ETV Bharat / state

ಮುಡಾ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು - MUDA Former Commissioner Suspended - MUDA FORMER COMMISSIONER SUSPENDED

ತಾಂತ್ರಿಕ ಸಮಿತಿ ವರದಿಯಲ್ಲಿ ಮುಡಾ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರು ಗಂಭೀರ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದೆ. ಹೀಗಾಗಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅಮಾನತುಗೊಳಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

Vidhana Soudha
ವಿಧಾನ ಸೌಧ (ETV Bharat)
author img

By ETV Bharat Karnataka Team

Published : Sep 3, 2024, 7:19 AM IST

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಸೋಮವಾರ ಆದೇಶಿಸಿದೆ.

ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ವಿಚಾರ ಹೈ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿರುವ ಮಧ್ಯೆ ಜಿ.ಟಿ.ದಿನೇಶ್ ಕುಮಾರ್ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ.

2020-21ರ ಅವಧಿಯಲ್ಲಿ ಮುಡಾ ಆಯುಕ್ತರಾಗಿದ್ದಾಗ ಎಸಗಿರುವ ಗಂಭೀರ ಆರೋಪಗಳ ಸಂಬಂಧ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ್ದು, ಕಾಯ್ದೆ, ನಿಯಮ, ವಲಯ ನಿಯಮಾವಳಿ, ಸರ್ಕಾರದ ಆದೇಶಗಳು, ಸರ್ಕಾರದ ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಿ ನಿಯಮಬಾಹಿರವಾಗಿ ಕೈಗೊಂಡಿರುವ ಕ್ರಮಗಳನ್ನು ಕೈಗೊಂಡಿರುವುದನ್ನು ಪತ್ತೆಹಚ್ಚಿದೆ. ಈ ವರದಿಯ ಆಧಾರದಲ್ಲಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ತಾಂತ್ರಿಕ ಸಮಿತಿ ವರದಿಯ ಅಂಶಗಳು: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (KUDA) ಕಾಯ್ದೆಯಂತೆ ಪ್ರಾಧಿಕಾರದ ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾ ಮತ್ತು ಆಡಳಿತಾಧಿಕಾರಿಯಾಗಿರುತ್ತಾರೆ. ಅವರು ಸಭೆಗೆ ಮಂಡಿಸಲಾದ ಬಹುತೇಕ ವಿಷಯಗಳಲ್ಲಿ ಸ್ಪಷ್ಟ ಅಭಿಪ್ರಾಯವನ್ನು ಟಿಪ್ಪಣಿಯಲ್ಲಿ ದಾಖಲಿಸಿ ಮಂಡಿಸದೇ ಇರುವುದು ಮತ್ತು ಸರ್ಕಾರದಿಂದ ನೀಡಲಾದ ನಿರ್ದೇಶನಗಳನ್ನು ಪಾಲಿಸದೇ ಇರುವುದು ಕಂಡುಬಂದಿದೆ.

KUDAದಲ್ಲಿ ಪ್ರಾಧಿಕಾರ ಅಭಿವೃದ್ಧಿ ಯೋಜನೆ ಪ್ರದೇಶದ ಹೊರಗೆ ನಿಯಮಾನುಸಾರ ಭೂಸ್ವಾಧೀನಪಡಿಸಿಕೊಳ್ಳದೇ ಸರ್ಕಾರದಿಂದ ಪೂರ್ವಾನುಮೋದನೆ ಪಡೆಯದೇ ಅಕ್ಕಪಕ್ಕದ ಜಮೀನುಗಳಲ್ಲಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ತಾಂತ್ರಿಕ ಶಾಖೆಯಿಂದ ನೀಡುವ ವರದಿ ಆಧಾರದ ಮೇಲೆ ಬದಲಿ ನಿವೇಶನ ಮಂಜೂರಾತಿಗಾಗಿ ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸು ಮಾಡಿ ಕ್ರಮವಹಿಸಿದ್ದಾರೆ.‌

ಅಭಿವೃದ್ಧಿಪಡಿಸಿದ ಹಳೇ ಬಡಾವಣೆಗಳಲ್ಲಿ ಭೂಸ್ವಾಧೀನಪಡಿಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಿ ನಿವೇಶನಗಳ ಹಂಚಿಕೆಯನ್ನು ಪೂರ್ಣಗೊಳಿಸಿದ ಎಷ್ಟೋ ವರ್ಷಗಳ ನಂತರ ಭೂ ಪರಿಹಾರ ಮೊತ್ತ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಕಡತಗಳನ್ನು ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸ ಮಾಡಿರುವುದು ಗೊತ್ತಾಗಿದೆ.

