ETV Bharat / state

ಮುಡಾ ಹಗರಣ ಗಂಭೀರವಾದದ್ದು, ಸಿಬಿಐ ತನಿಖೆಗೆ ವಹಿಸಿ: ಸಂಸದ ಯದುವೀರ್ ಒಡೆಯರ್ - MP Yaduveer Wadiyar

ಸಂಸದ ಯದುವೀರ್ ಒಡೆಯರ್ ಅವರು ಮುಡಾ ಹಗರಣದ ಕುರಿತು ಮಾತನಾಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

mp-yaduveer-wadiyar
ಸಂಸದ ಯದುವೀರ್ ಒಡೆಯರ್ (ETV Bharat)
author img

By ETV Bharat Karnataka Team

Published : Jul 8, 2024, 5:35 PM IST

ಸಂಸದ ಯದುವೀರ್ ಒಡೆಯರ್ (ETV Bharat)

ಮೈಸೂರು : ಮುಡಾ ಹಗರಣ ಗಂಭೀರ ಪ್ರಕರಣ. ಆದ್ದರಿಂದ ಓಪನ್ ಅಥವಾ ಮುಕ್ತವಾಗಿ ತನಿಖೆ ಮಾಡಬೇಕಾಗಿದೆ ಹಾಗೂ ಈ ಹಗರಣದಲ್ಲಿ ಸಿಎಂ ಹೆಸರು ಕೇಳಿ ಬಂದಿದ್ದರಿಂದ ಮುಡಾ ಹಗರಣ ಸಿಬಿಐಗೆ ತನಿಖೆಗೆ ವಹಿಸಬೇಕು ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ.

ಇಂದು ತಮ್ಮ ಮೈಸೂರಿನ ಕಚೇರಿಯಲ್ಲಿ ಈಟಿವಿ ಭಾರತ್ ಜತೆ ಮಾತನಾಡಿದ ಅವರು, ಮುಡಾ ಹಗರಣ ಗಂಭೀರವಾದ ಪ್ರಕರಣ, ಇದನ್ನ ಮುಕ್ತ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಬೇಕು. ಬಿಜೆಪಿ ವರಿಷ್ಠರು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿಗೆ ಸಭೆ ಮಾಡುತ್ತೇನೆ : ಮೈಸೂರು - ಕೊಡಗು ಅಭಿವೃದ್ಧಿಗೆ ಈಗಾಗಲೇ ಕೊಡಗಿನಲ್ಲಿ ಸಭೆ ನಡೆಸಲಾಗಿದೆ. ಮೈಸೂರಿನಲ್ಲಿ ಹೊಸ ಜಿಲ್ಲಾಧಿಕಾರಿ ಬಂದಿದ್ದಾರೆ. ಹೀಗಾಗಿ ಅವರು ಸಭೆ ನಡೆಸಲು ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಇದರ ಜತೆಗೆ ರೈಲ್ವೆ ಯೋಜನೆಗಳು ಹಾಗೂ ಏರ್​ಪೋರ್ಟ್ ವಿಸ್ತೀರ್ಣದ ಬಗ್ಗೆ ಸಭೆ ನಡೆಸಲಾಗಿದೆ. ಇದರ ಜತೆಗೆ ಮೈಸೂರು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನ ತರುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಎರಡು ಜಿಲ್ಲೆಯಲ್ಲಿ ಕಚೇರಿ ತೆರೆಯುತ್ತೇನೆ : ಮುಂದಿನ ತಿಂಗಳು ಮುಡಾದಲ್ಲಿ ಸಂಸದರ ನೂತನ ಕಚೇರಿ ತೆರೆಯಲಾಗುವುದು ಹಾಗೂ ಈಗಾಗಲೇ ಕುವೆಂಪು ನಗರದಲ್ಲಿ ಕಚೇರಿಯಿದ್ದು, ಇದರ ಜತೆಗೆ ಮಡಿಕೇರಿಯಲ್ಲೂ ಸಹ ಕಚೇರಿ ತೆರೆಯುತ್ತೇನೆ. ಜನರಿಗೆ ಅನುಕೂಲವಾಗುವಂತೆ ಈ ಕಚೇರಿಗಳು ಕೆಲಸ ಮಾಡಲಿದ್ದು, ಯಾವುದೇ ಆದರೂ ಕಚೇರಿಯಲ್ಲಿ ನೇರವಾಗಿ ನನ್ನನ್ನ ಅಥವಾ ನಮ್ಮ ಕಚೇರಿಯ ಸಹಾಯಕರನ್ನ ಸಂಪರ್ಕಿಸಬಹುದು ಎಂದು ಹೇಳಿದ ಅವರು, ಮೈಸೂರು -ಕೊಡಗಿನ ಜನತೆಗೆ ಬಹಳಷ್ಟು ನಿರೀಕ್ಷೆಗಳಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ ಎಂದರು.

ಮೊದಲ ಬಾರಿಗೆ ಸಂಸದನಾಗಿ ಪಾರ್ಲಿಮೆಂಟ್​ಗೆ ಪ್ರವೇಶ ಮಾಡಿದ್ದು ಹೊಸ ಅನುಭವ ತಂದಿದೆ ಎಂದು ತಮ್ಮ ಹೊಸ ಅನುಭವದ ಬಗ್ಗೆ ಹೇಳಿಕೊಂಡರು.

ಇದನ್ನೂ ಓದಿ : ಮುಡಾ ಹಗರಣ ಸಿಬಿಐಗೆ ವಹಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ: ಪ್ರಲ್ಹಾದ್​ ಜೋಶಿ - Pralhad Joshi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.