ETV Bharat / state

ಶಿರಾಡಿ ಘಾಟ್​ನಲ್ಲಿ ಕಾರು-ಕಂಟೇನರ್​ ಅಪಘಾತ: ತಾಯಿ, ಮಗ ಸ್ಥಳದಲ್ಲೇ ಸಾವು - Shirady Ghat accident

ಹಾಸನ ಜಿಲ್ಲೆಯಲ್ಲಿ ಬರುವ ಶಿರಾಡಿ ಘಾಟ್ ವ್ಯಾಪ್ತಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರು ಹಾಗೂ ಕಂಟೇನರ್​ ಲಾರಿ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿ, 6 ಜನ ಗಾಯಗೊಂಡಿದ್ದಾರೆ.

ಅಪಘಾತಕ್ಕೊಳಗಾದ ಕಾರು ಹಾಗೂ ಕಂಟೇನರ್​
ಅಪಘಾತಕ್ಕೊಳಗಾದ ಕಾರು ಹಾಗೂ ಕಂಟೇನರ್​ (ETV Bharat)
author img

By ETV Bharat Karnataka Team

Published : May 21, 2024, 1:06 PM IST

ಸಕಲೇಶಪುರ(ಹಾಸನ): ಶಿರಾಡಿ ಘಾಟ್ ವ್ಯಾಪ್ತಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇನ್ನೋವಾ ಕಾರು ಹಾಗೂ ಕಂಟೇನರ್​ ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಟ್ವಾಳ ಮೂಲದ ತಾಯಿ, ಮಗ ಸಾವನಪ್ಪಿದ್ದು, ಬಾಕಿ ಉಳಿದಿವರಿಗೆ ಗಂಭೀರ ಗಾಯಗಳಾಗಿದೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರನಹಳ್ಳಿ ಇಂದ ಸುಮಾರು ಎಂಟು ಕಿಲೋಮೀಟರ್ ದೂರದ ಶಿರಾಡಿ ಘಾಟಿನಲ್ಲಿ ಮಂಗಳವಾರ ಬೆಳಿಗ್ಗೆ 6.30ರ ಸಮಯದಲ್ಲಿ ಸಕಲೇಶಪುರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.

ಕಾರಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬೊಂಡಲ ಗ್ರಾಮದ ಶಬ್ಬೀರ್ ಅಹಮ್ಮದ್ ಎಂಬುವರ ಪತ್ನಿ ಶಫಿಯ (48) ಹಾಗೂ ಅವರ ಪುತ್ರ ಶಫೀಕ್ (21) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿ ಮಕ್ಕಳು ಸೇರಿ ಇನ್ನೂ 6 ಮಂದಿ ಇದ್ದು ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆವೊಂದಕ್ಕೆ ದಾಖಲು ಮಾಡಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇದನ್ನೂ ಓದಿ: ಸಾಲ ಮರಳಿಸಲು ವಿಳಂಬವಾಗಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹಬಂಧನ: ನೊಂದ ರೈತ ಆತ್ಮಹತ್ಯೆ - Belagavi farmer suicide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.