ETV Bharat / state

ಮತ್ತೆ ಮಂಡ್ಯದಿಂದಲೇ ನನ್ನ ರಾಜಕಾರಣ ಪುನರಾರಂಭ: ನನ್ನ ಉಸಿರಿರೋವರೆಗೂ ದರ್ಶನ್ ನನ್ನ ಮಗ: ಸುಮಲತಾ ಅಂಬರೀಶ್ - SUMALATA AMBARISH

ನನ್ನ ಉಸಿರಿರೋವರೆಗೂ ದರ್ಶನ್​ ನನ್ನ ಮಗನೇ, ಎಲ್ಲ ಆರೋಪಮುಕ್ತವಾಗಿ ಅವರು ಹೊರಬರುವ ನಂಬಿಕೆ ನನಗಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್​ ವಿಶ್ವಾಸ ವ್ಯಕ್ತಪಡಿಸಿದರು.

FORMER MP SUMALATHA AMBARISH
ಮಾಜಿ ಸಂಸದೆ ಸುಮಲತಾ ಅಂಬರೀಶ್ (ETV Bharat)
author img

By ETV Bharat Karnataka Team

Published : Nov 9, 2024, 2:40 PM IST

ಮಂಡ್ಯ: ಸಕ್ಕರೆನಾಡು ಮಂಡ್ಯಕ್ಕೆ ರೆಬಲ್ ಲೇಡಿ ಸುಮಲತಾ ಅಂಬರೀಶ್​ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ರಾಜಕೀಯವಾಗಿ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಇಂದು ಮತ್ತೆ ಮಂಡ್ಯದ ಚಾಮುಂಡೇಶ್ವರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಂಸದರ ಅನುದಾನದಡಿ 7 ಜನ ವಿಕಲಚೇತನರಿಗೆ ತಮ್ಮ ನಿವಾಸದ ಬಳಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದ್ದಾರೆ. ಈ ಮೂಲಕ ಮುಂದೆ ಮಂಡ್ಯದಿಂದಲೇ ರಾಜಕಾರಣ ಪುನಾರಂಭದ ಸೂಚನೆ ಕೊಟ್ಟಿದ್ದಾರೆ.

ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, "ಸ್ವಲ್ಪ ವಿಶ್ರಾಂತಿ ಬೇಕಿತ್ತು. ಹಾಗಾಗಿ ಪಾಸ್ ತೆಗೆದುಕೊಂಡಿದ್ದೆ. ಆದಷ್ಟು ಹಳ್ಳಿ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇನೆ. ಚುನಾವಣೆಯಲ್ಲಿ ಪ್ರಧಾನಿ ಮೋದಿ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟೆ. 5 ವರ್ಷ ನನಗಾಗಿ ಟೈಮ್​​ ಇರಲಿಲ್ಲ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಿದ್ದೇನೆ. ಜನವರಿ ಬಳಿಕ ಮಂಡ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಲಿದ್ದೇನೆ. ನನ್ನ ಅವಧಿಯಲ್ಲಿ ಆಗಿರುವ ಕೆಲಸದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ಅವಶ್ಯಕತೆ ಬಿದ್ದಾಗ ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ." ಎಂದು ಹೇಳಿದರು.

ಮಾಜಿ ಸಂಸದೆ ಸುಮಲತಾ ಅಂಬರೀಶ್ (ETV Bharat)

"ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು ಎಂದು ಹೈಕಮಾಂಡ್​ಗೆ ತಿಳಿಸಿದ್ದೇನೆ. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಿದ್ರೆ ಖಂಡಿತ ಕರೆಯುತ್ತಿದ್ದರು. ಮೈತ್ರಿ ಅಭ್ಯರ್ಥಿ ಇರುವುದರಿಂದ ಕರೆದಿಲ್ಲ. ಸದ್ಯಕ್ಕೆ ನಾನು ರೆಸ್ಟ್​ನಲ್ಲಿ ಇದ್ದೇನೆ. ಮಂಡ್ಯದಲ್ಲಿ ಮುಂದೆ ಕಾರ್ಯಕ್ರಮಕ್ಕೆ ಓಡಾಡುವ ಕೆಲಸ ಮಾಡುತ್ತೇನೆ. ಬಿಜೆಪಿ ಶಕ್ತಿ ಹೆಚ್ಚು ಮಾಡಬೇಕು ಎನ್ನುವ ಆಸೆ ಇದೆ ಎಂದು ತಿಳಿಸಿದ್ದೇನೆ.

ನಾನು ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ: ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, "ನಾನು ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಬೆಂಬಲಿಗರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಮೂರು ನಾಲ್ಕು ತಿಂಗಳಲ್ಲೇ ಎಲ್ಲ ಆಗಿಬಿಡಬೇಕು ಅಂತ ಏನಿಲ್ಲ. ನಮಗೂ ಟೈಮ್ ಬೇಕು, ಅವರಿಗೂ ಟೈಮ್ ಬೇಕು. ಹೀಗಾಗಿ ನಾನು ಯಾವುದನ್ನೂ ನೆಗೆಟಿವ್ ಆಗಿ ನೋಡುತ್ತಿಲ್ಲ. ಮತ್ತೆ ಮಂಡ್ಯದಲ್ಲೇ ನನ್ನ ರಾಜಕಾರಣ ಆರಂಭವಾಗುತ್ತೆ. ನನ್ನ ಮನೆ ಇಲ್ಲೇ ಇದೆ. ಮಂಡ್ಯದಲ್ಲೇ ಇದ್ದೇನೆ. ಜನವರಿ ನಂತರ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಬೇರೆಯವರು ಮಾತನಾಡುವುದನ್ನು ನಾವು ತಡೆಯಲು ಆಗಲ್ಲ. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಬಲ ಪಡಿಸಬೇಕು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಜೆಡಿಎಸ್ ಮೊದಲೇ ಇರುವಂತ ಪಕ್ಷ. ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸಬೇಕು" ಎಂದು ತಿಳಿಸಿದರು.

