ETV Bharat / state

ಮುಡಾ ಪ್ರಕರಣ: ರಾಕೇಶ್‌ ಪಾಪಣ್ಣ ಮನೆ ಮೇಲಿನ 32 ಗಂಟೆಗಳ ಇಡಿ ದಾಳಿ ಅಂತ್ಯ

32 ಗಂಟೆಗಳ ಕಾಲ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿರುವ ಇಡಿ ಅಧಿಕಾರಿಗಳು ರಾಕೇಶ್​ ಪಾಪಣ್ಣ ಅವರ ಮನೆಯಿಂದ ಕೆಲವು ಪ್ರಮುಖ ದಾಲೆಗಳನ್ನು ಸಂಗ್ರಹಿಸಿದ್ದಾರೆ.

ED Raids
ಇಡಿ ದಾಳಿ (ETV Bharat)
author img

By ETV Bharat Karnataka Team

Published : Oct 30, 2024, 11:40 AM IST

ಮೈಸೂರು: ಮುಡಾ ಹಗರಣದ ತನಿಖೆ ಚುರುಗೊಳಿಸಿರುವ ಜಾರಿ ನಿರ್ದೇಶನಾಲಯ ಸೋಮವಾರದಿಂದ ಮೈಸೂರಿನ ಹಲವು ಕಡೆ ದಾಳಿ ನಡೆಸಿದೆ. ಈ ಮಧ್ಯ ಇನಕಲ್‌ ರಾಕೇಶ್‌ ಪಾಪಣ್ಣ ನಿವಾಸದಲ್ಲಿ 5 ಇಡಿ ಅಧಿಕಾರಿಗಳು ಸತತ 32 ಗಂಟೆಗಳ ಕಾಲ ಸುದೀರ್ಘ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಮುಡಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ 50:50 ಅನುಪಾತದ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಸುದೀರ್ಘ 29 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿ ಹಲವು ಮಹತ್ವದ ದಾಖಲಾತಿಗಳನ್ನು ಸಂಗ್ರಹಿಸಿದ್ದು, ಈ ಸಂಗ್ರಹವಾದ ಮಾಹಿತಿಗಳ ಆಧಾರದ ಮೇಲೆ ಮೈಸೂರಿನ ಹಲವು ಕಡೆ ಸೋಮವಾರದಿಂದ ಇಡಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.

ರಾಕೇಶ್‌ ಪಾಪಣ್ಣ ನಿವಾಸದಲ್ಲಿ ಇಡಿ ದಾಳಿ ಅಂತ್ಯ: ಮುಡಾ ಅಕ್ರಮದಲ್ಲಿ ದೊಡ್ಡ ಪ್ರಮಾಣದ ನಿವೇಶನಗಳನ್ನು ಬೇರೆ - ಬೇರೆ ಹೆಸರಿನಲ್ಲಿ ಪಡೆದು ಅವುಗಳನ್ನು ಅಕ್ರಮವಾಗಿ ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ಹಿನಕಲ್​ನ ರಾಕೇಶ್‌ ಪಾಪಣ್ಣ ಮನೆಯ ಮೇಲೆ ಸೋಮವಾರ ದಾಳಿ ನಡೆದಿತ್ತು. ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಐದು ಜನರ ಇಡಿ ಅಧಿಕಾರಿಗಳ ತಂಡ ಮಂಗಳವಾರ ಸಂಜೆ 6 ಗಂಟೆವರೆಗೆ ಸುದೀರ್ಘವಾಗಿ 32 ಗಂಟೆಗಳ ಕಾಲ ಮುಡಾಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಈ ಬಗ್ಗೆ ಇಡಿ ಅಧಿಕಾರಿಗಳು ಸಂಪೂರ್ಣ ದಾಖಲಾತಿಗಳನ್ನು ಪಡೆದು ದಾಳಿ ಅಂತ್ಯಗೊಳಿಸಿ ವಾಪಸ್‌ ಆಗಿದ್ದಾರೆ. ಈ ಸಂದರ್ಭ ರಾಕೇಶ್‌ ಪಾಪಣ್ಣ ಅವರಿಗೆ ಸಂಬಂಧಿಸಿದ ಹಲವು ದಾಖಲೆಗಳ ಮಾಹಿತಿಗಳನ್ನು ನೀಡುವಂತೆ ತಿಳಿಸಿ ಹೊರಟಿದ್ದಾರೆ.