KUDA (Allotment of sites) Rules 1997 ಉಲ್ಲಂಘಿಸಿ ಬದಲಿ ನಿವೇಶನ ಮಂಜೂರಾತಿಗಾಗಿ ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಪ್ರಾಧಿಕಾರ ಸಾಮಾನ್ಯ ಸಭೆಯಲ್ಲಿ ಈ ಹಿಂದೆ ನಿರ್ಮಿಸಿರುವ ಬಡಾವಣೆಗಳಲ್ಲಿ ಭೂಸ್ವಾಧೀನಪಡಿಸಿಕೊಳ್ಳದೇ ಬಡಾವಣೆ ನಿರ್ಮಿಸಿರುವ ಬಗ್ಗೆ ಕೆಲವೊಂದು ನಿರ್ಣಯಗಳನ್ನು ಕೈಗೊಂಡಿದೆ. ಈ ನಿರ್ಣಯಗಳನ್ನು ಉಲ್ಲಂಘಿಸಿ ಸಭೆಯ ಗಮನಕ್ಕೆ ತರದೇ ಪ್ರಕರಣವಾರು ಬದಲಿ ನಿವೇಶನ, ತುಂಡು ಭೂಮಿ ಮಂಜೂರಾತಿಗಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ಕಂಡುಬಂದಿದೆ‌. ಅದೇ ದಿನಾಂಕದ ನಿರ್ಣಯದಂತೆ ಪ್ರಾಧಿಕಾರವು ವಿವಿಧ ಉಪಯೋಗಗಳಿಗೆ ಬಳಸಿಕೊಂಡಿರುವ ಜಮೀನಿನ ಬದಲಿಯಾಗಿ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ 50:50ರ ಅನುಪಾತದ ನಿಯಮಗಳನ್ವಯ ನೀಡುವ ಬಗ್ಗೆ, ಪ್ರಾಧಿಕಾರದ ಸಭೆಗೆ ಮಂಡಿಸಿರುವುದು ಕಂಡುಬಂದಿದೆ. ಇದು ನಿಯಮಗಳ ಉಲ್ಲಂಘನೆಯಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

50:50ರ ಅನುಪಾತದ ನಿಯಮ 30.07.2009ರಿಂದ ಜಾರಿಗೆ ಬಂದಿದ್ದು, ನಿವೇಶನ ಹಂಚಿಕೆಯನ್ನು ಲಾಟರಿ ಮುಖಾಂತರ ಭೂಸ್ವಾಧೀನಪಡಿಸಿಕೊಂಡ ಬಡಾವಣೆಯಲ್ಲಿಯೇ ಮಾಡಬೇಕು ಎಂಬ ಅವಕಾಶವಿದೆ. ಹೊಸದಾಗಿ ಕೈಗೊಳ್ಳುವ ವಸತಿ ಯೋಜನೆಗಳಿಗೆ ಸದರಿ ನಿಯಮಗಳು ಭವಿಷ್ಯವರ್ತಿಯಾಗಿ ಅನ್ವಯಿಸುವುದರಿಂದ ಈಗಾಗಲೇ ಅಭಿವೃದ್ಧಿಪಡಿಸಿದ ಹಳೇ ಬಡಾವಣೆಗಳಿಗೆ 2009ರಿಂದ ಜಾರಿಗೆ ಬಂದಿರುವ 50:50 ಅನುಪಾತದ ನಿಯಮಗಳು ಅನ್ವಯವಾಗುವುದಿಲ್ಲವಾದ್ದರಿಂದ ಪ್ರಾಧಿಕಾರದಿಂದ ಬದಲಿ ನಿವೇಶನಗಳ ಮಂಜೂರಾತಿಗಾಗಿ 50:50ರ ಅನುಪಾತದಂತೆ ಕೈಗೊಂಡಿರುವ ಯಾವುದೇ ಕ್ರಮವು ನಿಯಮಬಾಹಿರವಾಗುತ್ತದೆ ಎಂದು ತಿಳಿಸಿದೆ.

