ETV Bharat / state

20 ವರ್ಷದಲ್ಲಿ ನಾನೆಂದೂ ಮದ್ಯ ಹಂಚಿ ರಾಜಕೀಯ ಮಾಡಿಲ್ಲ: ಸಂಸದ ಸುಧಾಕರ್​ - MP K Sudhakar

ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರಿಗೆ ಮದ್ಯ ಹಂಚಿಕೆ ಆರೋಪದ ಬಗ್ಗೆ ಸಂಸದ ಡಾ. ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

author img

By ETV Bharat Karnataka Team

Published : Jul 8, 2024, 6:28 PM IST

Updated : Jul 8, 2024, 7:36 PM IST

sudhakar
ಸಂಸದ ಡಾ. ಕೆ.ಸುಧಾಕರ್ (ETV Bharat)
ಸಂಸದ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ (ETV Bharat)

ಚಿಕ್ಕಬಳ್ಳಾಪುರ: ''ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಮದ್ಯ ಹಂಚಿಕೆ ಮಾಡಿಲ್ಲ. ಮದ್ಯ ಹಂಚಿಕೆ ಮಾಡುವ ರಾಜಕೀಯ ನನಗೆ ಅವಶ್ಯಕತೆ ಇಲ್ಲ. ಈ ರೀತಿ ಮದ್ಯ ಹಂಚಿ ರಾಜಕೀಯ ಮಾಡುವುದು ತಪ್ಪು. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ'' ಎಂದು ಸಂಸದ ಡಾ. ಕೆ.ಸುಧಾಕರ್​ ಸ್ಪಷ್ಟನೆ ನೀಡಿದ್ದಾರೆ.

ನೆಲಮಂಗಲ ಬಳಿ ಭಾನುವಾರ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಸಂಸದ ಸುಧಾಕರ್​ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಆರೋಪ ವಿಚಾರ ಸಂಬಂಧ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ''ತಾಲೂಕಿನ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದಿಸಲು ನಾನು ಹಾಗೂ ಪ್ರತಿಪಕ್ಷದ ನಾಯಕ ಆರ್​. ಅಶೋಕ್​ ಅವರನ್ನು ಕರೆದಿದ್ದರು. ಎಲ್ಲ ಆಯೋಜನೆಯನ್ನು ಅವರೇ ಮಾಡಿದ್ದರು. ನಾವು ಅಲ್ಲಿಗೆ ಹೋಗಿ ಕಾರ್ಯಕ್ರಮ ಮುಗಿಸಿ ಬಂದಿದ್ದೇನೆ'' ಎಂದರು.

''ಅದಾದ ನಂತರದ ಅಲ್ಲಿ ನಡೆದ ವಿಚಾರದ ಬಗ್ಗೆ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಅದು ಆಯೋಜಿಸಿದವರು ಮಾಡಿದ್ದಾರಾ? ಅಥವಾ ಅಲ್ಲಿಗೆ ಬಂದವರು ಮದ್ಯ ಸೇವಿಸಿದ್ದರಾ ಎಂಬ ಮಾಹಿತಿ ನನಗಿಲ್ಲ. ನಮ್ಮ ಅಥವಾ ದಳ ಪಕ್ಷದ ಯಾರಾದರೂ ಕಾರ್ಯಕರ್ತರು ಹೀಗೆ ಮಾಡಿದ್ದರೆ, ಆಯೋಜನೆ ಮಾಡಿದ್ರೆ ಅದು ತಪ್ಪಾಗುತ್ತದೆ'' ಎಂದು ಹೇಳಿದರು.

''ಯಾಕೆಂದರೆ, ನಾನು 20 ವರ್ಷದ ರಾಜಕೀಯ ಜೀವನದಲ್ಲಿ ಮದ್ಯ ಹಂಚಿಕೆ ಮಾಡಿಲ್ಲ. ಚುನಾವಣೆಗೂ, ಕಾರ್ಯಕ್ರಮಕ್ಕೂ ಮದ್ಯ ಹಂಚಿಲ್ಲ. 20 ವರ್ಷದ ನನ್ನ ಇತಿಹಾಸದಿಂದಲೇ ನಿಮಗೆ ಅದು ತಿಳಿಯುತ್ತದೆ. ಈ ಒಂದು ಪ್ರಕರಣದಿಂದ ನನಗೂ ನೋವಾಗಿದೆ. ಯಾವುದೇ ಕಾರ್ಯಕ್ರಮ ಇರಲಿ, ಅಲ್ಲಿ ಮದ್ಯ ಕೊಡುವುದು ಅಕ್ಷಮ್ಯ ಅಪರಾಧ'' ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ ವಿತರಣೆ ಆರೋಪ - Liquor Distribution

Last Updated : Jul 8, 2024, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.