ETV Bharat / state

ಮೈಸೂರಲ್ಲಿ ಮನೆಗೋಡೆ ಕುಸಿದು ತಾಯಿ ಸಾವು: 2 ವರ್ಷದ ಮಗು ಪಾರು: ಮಳೆಹಾನಿ ಪ್ರದೇಶಗಳಿಗೆ ಸಂಸದ ಯದುವೀರ್​ ಭೇಟಿ - MP Yaduveer visits - MP YADUVEER VISITS

ಮಳೆಯಿಂದ ಮನೆ ಕಳೆದುಕೊಂಡ ಜನರಿಗೆ ಪರಿಹಾರ ಒದಗಿಸಿ ಅವರಿಗೆ ತಕ್ಷಣ ತಾತ್ಕಾಲಿಕ ಆಶ್ರಯ ಕಲ್ಪಿಸುವಂತೆ ಸಂಸದರು ಯದುವೀರ್​ ಒಡೆಯರ್​ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

MP Yaduveer visits rain damaged areas
ಮಳೆಹಾನಿ ಪ್ರದೇಶಗಳಿಗೆ ಸಂಸದ ಯದುವೀರ್​ ಭೇಟಿ (ETV Bharat)
author img

By ETV Bharat Karnataka Team

Published : Jul 19, 2024, 9:09 PM IST

ಮೈಸೂರು: ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ತಾಯಿ ಸಾವನ್ನಪ್ಪಿದ್ದು, ಎರಡು ವರ್ಷದ ಮಗು ಅದೃಷ್ಟ ರೀತಿಯಲ್ಲಿ ಪಾರಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಮೈಸೂರು - ಕೊಡಗು ಸಂಸದ ಯದುವೀರ್‌ ಒಡೆಯರ್‌ ಭೇಟಿ ನೀಡಿ, ಪರಿಶೀಲಿಸಿದರು.

ಕೊಡಗು - ಮೈಸೂರು ಜಿಲ್ಲೆಯಲ್ಲಿ ಒಂದು ವಾರದಿಂದ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಹಳ್ಳ - ಕೊಳ್ಳಗಳು, ಜಲಾಶಯಗಳು, ನದಿಗಳು ತುಂಬಿ ಹರಿಯುತ್ತಿವೆ. ಶುಕ್ರವಾರ ಬೆಳಗ್ಗೆ ಕಗ್ಗಂಡಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು, ಸ್ಥಳದಲ್ಲೇ ಹೇಮಾವತಿ ಎಂಬ (22) ವರ್ಷದ ಮಹಿಳೆ ಸಾವನ್ನಪಿದ್ದಾರೆ. ಗೋಡೆ ಬೀಳುವಾಗ ತನ್ನ ಕೈಯ್ಯಲ್ಲಿದ್ದ ಎರಡು ವರ್ಷದ ಮಗುವನ್ನು ಮಹಿಳೆ ಹೊರಕ್ಕೆ ಎಸೆದಿದ್ದು, ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದೆ.

ಮಳೆ ಹಾನಿ ಪ್ರದೇಶಗಳಿಗೆ ಸಂಸದ ಭೇಟಿ: ಮೈಸೂರು - ಕೊಡಗು ಜಿಲ್ಲೆಯ ಸಂಸದ ಯದುವೀರ್‌ ಒಡೆಯರ್‌ ಇಂದು ಕೊಡಗು ಜಿಲ್ಲೆಯ ಮಡಿಕೇರಿ ಪಟ್ಟಣ, ಕುಶಾಲನಗರ, ಮತ್ತು ಹತ್ತೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟ ಆಲಿಸಿದರು. ಮಳೆಯಿಂದ ಮನೆ ಕಳೆದುಕೊಂಡ ಜನರಿಗೆ ಪರಿಹಾರ ಒದಗಿಸಿ ಅವರಿಗೆ ತಕ್ಷಣ ತಾತ್ಕಾಲಿಕ ಆಶ್ರಯಗಳನ್ನು ಕಲ್ಪಿಸುವಂತೆ ಸಂಸದರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಮಳೆಯಿಂದ ಹಾನಿಗೊಳಗಾದ ವ್ಯಕ್ತಿಗಳಿಗೆ ಎನ್.ಡಿ.ಎಂ.ಎಫ್.‌ ಮೂಲಕ ಪರಿಹಾರ ನೀಡುವಂತೆ ಸೂಚಿಸಿದರು.

ಕೆಆರ್​ಎಸ್‌ ನದಿ ಪಾತ್ರದಲ್ಲಿ ಪ್ರವಾಹದ ಮುನ್ನೆಚ್ಚರಿಕೆ: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆಆರ್​ಎಸ್​ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ಯಾವುದೇ ಕ್ಷಣದಲ್ಲಾದರೂ ನದಿಗೆ ಬಿಡಲಾಗುವುದು. ಆದ್ದರಿಂದ ಕಾವೇರಿ ಜಲಾನಯನ ಪ್ರದೇಶದ ನದಿ ಪಾತ್ರದ, ತಗ್ಗು ಪ್ರದೇಶದಲ್ಲಿ ಇರುವ ಸಾರ್ವಜನಿಕರು ತಮ್ಮ ಆಸ್ತಿ, ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಜಲಾಶಯದಿಂದ ಶುಕ್ರವಾರ ಸಂಜೆ 25 ಸಾವಿರ ಕ್ಯೂಸೆಕ್ಸ್‌ ನೀರನ್ನು ನದಿಗೆ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ಜತೆಗೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಕಾವೇರಿ ನೀರು ಹೆಚ್ಚಾದ ಕಾರಣ ದೋಣಿ ವಿಹಾರವನ್ನು ಶುಕ್ರವಾರದಿಂದ ಮುಂದಿನ ಆದೇಶ ಬರುವವವರೆಗೆ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಭಾಗ ಮೈಸೂರು ವನ್ಯಜೀವಿ ಉಪ ಅರಣ್ಯ ಸಂಕ್ಷಣಾಧಿಕಾರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ವಾಡಿಕೆಗಿಂತ ಶೇ.22ರಷ್ಟು ಹೆಚ್ಚು ಮಳೆ; 29 ಆರೈಕೆ ಕೇಂದ್ರಗಳ ಸ್ಥಾಪನೆ: ಸಚಿವ ಕೃಷ್ಣ ಬೈರೇಗೌಡ - Krishna Byre Gowda

ETV Bharat Logo

Copyright © 2025 Ushodaya Enterprises Pvt. Ltd., All Rights Reserved.