ETV Bharat / state

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆ: ಸತೀಶ್ ಜಾರಕಿಹೊಳಿ - Lok Sabha Election - LOK SABHA ELECTION

ಅಥಣಿ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.

Satish Jarakiholi spoke at a meeting of Congress workers.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿದರು.
author img

By ETV Bharat Karnataka Team

Published : Mar 25, 2024, 9:06 PM IST

Updated : Mar 25, 2024, 9:28 PM IST

ಸಚಿವ ಸತೀಶ್ ಜಾರಕಿಹೊಳಿ ಸಭೆಯಲ್ಲಿ ಮಾತನಾಡಿದರು.

ಚಿಕ್ಕೋಡಿ: ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗ ಸಾವಿರಾರು ಕೋಟಿ ಅನುದಾನವನ್ನು ಸ್ಥಳೀಯ ಶಾಸಕ ಸವದಿ ಪಡೆದುಕೊಂಡಿದ್ದಾರೆ. ಆ ಹಣ ಬರಬೇಕಾದರೆ ಮತ್ತು ಇನ್ನೂ ಹೆಚ್ಚು ಅಭಿವೃದ್ಧಿ ಸಾಧಿಸಲು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದರು.

ಸೋಮವಾರ ಅಥಣಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಅಥಣಿಗೆ ಬಂದಾಗ ಸವದಿ ಸಾವಿರ ಕೋಟಿ ಅನುದಾನ ಕೇಳಿದ್ದಾರೆ. ಎರಡನೇ ಬಾರಿ ಬಂದಾಗ 2000 ಕೋಟಿ, ಅಭಿವೃದ್ಧಿಗೋಸ್ಕರ ಸರ್ಕಾರದಿಂದ ಹಣ ಬಿಡುಗಡೆ ಮಾಡಿದೆ. ಈ ಎಲ್ಲ ಹಣ ತರುವುದಕ್ಕೆ ಹೆಲಿಕ್ಯಾಪ್ಟರ್ ಮುಖಾಂತರ ಮಾತ್ರ ಸಾಧ್ಯ, ಅಷ್ಟು ಅನುದಾನವನ್ನು ಅಥಣಿ ಕ್ಷೇತ್ರಕ್ಕೆ ತಂದಿದ್ದಾರೆ.

ಮತ್ತೆ ಸಾವಿರ ಕೋಟಿ ರೂಪಾಯಿ ಅನುದಾನ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲವೂ ಹಣ ಬರಬೇಕಾದರೆ ಈ ಬಾರಿ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಆಗಬೇಕು ಅವರ ಗೆಲುವಿನಿಂದ ಈ ಭಾಗ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಸಚಿವರು ಭರವಸೆ ನೀಡಿದರು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಬಿಜೆಪಿ ಅಭ್ಯರ್ಥಿಯಾಗಿ ಯಾರೆ ಬಂದರೂ ನಮಗೆ ಸಂಬಂಧವಿಲ್ಲ. ಬಿಜೆಪಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ, ಅವರ ಆಂತರಿಕ ವಿಚಾರ ಅವರ ಪಕ್ಷದಲ್ಲಿ ಏನೇ ಆದರೂ ಗೊತ್ತಿಲ್ಲ. ನಮ್ಮ ಪಕ್ಷದ ವಿಚಾರ ಅಷ್ಟೇ ನಾವು ನೋಡುವುದು ಎಂದು ಹೇಳಿದರು.

ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜರ್ನಾದನ ರೆಡ್ಡಿ ಸ್ವತಂತ್ರ ಇದ್ದಾರೆ. ಯಾವ ಪಕ್ಷಕ್ಕೆ ಬೇಕಾದರೂ ಹೊಗಬಹುದು. ರಾಜ್ಯಸಭಾ ಚುನಾವಣೆಯಲ್ಲಿ ರೆಡ್ಡಿ ಕಾಂಗ್ರೆಸ್ ಸಪೋರ್ಟ್ ಮಾಡಿದ್ದಾರೆ. ಅವತ್ತು ಅವರು ಸ್ವತಂತ್ರ್ಯ ಇದ್ದರು, ಅವತ್ತು ನಮಗೆ ಬೆಂಬಲ ನೀಡಿದ್ದಾರೆ ಅಷ್ಟೇ ಎಂದು ಹೇಳಿದರು.

ಐಎಎಸ್ ಅಧಿಕಾರಿ ಶಂಭು ಕಲ್ಲೋಳ್ಕರ್ ಕಾಂಗ್ರೆಸ್ ವಿರುದ್ಧ ರೇಬೆಲ್ ವಿಚಾರ ಕುರಿತು ಮಾತನಾಡಿದ ಅವರು, ಕಲ್ಲೋಳ್ಕರ್ ರೇಬೆಲ್ ವಿಚಾರ ಇಲ್ಲವೇ ಇಲ್ಲ. ನಮ್ಮ ಪಕ್ಷಕ್ಕೆ ಶಂಭು ಕಲ್ಲೋಳ್ಕರ್ ಇಲ್ಲವೇ ಇಲ್ಲ. ಇದರಿಂದ ಅವರ ಸ್ಪರ್ಧೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಬೆಳಗಾವಿಯ ಅಭಿವೃದ್ಧಿಗೆ ಹುಮ್ಮಸ್ಸು ಬಂದಿದೆ, ಎಲ್ಲರ ಜೊತೆಗೂಡಿ ಚುನಾವಣೆ ಎದುರಿಸುವೆ: ಜಗದೀಶ್‌ ‌ಶೆಟ್ಟರ್ - Jagadeesh Shettar

Last Updated : Mar 25, 2024, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.