ETV Bharat / state

ಬೆಂಗಳೂರಲ್ಲಿ ವ್ಹೀಲಿಂಗ್​ ಪುಂಡರಿಗೆ ಪೊಲೀಸರ ಶಾಕ್​: ವರ್ಷದಲ್ಲಿ ದಾಖಲಾಗಬೇಕಿದ್ದ ಪ್ರಕರಣ ಆರೇ ತಿಂಗಳಲ್ಲಿ ದಾಖಲು - CASE AGAINST WHEELING - CASE AGAINST WHEELING

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿರುವ ವ್ಹೀಲಿಂಗ್​ಗೆ ಬ್ರೇಕ್ ಹಾಕುತ್ತಿರುವ ಟ್ರಾಫಿಕ್ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಪುಂಡರಿಗೆ ಬಿಸಿ ಮುಟ್ಟಿಸಿದ್ದಾರೆ.

bike wheeling case
ಬೈಕ್​ ವ್ಹೀಲಿಂಗ್​ ಮಾಡುತ್ತಿರುವುದು (ETV Bharat)
author img

By ETV Bharat Karnataka Team

Published : Aug 1, 2024, 5:20 PM IST

ಬೆಂಗಳೂರು: ವ್ಹೀಲಿಂಗ್ ವಿರುದ್ಧ ನಗರ ಸಂಚಾರ ಪೊಲೀಸರು ಸಮರ ಸಾರಿದ್ದಾರೆ. ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಒಂದು ವರ್ಷದಲ್ಲಿ ದಾಖಲಾಗಬಹುದಾದ ಪ್ರಕರಣಗಳು, ಕಳೆದ ಆರು ತಿಂಗಳ ಅವಧಿಯಲ್ಲೇ ದಾಖಲಾಗಿವೆ.

ನಗರದ ಸುಗಮ ಸಂಚಾರ ಹಾಗೂ ನಿರ್ವಹಣೆಗಾಗಿ ಸಂಚಾರ ಪೊಲೀಸರು ಅವಿರತ ಶ್ರಮಪಡುತ್ತಿದ್ದಾರೆ‌. ಸಂಚಾರ ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರೂ ಯುವಕರು ಹಾಗೂ ಅಪ್ತಾಪ್ತರು ವ್ಹೀಲಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ. ಅಪಾಯಕಾರಿ ಎಂದು ತಿಳಿದಿದ್ದರೂ ರೋಚಕ ಅನುಭವಕ್ಕಾಗಿ ಈ ರೀತಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ತಕ್ಕಮಟ್ಟಿಗೆ ಬ್ರೇಕ್ ಹಾಕಲಾಗಿದೆ.

ಕಳೆದ ಜೂನ್ ಅಂತ್ಯಕ್ಕೆ ನಗರದಲ್ಲಿ 225 ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ವರ್ಷದಲ್ಲಿ 216 ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ, ಒಂದು ವರ್ಷದಲ್ಲಿ ದಾಖಲಾಗುವಷ್ಟು ಪ್ರಕರಣಗಳು ಕಳೆದ 6 ತಿಂಗಳಲ್ಲೇ ದಾಖಲಾಗಿದ್ದು, ವ್ಹೀಲಿಂಗ್ ಮಾಡುವವರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಈ ರಸ್ತೆಗಳೇ ವ್ಹೀಲಿಂಗ್​ ಹಾಟ್ ಸ್ಪಾಟ್​​ಗಳು: ಯುವಕರು ಸಂಚಾರ ದಟ್ಟಣೆಯಿಲ್ಲದ‌ ಪ್ರದೇಶಗಳಲ್ಲಿ ವ್ಹೀಲಿಂಗ್ ಮಾಡುವುದು ಹೆಚ್ಚಾಗಿದೆ.‌ ನಗರದ ಹೊರವರ್ತುಲ ರಸ್ತೆಗಳು, ಏರ್​​ಪೋರ್ಟ್ ರೋಡ್, ನೈಸ್ ರಸ್ತೆ, ಸುಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ ರಸ್ತೆ ಹಾಗೂ ಮೇಲುಸೇತುವೆಗಳಲ್ಲಿ ವ್ಹೀಲಿಂಗ್ ಮಾಡುವುದಲ್ಲದೆ, ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿರ್ದಶನಗಳಿವೆ. ಇದರಿಂದ ಅಪಘಾತವಾಗಿ ಸಾವು-ನೋವುಗಳಿಗೂ ಕಾರಣವಾಗಿದೆ.

ಅದರಲ್ಲೂ ಅಪ್ರಾಪ್ತರ ಕೈಗೆ ದ್ವಿಚಕ್ರ ವಾಹನ ನೀಡಿ, ಪೋಷಕರು ಹಾಗೂ ಮಾಲೀಕರು ಅವಾಂತರಗಳಿಗೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದರೆ ದ್ವಿಚಕ್ರ ಮಾಲೀಕರ ಲೈಸೆನ್ಸ್ ರದ್ದು ಮಾಡುವುದಾಗಿ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ, ವ್ಹೀಲಿಂಗ್ ಶೋಕಿಯ ಗೀಳಿಗೆ ಬಿದ್ದು ಸಿಕ್ಕಿಬಿದ್ದ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿವೆ.

''ಜೂನ್ ಅಂತ್ಯಕ್ಕೆ 225 ವ್ಹೀಲಿಂಗ್ ಪ್ರಕರಣ ದಾಖಲಾಗಿದೆ. ಈ ಪೈಕಿ 93 ಪ್ರಕರಣಗಳಲ್ಲಿ 26 ಮಂದಿಯ ಆರ್​​ಸಿ ಅಮಾನತಿನಲ್ಲಿಡಲಾಗಿದೆ. ಇನ್ನೂ 67 ಪ್ರಕರಣಗಳಲ್ಲಿ ಆರ್​​ಸಿ ಅಮಾನತು ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ, 32 ಮಂದಿ ಸವಾರರ ಡಿಎಲ್ ರದ್ದತಿ ಕೋರಿ ಆರ್​​ಟಿಒಗೆ ಪತ್ರ ಬರೆಯಲಾಗಿತ್ತು. ಈ ಪೈಕಿ 9 ಮಂದಿ ಲೈಸೆನ್ಸ್ ರದ್ದುಗೊಳಿಸಲಾಗಿದ್ದು, 23 ಮಂದಿ ಸವಾರರ ಲೈಸೆನ್ಸ್ ಪರಿಶೀಲನೆ ಹಂತದಲ್ಲಿದೆ'' ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ವ್ಹೀಲಿಂಗ್ ಪ್ರಕರಣಗಳು:

ವರ್ಷ - ಪ್ರಕರಣಗಳು

2022 - 283

2023 - 216

2024 - 225 (ಜೂನ್ ಅಂತ್ಯಕ್ಕೆ)

ಇದನ್ನೂ ಓದಿ: 26 ಇನ್​​​​​ಸ್ಟಾಗ್ರಾಂ ಖಾತೆ; ಫಾಲೋವರ್ಸ್​ ಹೆಚ್ಚಿಸಿಕೊಳ್ಳಲು ವೀಲಿಂಗ್ ವಿಡಿಯೋ ಮಾಡುತ್ತಿದ್ದವ ಅರೆಸ್ಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.