 ಆನೆಗಳು ಆಯ್ಕೆ - ಗಜಪಡೆ ಆಯ್ಕೆ ಹೇಗಿರುತ್ತೆ ಗೊತ್ತಾ? - How to Select Dasara Elephants

ನಾಳೆಯಿಂದ ಪೂರ್ಣ ಪ್ರಮಾಣದ ತಾಲೀಮು: ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಜೂ ಸವಾರಿ ಸಾಗುವ ಮಾರ್ಗದಲ್ಲಿ ಗಜಪಡೆಗೆ ನಿತ್ಯ ತಾಲೀಮು ನಡೆಯುತ್ತದೆ. ಆದರೆ ಸುಮಾರು 5.5 ಕಿ.ಮೀ ವ್ಯಾಪ್ತಿಯ ಪೂರ್ಣ ಪ್ರಮಾಣದ ತಾಲೀಮುನ್ನ ನಾಳೆಯಿಂದ ಆರಂಭಿಸಲಾಗುವುದು ಹಾಗೂ ಸೆಪ್ಟಂಬರ್‌ 2ನೇ ವಾರದಲ್ಲಿ ದಸರಾದ 2ನೇ ಹಂತದ ಗಜಪಡೆ ಮೈಸೂರು ಅರಮನೆಗೆ ಆಗಮಿಸಲಿದೆ ಎಂದು ಡಿಸಿಎಫ್‌ ತಿಳಿಸಿದರು.

ದಸರಾ ಗಜಪಡೆಗೆ ಸ್ನಾನ (ETV Bharat)

ಕಂಜನ್‌ ಆನೆಗೆ ವಿ‍ಶ್ರಾಂತಿ: ಕಳೆದ ಶನಿವಾರ ದಸರಾ ಗಜಪಡೆಯ ಮೊದಲ ಹಂತದ 9 ಆನೆಗಳನ್ನ ತೂಕ ಹಾಕಲಾಗಿದೆ. ಈ ವೇಳೆ ಕಂಜನ್‌ ಆನೆ ಕುಂಟುತ್ತಾ ಸಾಗಿದ್ದು, ಅರಮನೆ ಆವರಣದಲ್ಲಿ ಕಂಜನ್‌ ಆನೆಯನ್ನ ತಪಾಸಣೆಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಜನ್‌ ಆನೆಗೆ ತಾಲೀಮಿನಿಂದ ವಿಶ್ರಾಂತಿ ನೀಡಿ, ಎಲ್ಲಾ ರೀತಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಶು ವೈದ್ಯ ಮುಜೀರ್‌ ಮಾಹಿತಿ ನೀಡಿದರು.

ಏಕಲವ್ಯ ಹಾಗೂ ಭೀಮ ಆನೆಗೆ ಮಜ್ಜನ: ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿರುವ ಅಭಿಮನ್ಯು ನೇತೃತ್ವದ 9 ಗಜಪಡೆಯನ್ನು ದಸರಾ ಜಂಬೂ ಸವಾರಿಗೆ ತಯಾರಿ ಮಾಡಲಾಗುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ದಸರಾದಲ್ಲಿ ಏಕಲವ್ಯ ಹಾಗೂ ಭೀಮ ಆನೆಗೆ ಪಾಲ್ಗೊಳ್ಳಲಿದ್ದು, ಅವುಗಳಿಗೆ ಮಜ್ಜನ ಮಾಡಿಸುತ್ತಿರುವ ವಿಡಿಯೋ ಇಲ್ಲಿದೆ. ಪ್ರತಿನಿತ್ಯ ತಾಲೀಮು ಮಾಡಿದ ನಂತರ ಎಲ್ಲಾ ಆನೆಗಳನ್ನ ಸಮೀಪದಲ್ಲಿರುವ ನೀರಿನ ಸ್ಥಳದಲ್ಲಿ ಸ್ನಾನ ಮಾಡಿಸಲಾಗುತ್ತದೆ. ಆ ಮೂಲಕ ದಸರಾ ಗಜಪಡೆಯನ್ನ ಜಂಬೂಸವಾರಿಗೆ ಸಿದ್ಧಗೊಳಿಸುತ್ತಾರೆ.

ಇದನ್ನೂ ಓದಿ: ಮೈಸೂರಿನ ರಾಜ ಬೀದಿಗಳಲ್ಲಿ ದಸರಾ ಆನೆಗಳ ಗಾಂಭೀರ್ಯದ ನಡಿಗೆ: ವಿಡಿಯೋ - Dasara Elephants walking

Last Updated : Aug 27, 2024, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.