ETV Bharat / state

ಮೈಸೂರಿನಿಂದ ವಿಮಾನ ಮಾರ್ಗ ವಿಸ್ತರಿಸುವಂತೆ ಕೇಂದ್ರ ಸಚಿವರಿಗೆ ಯದುವೀರ್ ಮನವಿ - MP Yaduveer Wadiyar

author img

By ETV Bharat Karnataka Team

Published : Sep 15, 2024, 9:51 PM IST

ಮೈಸೂರಿನಿಂದ ವಿಮಾನ ಮಾರ್ಗ ವಿಸ್ತರಿಸುವಂತೆ ಸಂಸದ ಯದುವೀರ್​​ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿಯಾಗಿ, ಮನವಿ ಮಾಡಿದ್ದಾರೆ.

yaduveer
ಕೇಂದ್ರ ಸಚಿವರನ್ನು ಭೇಟಿಯಾದ ಸಂಸದ ಯದುವೀರ್ (ETV Bharat)

ಮೈಸೂರು: ಮೈಸೂರು ವಿಮಾನ ನಿಲ್ದಾಣದಿಂದ ಹೊಸದಾಗಿ 5 ವಿಮಾನಗಳ ಮಾರ್ಗಗಳನ್ನು ವಿಸ್ತರಿಸುವಂತೆ ಕೋರಿ, ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡುಗೆ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.

ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರಿಯಾಗಿರುವ ಮೈಸೂರಿಗೆ ಪ್ರವಾಸೋದ್ಯಮ ಉದ್ಯಮವಾಗಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಮೈಸೂರಿನಿಂದ ಕೊಚ್ಚಿನ್, ಗೋವಾ, ಮುಂಬೈ, ಹೈದರಾಬಾದ್ ಹಾಗೂ ವಿಜಯವಾಡ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಬೇಕು ಎಂದು ಸಚಿವರನ್ನು ಭೇಟಿಯಾಗಿ ಸಂಸದರು ಮನವಿ ಮಾಡಿದ್ದಾರೆ.

ಪ್ರವಾಸೋದ್ಯಮ, ಆರ್ಥಿಕ ಮತ್ತು ಸರ್ವತ್ತೋಮುಖ ಬೆಳವಣಿಗೆಗೆ, ಮೈಸೂರು ವಿಮಾನ ನಿಲ್ದಾಣ ಸಮೀಪದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದ್ದಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ. ಸದ್ಯಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ 2 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಇದು ಸ್ಥಳೀಯರು, ಪ್ರವಾಸಿಗರು, ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ನಗರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣವಿದ್ದರೂ ವಿಮಾನಗಳೇ ಇಲ್ಲದ ಕಾರಣ ಉಪಯುಕ್ತವಾಗಿಲ್ಲ. ವಿಮಾನಗಳನ್ನು ರದ್ದು ಮಾಡಿರುವುದರಿಂದ ತೊಂದರೆಯಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಬಿಸಿ ತಟ್ಟಿದ್ದು, ಮೈಸೂರಿನ ಆರ್ಥಿಕ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದಿದ್ದಾರೆ.

ತಂಬಾಕು ಮಂಡಳಿ ಅಧ್ಯಕ್ಷರ ಭೇಟಿ: ಅಲ್ಲದೆ, ತಂಬಾಕು ಮಂಡಳಿಯ ಅಧ್ಯಕ್ಷ ಯಶವಂತ್ ಕುರ್ಮಾ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಧರ್ ಬಾಬು ಅವರನ್ನು ಸಂಸದ ಯದುವೀರ್ ಭೇಟಿಯಾಗಿ ತಂಬಾಕು ಬೆಳೆಯುವ ರೈತರ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಸಮಸ್ಯೆಗಳನ್ನು ಚರ್ಚಿಸಿ, ರೈತರ ಉಜ್ವಲ ಭವಿಷ್ಯಕ್ಕಾಗಿ, ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಂಧ್ರಪ್ರದೇಶ ಯುವ ಮೋರ್ಚಾ ಅಧ್ಯಕ್ಷ ವಂಶಿಮಿತ್ತ ಇದ್ದರು.

ಇದನ್ನೂ ಓದಿ: ಮೀಸಲಾತಿಯು ನಮ್ಮ ಸಂವಿಧಾನದ ಆತ್ಮಸಾಕ್ಷಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ - Jagdeep Dhankar on Reservation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.