ETV Bharat / state

ಪ್ರಯಾಣಿಕ ಸ್ನೇಹಿಯಾಗುವತ್ತ ಮೈಸೂರು ರೈಲ್ವೆ; ಕ್ಯೂಆರ್​ ಕೋಡ್​ ಆಧಾರಿತ ಟಿಕೆಟ್​ ವ್ಯವಸ್ಥೆ ಜಾರಿ - QR code in mysore Railway - QR CODE IN MYSORE RAILWAY

ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಯಿಂದಾಗಿ ಪ್ರಯಾಣಿಕರು ತಮ್ಮ ಮೊಬೈಲ್ ವ್ಯಾಲೆಟ್‌ಗಳು ಅಥವಾ ಯುಪಿಐ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಸುಲಭವಾಗಿ ಪಾವತಿ ಮಾಡಬಹುದು.

mysore Railway introduced QR Code for ticket buying
ಕ್ಯೂಆರ್​ ಕೋಡ್​ ಆಧಾರಿತ ಟಿಕೆಟ್​ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 27, 2024, 12:29 PM IST

ಮೈಸೂರು: ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಪ್ರಯಾಣಿಕರು ಸಾಮಾನ್ಯ ಟಿಕೆಟ್​, ಕಾಯ್ದಿರಿಸುವ ಟಿಕೆಟ್​​ ಫ್ಲಾಟ್​ಫಾರ್ಮ್​ ಟಿಕೆಟ್​ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆ ತಪ್ಪಿಸಿದೆ. ಪ್ರಯಾಣಿಕರ ಅನುಕೂಲತೆಗಾಗಿ ಕ್ಯೂ ಆರ್​ ಕೋಡ್​ ಆಧಾರಿತ ಟಿಕೆಟ್​​ ವ್ಯವಸ್ಥೆ ಜಾರಿಗೆ ತರಲಾಗಿದೆ.

ನಿಲ್ದಾಣದಲ್ಲಿ ಪ್ರಯಾಣಿಕರು ಸಾಮಾನ್ಯ ವರ್ಗದ ಟಿಕೆಟ್‌ಗಳನ್ನು ಮತ್ತು ಫ್ಲಾಟ್​ಫಾರ್ಮ್​ ಟಿಕೆಟ್‌ಗಳನ್ನು ಖರೀದಿಸುವ ವಿಧಾನದಲ್ಲಿ ಬದಲಾವಣೆ ತರುವ ಜೊತೆಗೆ ನವೀನ ಸೌಲಭ್ಯವು ಈಗ 81 ನಿಲ್ದಾಣಗಳಾದ್ಯಂತ 94 ಅನ್‌ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (ಯುಟಿಎಸ್) ಕೌಂಟರ್‌ಗಳಲ್ಲಿ ಲಭ್ಯವಿದೆ. ಈ ಕ್ಯೂ ಆರ್​ ಕೋಡ್​ ಆಧಾರಿತ ಟಿಕೆಟ್​ ಮೂಲಕ ಪ್ರಯಾಣಿಕರು ತಡೆರಹಿತ ಮತ್ತು ಅನುಕೂಲಕರ ಅನುಭವದ ಪ್ರಯಾಣ ಹೊಂದ ಬಹುದಾಗಿದೆ.

ಹಲವು ಕಡೆ ಟಿಕೆಟ್​ ವಿತರಣಾ ಯಂತ್ರ: ನಿಲ್ದಾಣದಲ್ಲಿ 25 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು (ಎಟಿವಿಎಂ) 12 ಸ್ಥಳಗಳಲ್ಲಿ ಕಾರ್ಯತಂತ್ರವಾಗಿ ಸ್ಥಾಪಿಸಲಾಗಿದೆ. ಪ್ರಯಾಣಿಕರು ಕಾಯ್ದಿರಿಸದ ಪ್ರಯಾಣದ ಟಿಕೆಟ್‌ಗಳು ಮತ್ತು ಪ್ಲಾಟ್​​ಫಾರ್ಮ್​ ಟಿಕೆಟ್​ಗಳನ್ನು ಸುಲಭವಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ಟಿಕೆಟ್ ಬುಕಿಂಗ್‌ ಹೆಚ್ಚಿಸುವ ಪ್ರಯತ್ನದಲ್ಲಿ, ನಾಲ್ಕು ನಿಲ್ದಾಣಗಳಲ್ಲಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ ( ಪಿಆರ್‌ಎಸ್) ಟಿಕೆಟ್ ಬುಕಿಂಗ್​​ಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಸೌಲಭ್ಯವನ್ನು ಸಹ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ.

ಯುಪಿಎ ಮೂಲಕ ಪಾವತಿ: ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಯಿಂದಾಗಿ ಪ್ರಯಾಣಿಕರು ತಮ್ಮ ಮೊಬೈಲ್ ವ್ಯಾಲೆಟ್‌ಗಳು ಅಥವಾ ಯುಪಿಐ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಸುಲಭವಾಗಿ ಪಾವತಿಗಳನ್ನು ಮಾಡಬಹುದು. ಪ್ರಯಾಣಿಕರಿಗೆ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಪಾವತಿಗಳನ್ನು ಮಾಡಲು ಮತ್ತು ಪಾವತಿ ದೃಢೀಕರಣದ ನಂತರ ಟಿಕೆಟ್‌ಗಳನನು ಸ್ವೀಕರಿಸಲು, ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈ ಉಪಕ್ರಮವು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ರೈಲ್ವೆ ಸಚಿವಾಲಯದ ಸಂಘಟಿತ ಪ್ರಯತ್ನಗಳ ಭಾಗವಾಗಿದೆ.

ಕ್ಯೂಆರ್ ಕೋಡ್ ಪಾವತಿ ಸೌಲಭ್ಯವು ಈಗ ಎಲ್ಲ ವಿಭಾಗೀಯ ಅಂಗಡಿಗಳು, ಆಹಾರ ಪ್ಲಾಜಾಗಳು, ಶೌಚಾಲಯಗಳ ಬಳಕೆಗೆ ಪಾವತಿ ಮಾಡಲು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚು ಉಪಯೋಗಕರವಾಗಿದೆ. ಈ ಬದಲಾವಣೆ ಸುಲಭವಾಗಿದ್ದು ಮತ್ತು ವಹಿವಾಟುಗಳನ್ನು ನಡೆಸಲು ಹೆಚ್ಚು ಅನುಕೂಲಕರವಾಗಿದೆ. ಪ್ರಯಾಣಿಕರ ಅನುಭವಗಳನ್ನು ಉನ್ನತೀಕರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ವಿಭಾಗವು ಮುಂದಿದೆ. ಕ್ಯೂಆರ್ ಕೋಡ್ ಸೌಲಭ್ಯವು ಈ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎನ್ನುತ್ತಾರೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ
ಶಿಲ್ಪಿ ಅಗರ್ವಾಲ್.

ಇದನ್ನೂ ಓದಿ: ಬೆಳಗಾವಿ: ರಥದ ಮೇಲಿನ ಬೆಳ್ಳಿ ಮೂರ್ತಿ ಬಿದ್ದು ಸ್ಥಳದಲ್ಲೇ ಬಾಲಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.