ETV Bharat / state

ತುಮಕೂರು ಲೋಕ ಅದಾಲತ್​ನಲ್ಲಿ 75ಕ್ಕೂ ಹೆಚ್ಚು ಕೌಟುಂಬಿಕ ಕಲಹಗಳ ಪ್ರಕರಣ ಇತ್ಯರ್ಥ - LOK ADALAT

ವಿಚ್ಛೇದನ ಪ್ರಕರಣಗಳ ರಾಜಿ ಸಂಧಾನ ಮಾಡಲು ಹೆಚ್ಚು ಕಾಳಜಿ ವಹಿಸುತ್ತಿರುವ ಜಿಲ್ಲಾ ನ್ಯಾಯಾಧೀಶರು ಈ ವರ್ಷ ತುಮಕೂರಿನಲ್ಲಿ ಲೋಕ್​​ ಅದಾಲತ್​ನಲ್ಲಿ 75ಕ್ಕೂ ಹೆಚ್ಚು ಕೌಟುಂಬಿಕ ಕಲಹಗಳ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

FAMILY DISPUTE CASES RESOLVED
ತುಮಕೂರು ನ್ಯಾಯಾಲಯ (ETV Bharat)
author img

By ETV Bharat Karnataka Team

Published : Dec 7, 2024, 10:46 AM IST

ತುಮಕೂರು: ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿದ್ದು ಅಂತಿಮ ಇತ್ಯರ್ಥಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದೆ. ನ್ಯಾಯಾಧೀಶರು ಇದನ್ನು ಇತ್ಯರ್ಥಪಡಿಸುವಲ್ಲಿ ಹೆಚ್ಚು ಗಮನಹರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ನ್ಯಾಯಾಧೀಶರುಗಳು ಹೆಚ್ಚು ಮುತುವರ್ಜಿ ವಹಿಸಿ ಪ್ರತಿ ಲೋಕ ಅದಾಲತ್​ನಲ್ಲಿ ಪ್ರಮುಖ ಅಂಶವಾಗಿ ಇದನ್ನು ಪರಿಗಣಿಸುತ್ತಿರುವುದು ಗಮನಾರ್ಹ ಅಂಶವಾಗಿದೆ.

ಈ ವರ್ಷ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಲಾಗಿದ್ದ ಲೋಕ್​​ ಅದಾಲತ್​ನಲ್ಲಿ ಕೌಟುಂಬಿಕ ಕಲಹಗಳ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರು, ಇದುವರೆಗೆ 75ಕ್ಕೂ ಹೆಚ್ಚು ಕೌಟುಂಬಿಕ ಕಲಹಗಳ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ಲೋಕ ಅದಾಲತ್​ನಲ್ಲಿ 75ಕ್ಕೂ ಹೆಚ್ಚು ಕೌಟುಂಬಿಕ ಕಲಹಗಳ ಪ್ರಕರಣ ಇತ್ಯರ್ಥ (ETV Bharat)

ಮೂರು ಲೋಕ ಅದಾಲತ್​ಗಳಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದವರನ್ನು ಮಾತುಕತೆ ಮೂಲಕ ಒಂದಾಗಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಈ​ ತಿಂಗಳಲ್ಲಿ ನಡೆಯಲಿರುವ ಲೋಕ ಅದಾಲತ್​ನಲ್ಲಿಯೂ ಕೂಡ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ದಂಪತಿಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜಿಲ್ಲಾ ನ್ಯಾಯಾಧೀಶರು ಎಲ್ಲ ರೀತಿಯ ತಯಾರಿಯನ್ನು ನಡೆಸಿದ್ದಾರೆ.

ಕೌಟುಂಬಿಕ ಕಲಹಗಳಲ್ಲಿ ಮೊದಲಿಗೆ ಕುಳಿತು ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿ ಇರುತ್ತಾರೆ. ಆದರೂ ಕೂಡ ಅಲ್ಲಿ ಸಮಸ್ಯೆ ಬಗೆಹರಿಯದೆ ನ್ಯಾಯಾಲಯಕ್ಕೆ ಬಂದಿರುತ್ತದೆ. ಆ ಸಂದರ್ಭದಲ್ಲಿ ಅಂತಹ ಪ್ರಕರಣಗಳನ್ನು ಪರಿಶೀಲಿಸಿ ಇಬ್ಬರನ್ನು ಕೂರಿಸಿ ಅವರ ಮಕ್ಕಳ ಭವಿಷ್ಯದ ಕುರಿತು ಅವರಿಗೆ ತಿಳುವಳಿಕೆ ನೀಡಲಾಗುವುದು. ಈ ಮೂಲಕ ಅವರಿಗೆ ಮನ ಪರಿವರ್ತನೆಯನ್ನು ಮಾಡಲಾಗುತ್ತಿದೆ.

ಬೇರೆ ರೀತಿಯ ಪ್ರಕರಣಗಳಾಗಿ ಹೋಲಿಕೆ ಮಾಡಿದರೆ ಈ ರೀತಿ ವೈವಾಹಿಕ ಬದುಕಿನ ಗೊಂದಲಗಳ ಬಗ್ಗೆ ರಾಜಿ ಸಂಧಾನ ಮಾಡುವುದು ಬಹಳ ಕಷ್ಟದ ಕೆಲಸವಾಗಿರುತ್ತದೆ. ಈ ರೀತಿ ವಿಚ್ಛೇದನ ಪ್ರಕರಣಗಳಲ್ಲಿ ಸುಮಾರು ಐದು ರೀತಿಯ ಪ್ರಕರಣಗಳು ಸೇರಿರುತ್ತವೆ. ಒಮ್ಮೆ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡರೆ ಐದು ಪ್ರಕರಣಗಳು ಕೂಡ ಸಮಸ್ಯೆ ಬಗೆಹರಿದಂತೆ ಆಗಲಿದೆ.

ಈ ರೀತಿ ವಿಚ್ಛೇದನ ಪ್ರಕರಣಗಳನ್ನು ಪುನಃ ವಾಪಸ್ ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಪ್ರಕರಣಗಳು ಕೇವಲ ಎರಡು ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಜಿಲ್ಲಾ ನ್ಯಾಯಾಧೀಶ ಜಯಂತ್ ಕುಮಾರ್.

ಇನ್ನು, ಕೌಟುಂಬಿಕ ಕಲಹಗಳ ಇತ್ಯರ್ಥಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತುವ ದಂಪತಿಗಳಿಗೆ ತಮ್ಮ ಮಕ್ಕಳ ಭವಿಷ್ಯದ ಕುರಿತು ಗಮನಹರಿಸಬೇಕಿದೆ. ತಮ್ಮ ಕೌಟುಂಬಿಕ ವ್ಯಾಪ್ತಿಯಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ, ನ್ಯಾಯಾಲಯಕ್ಕೆ ಬರುವುದು ಬೇಡ. ಇಲ್ಲದಿದ್ದರೆ ಸಮಾಜಕ್ಕೆ ಹಾಗೂ ತಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ರೀತಿ ಕಂಟಕ ಪ್ರಾಯರಾಗಿ ಬಿಡುತ್ತೀರಾ ಎನ್ನುತ್ತಾರೆ ಹಿರಿಯ ವಕೀಲ ತಿಪ್ಪೇಸ್ವಾಮಿ.

ಇದನ್ನೂ ಓದಿ: ಬೆಂಗಳೂರು: ಡಿಸೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.