ETV Bharat / state

ಸುಳ್ಳು ಆರೋಪದಿಂದ ನಮ್ಮ ತಂದೆ ಮುಕ್ತರಾಗುತ್ತಾರೆ; ಸಂಸದ ಬಿ.ವೈ. ರಾಘವೇಂದ್ರ - B Y Raghavendra - B Y RAGHAVENDRA

ದುರದ್ದೇಶದಿಂದ ಮಹಿಳೆಯು ನಮ್ಮ ತಂದೆ ಯಡಿಯೂರಪ್ಪನವರ ವಿರುದ್ಧ ದೂರು ಕೊಟ್ಟು ಮುಜುಗರ ಉಂಟು ಮಾಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ (ETV Bharat)
author img

By ETV Bharat Karnataka Team

Published : Jun 15, 2024, 4:07 PM IST

Updated : Jun 15, 2024, 5:49 PM IST

ಸಂಸದ ಬಿ.ವೈ. ರಾಘವೇಂದ್ರ (ETV Bharat)

ಬೆಂಗಳೂರು: ಒಬ್ಬ ಹೆಣ್ಣು ಮಗಳು ಬೇರೆ ಬೇರೆ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ನಮ್ಮ ತಂದೆಯವರ ಮನೆಗೆ ಬಂದಿದ್ದರು. ಆದರೆ ದುರುದ್ದೇಶದಿಂದ ಆ ಮಹಿಳೆ ದೂರು ಕೊಟ್ಟು ಮುಜುಗರ ಮಾಡಿದ್ದಾರೆ. ಇದರಿಂದ ನಮ್ಮ ಇಡೀ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಿಗೆ ಬಹಳ‌ ನೋವುಂಟಾಗಿದೆ ಎಂದು ಸಂಸದ, ಬಿಎಸ್​ವೈ ಪುತ್ರ ಬಿ.ವೈ. ರಾಘವೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇದೆ. ಜಾಮೀನು ರೀತಿಯಲ್ಲಿ ನಮಗೆ ಅವಕಾಶ ಸಿಕ್ಕಿದೆ. ಬರುವಂತ ದಿನಗಲ್ಲಿ ಸತ್ಯಾಸತ್ಯತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸವನ್ನು ವಕೀಲರು ಮಾಡ್ತಾರೆ. ಸುಳ್ಳು ಆರೋಪದ ಮೂಲಕ ನಮ್ಮನ್ನು ರಾಜಕೀಯವಾಗಿ ಮಣಿಸುವಂತ ಪ್ರಕರಣಗಳು ನಮ್ಮ ಮೇಲೆ ಬಹಳಷ್ಟು ನಡೆದಿವೆ. ಆಗ ನಮಗೆ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ. ಈಗಲೂ ಸಹ ವಿಶ್ವಾಸ ಇದೆ, ಈ ಸುಳ್ಳು ಆರೋಪದಿಂದ ನಮ್ಮ ತಂದೆಯವರು ಮುಕ್ತರಾಗುತ್ತಾರೆ ಎಂದು ಹೇಳಿದರು.

ಯಡಿಯೂರಪ್ಪನವರು ಜೀವನ ಪೂರ್ತಿ ಹೋರಾಟದ ಮೂಲಕ ಈ ನಾಡಿಗೆ ನ್ಯಾಯ ಕೊಟ್ಟವರು. ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರಕೋಟೆಯಾಗಿ ಕರ್ನಾಟಕ ಇದೆ. ಹೀಗಾಗಿ ಇವರ ವಿರುದ್ಧ ಕಾಣದ ಕೈಗಳು ಈ ರೀತಿ ಮಾಡಿದ್ದಾರೆ. ನ್ಯಾಯಾಲಯ ನಮಗೆ ರಕ್ಷಣೆ ಕೊಟ್ಟಿದೆ. ಮುಂದೆ ನ್ಯಾಯಾಲಯಕ್ಕೂ‌ ನಾವು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಯಡಿಯೂರಪ್ಪ ಕೂಡ ಇಂದು ಮನೆಗೆ ಬರುತ್ತಿದ್ದಾರೆ ಎಂದರು.

ಇದನ್ನೂ ಓದಿ: ಪೋಕ್ಸೋ ಪ್ರಕರಣ: ಸೋಮವಾರ ವಿಚಾರಣೆಗೆ ಹೋಗುತ್ತಿದ್ದೇನೆ: ಮಾಜಿ ಸಿಎಂ ಯಡಿಯೂರಪ್ಪ - POCSO case

Last Updated : Jun 15, 2024, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.