ಈ ರಾಕೇಶ್‌ ಪಾಪಣ್ಣ ಕುಟುಂಬ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬದ ಪಾತ್ರದ ಬಗ್ಗೆ 50:50 ಅನುಪಾತದಲ್ಲಿ ಸಿಎಂ ಶಿಫಾರಸ್ಸಿನ ಬಗ್ಗೆ ಹಾಗೂ ಸಿಎಂ ಮಗ ಯತೀಂದ್ರ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ರಾಕೇಶ್‌ ಪಾಪಣ್ಣ ಅವರಿಂದ ಇಡಿ ಅಧಿಕಾರಿಗಳು ಮಾಹಿತಿ ಪಡೆದರು ಎಂಬ ಅಂಶ ಮೂಲಗಳಿಂದ ತಿಳಿದು ಬಂದಿದೆ.

ಮುಂದುವರೆದ ಬಿಲ್ಡರ್‌ ಕಚೇರಿ ಮೇಲಿನ ದಾಳಿ: ಜಾರಿ ನಿರ್ದೇಶನಾಲಯದ ಮತ್ತೊಂದು ತಂಡ ಮೈಸೂರಿನ ನ್ಯೂ ಕಾಂತರಾಜ್‌ ಅರಸು ರಸ್ತೆ, ಶ್ರೀರಾಂಪುರ, ಸೇರಿದಂತೆ ಬಿಲ್ಡರ್‌ ಜಯರಾಮ ಮನೆ, ಕಚೇರಿ ಮೇಲೆ ಸೋಮವಾರ ಸಂಜೆಯಿಂದ ದಾಳಿ ಮುಂದುವರದಿದೆ. ಮುಡಾ ಅಕ್ರಮದ ಬಗ್ಗೆ ಬಿಲ್ಡರ್‌ ಜಯರಾಮು​ಗೆ ಇರುವ ಸಂಬಂಧ ಏನು? ಹಾಗೂ ಹಿಂದಿನ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಆಪ್ತರಾಗಿರುವ ಜಯರಾಮು ಹಾಗೂ ದಿನೇಶ್‌ ಕುಮಾರ್‌ ನಡುವೆ ಯಾವ ರೀತಿ ವ್ಯವಹಾರ ಇತ್ತು. ಬದಲಿ ನಿವೇಶನ ಹಂಚಿಕೆ ಸಂಬಂಧ ಜಯರಾಮು ಪಾತ್ರವೇನು? ಹಿಂದಿನ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಆಪ್ತರಾಗಿರುವ ಬಿಲ್ಡರ್‌ ಜಯರಾಮು ಮೈಸೂರಿನಲ್ಲಿ ಎಲ್ಲೆಲ್ಲಿ ಬಡಾವಣೆ ನಿರ್ಮಾಣ ಮಾಡಿದ್ದಾರೆ? ಹಾಗೂ ಜಯರಾಮು ನಡೆಸುತ್ತಿರುವ ಶ್ರೀಕಂಠೇಶ್ವರ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ವ್ಯವಹಾರ ಹೇಗೆ ನಡೆಯುತ್ತದೆ? ಈ ಸೊಸೈಟಿಯಲ್ಲಿ ಬೇನಾಮಿ ಹಣ ಹೇಗೆ ಹೂಡಿಕೆಯಾಗಿದೆ? ಬದಲಿ ನಿವೇಶನದ ಅಕ್ರಮ ಹೇಗೆ ನಡೆದಿದೆ? ಎಂಬೆಲ್ಲ ವಿಚಾರಗಳ ಬಗ್ಗೆ ಇಡಿ ಅಧಿಕಾರಿಗಳ ತಂಡ ಇಂದು ಸಹ ತನಿಖೆ ಮುಂದುವರೆಸಿದೆ. ಈ ಬಗ್ಗೆ ಇಂಚಿಂಚು ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಡೆಯುತ್ತಿದ್ದಾರೆ. ಮಂಗಳವಾರ ರಾತ್ರಿಯೂ ದಾಳಿ ಮುಂದುವರೆದಿದೆ.

ಇದನ್ನೂ ಓದಿ: ಮುಡಾ - ವಾಲ್ಮೀಕಿ ಹಗರಣ ತಾರ್ಕಿಕ ಅಂತ್ಯ ಕಾಣುತ್ತವೆ : ಸಚಿವ ವಿ ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.