ಪ್ರಾಧಿಕಾರದಲ್ಲಿಯೇ ನಿವೇಶನ ಹಂಚಿಕೆ ಕುರಿತು ಪೂರ್ಣ ಮಾಹಿತಿ ಲಭ್ಯವಿದ್ದರೂ, ಪರಿಶೀಲಿಸದೇ ನಿಯಮಬಾಹಿರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಈ ಮೂಲಕ ಕಾನೂನಾತ್ಮಕ ಗೊಂದಲಗಳಿಗೆ ಅವಕಾಶಗಳನ್ನು ಕಲ್ಪಿಸುತ್ತಿದೆ. ಇಂತಹ ನಿಯಮಬಾಹಿರ ಕ್ರಮಗಳನ್ನು ತಡೆಗಟ್ಟಲು ಪ್ರಾಧಿಕಾರ ಇಲ್ಲಿಯವರೆಗೆ ಕೈಗೊಂಡಿರುವ ಮತ್ತು ಅಭಿವೃದ್ಧಿಪಡಿಸಿರುವ ಅಭಿವೃದ್ಧಿ ಯೋಜನೆವಾರು ಭೂಸ್ವಾಧೀನಗೊಂಡಿರುವ ಜಮೀನುಗಳು, ರಚಿಸಲಾದ ನಿವೇಶನಗಳು, ಮೂಲೆ ನಿವೇಶನಗಳು, ಬಿಡಿ ನಿವೇಶನಗಳು, ತುಂಡು ಜಾಗ ಮತ್ತು ಬಾಕಿ ಉಳಿದ ನಿವೇಶನಗಳ ವಿವರಗಳನ್ನು ನಕ್ಷೆಯೊಂದಿಗೆ ಹಂಚಿಕೆ, ಹರಾಜು ಮತ್ತು ಇತರೆ ಪ್ರಕ್ರಿಯೆಗಳ ಸಂಬಂಧ ಯೋಜನೆವಾರು ಕಡತಗಳನ್ನು ಕಾಲಕಾಲಕ್ಕೆ ಸಿದ್ಧಪಡಿಸಿ ನಿರ್ವಹಿಸಿಲ್ಲ ಎಂದು ತಿಳಿಸಿದೆ.

ಹರಾಜಿಗಾಗಿ ಬಾಕಿಯಿರುವ ಮೂಲೆ, ಬಿಡಿ, ಮಧ್ಯಂತರ ನಿವೇಶನಗಳ ಮಾಹಿತಿಯು ಪ್ರತ್ಯೇಕವಾಗಿ ಯಾವುದೇ ಪುಸ್ತಕಗಳಲ್ಲಿ ನಮೂದಿಸಿಲ್ಲ. ಹರಾಜು, ಹಂಚಿಕೆಗಾಗಿ ಬಾಕಿ ಇರುವ ನಿವೇಶನಗಳ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಸುತ್ತೋಲೆಯಲ್ಲಿನ ಸೂಚನೆಯಂತೆ ವಾರ್ಷಿಕವಾಗಿ ಲಭ್ಯವಿರುವ ಬಿಡಿ ನಿವೇಶನಗಳ ಮಾಹಿತಿ ಸಿದ್ಧಪಡಿಸದೇ ಇರುವುದು. ಪ್ರಾಧಿಕಾರದ ಪರಿಶೀಲನೆಗೆ ಒಳಪಡಿಸಿ ಅನುಮೋದನೆ ಪಡೆಯದೇ ಇರುವುದು ಕಂಡುಬಂದಿದೆ. ಬಿಡಿ ನಿವೇಶನಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡದಿರುವುದು ಕಂಡುಬಂದಿದೆ. ಮತ್ತು ಕಾಯ್ದೆ, ನಿಯಮಗಳು ಹಾಗೂ ಸರ್ಕಾರದ ಸೂಚನೆಗಳಿಗೆ ವ್ಯತಿರಿಕ್ತವಾಗಿ ಕ್ರಮವಹಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಂತ್ರಿಕ ಸಮಿತಿಯ ವರದಿಯನ್ನು ಪರಿಶೀಲಿಸಿದಾಗ ಆಗಿನ ಆಯಕ್ತರು ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವ ಆರೋಪಗಳು ಮನವರಿಕೆಯಾಗಿದೆ. ಅವರು ಸರ್ಕಾರಿ ಸೇವೆಯಲ್ಲಿ ಮುಂದುವರೆದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್,​ ಸಾರ್ವಜನಿಕ ಆಡಳಿತದ ಪರಿಶುದ್ಧತೆಗಾಗಿ ನೋಡಬೇಕು: ದೂರುದಾರರ ಪರ ವಕೀಲರ ವಾದ; ಸೆ.9 ಕ್ಕೆ ವಿಚಾರಣೆ ಮುಂದೂಡಿಕೆ - Siddaramaiah Prosecution

ETV Bharat Logo

Copyright © 2025 Ushodaya Enterprises Pvt. Ltd., All Rights Reserved.