ದರ್ಶನ್ ಪತ್ನಿ ಜೊತೆ ಟಚ್‌ನಲ್ಲಿ ಇದ್ದೇನೆ: ನಟ ದರ್ಶನ್ ಭೇಟಿ ಕುರಿತು ಮಾತನಾಡಿ,"ದರ್ಶನ್ ಪತ್ನಿ ಜೊತೆ ಟಚ್‌ನಲ್ಲಿ ಇದ್ದೇನೆ. ದರ್ಶನ್ ಆರೋಗ್ಯ ಸುಧಾರಿಸಬೇಕಿದೆ. ದರ್ಶನ್​ಗೆ ಸಾಕಷ್ಟು ಚಾಲೆಂಜಸ್​ಗಳಿವೆ. ಎಲ್ಲ ಆರೋಪ ಮುಕ್ತವಾಗಿ ದರ್ಶನ್ ಹೊರಬರುವ ನಂಬಿಕೆ ಇದೆ. ನಮ್ಮ ಸಂಬಂಧ ಹಾಗೆ ಇದೆ. ನನ್ನ ಉಸಿರಿರೋವರೆಗೂ ದರ್ಶನ್ ನನ್ನ ಮಗನೇ. ಎಲ್ಲ ಒಳ್ಳೆಯದಾಗಬೇಕು ಅಂದುಕೊಳ್ಳುತ್ತಿದ್ದೇನೆ." ಎಂದು ಹೇಳಿದರು.

"ನಿಜ ಹೊರಬಂದು ನಿರಪರಾಧಿ ಆಗಬೇಕು ಎನ್ನುವುದು ನನ್ನ ಆಸೆ. ವಕೀಲರು ನಿಜಾಂಶ ಏನು ಎನ್ನುವುದನ್ನು ಸಾಬೀತು ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಎಲ್ಲ ಸರಿಯಾಗಿ, ಅವನು ಆಚೆ ಬರಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ" ಎಂದರು.

"ಬೆನ್ನು ನೋವು ತುಂಬಾ ಇದೆ ಆದರೆ ಸರ್ಜರಿಗೆ ಇಂಟ್ರಸ್ಟಿಲ್ಲ ಎನ್ನುವುದು ಗಮನಕ್ಕೆ ಬಂತು. ಸರ್ಜರಿ ಆದರೆ ರಿಕವರಿಗೆ ತುಂಬಾ ಸಮಯ ಬೇಕಾಗುತ್ತದೆ. ಸಿನಿಮಾ ಕ್ಷೇತ್ರದಲ್ಲೂ ಸಾಕಷ್ಟು ನಷ್ಟ ಆಗಿದೆ. ದರ್ಶನ್ ಬಳಿ ಸೆಕ್ಯೂರಿಟಿ ಇದೆ. ಫೋನ್ ಕೂಡ ಉಪಯೋಗಿಸುತ್ತಿಲ್ಲ. ದರ್ಶನ್ ಪತ್ನಿ ಅವರಿಂದ ಅಷ್ಟೇ ಮಾಹಿತಿ ಸಿಗುತ್ತಿದೆ. ದೇವರು ದರ್ಶನ್​ನನ್ನು ಕಾಪಾಡುವ ನಂಬಿಕೆ ಇದೆ ನನಗೆ. ಇಂಡಸ್ಟ್ರಿಗೆ ದರ್ಶನ್ ಬಿಗ್ಗೆಸ್ಟ್ ಪಿಲ್ಲರ್. ಲಾಸ್ಟ್ ಟೈಮ್ ಕಾಟೇರ ಸಿನಿಮಾ ಬಿಗ್ಗೆಸ್ಟ್ ಹಿಟ್​ ಆಗಿತ್ತು. ಇಂಡಸ್ಟ್ರಿ ದರ್ಶನ್ ಅವರನ್ನು ಕಾಯುತ್ತಿದೆ. ಪ್ರೊಡ್ಯೂಸರ್​ಗಳು ಕೂಡ ಇವರ ಮೇಲೆ ನಿಂತಿದ್ದಾರೆ. ಸಿನಿಮಾ ನಿಂತು ಇಂಡಸ್ಟ್ರಿಯ ಎಷ್ಟೋ ಜನರು ಕಷ್ಟದಲ್ಲಿದ್ದಾರೆ. ಇದು ಎಲ್ಲರಿಗೂ ನೋವಾಗಿರುವ ವಿಷಯ. ದರ್ಶನ್ ಮನಸ್ಸು ನನಗೆ ಗೊತ್ತು. ಒಳ್ಳೆಯ ಗುಣ ಇರುವ ವ್ಯಕ್ತಿ. ದರ್ಶನ್​ಗೆ ವಿಶಾಲ ಹೃದಯ ಇದೆ. ದರ್ಶನ್​ಗೆ ತಾಯಿಯಾಗಿ ನಾನು ಏನಾದರೂ ಹೇಳೋದಿದ್ದರೆ ಪರ್ಸನಲ್ ಆಗಿ ಹೇಳುತ್ತೇನೆ. ಮಾಧ್ಯಮಗಳ ಮುಂದೆ ಅಲ್ಲ. ದರ್ಶನ್ ಪರ ನಾನಂತೂ ಇದ್ದೇನೆ" ಎಂದರು.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಪರ ಸತತ 4ನೇ ದಿನವೂ ದೇವೇಗೌಡರಿಂದ ಪ್ರಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.