ETV Bharat / state

ಕರಾವಳಿಯಲ್ಲಿ ತಡವಾಗಿ ಮುಂಗಾರು ಮಳೆ ಆರಂಭ: ಇಂದು, ನಾಳೆ ಯೆಲ್ಲೋ ಅಲರ್ಟ್ ಘೋಷಣೆ - Monsoon Rain - MONSOON RAIN

ಮಂಗಳೂರಿನಲ್ಲಿ ಇಂದು ಮುಂಜಾನೆಯಿಂದ ಮಳೆಯ ಅಬ್ಬರ ಶುರುವಾಗಿದೆ.

ಮುಂಗಾರು ಮಳೆ
ಮುಂಗಾರು ಮಳೆ (ETV Bharat)
author img

By ETV Bharat Karnataka Team

Published : Jun 7, 2024, 3:41 PM IST

ಮಂಗಳೂರು: ಮಾನ್ಸೂನ್​ ಮಾರುತಗಳು ಈಗಾಗಲೇ ರಾಜ್ಯ ಪ್ರವೇಶಿಸಿವೆ. ಈ ಬಾರಿ ರಾಜ್ಯದ ಕರಾವಳಿಯಲ್ಲಿ ಮುಂಗಾರು ವಿಳಂಬವಾಗಿ ಆರಂಭಗೊಂಡಿದೆ. ಮಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಮಳೆ ಅಬ್ಬರಿಸುತ್ತಿದ್ದು, ನಗರದ ಜನತೆ ಸಂತಸಗೊಂಡಿದ್ದಾರೆ.

ಮೇ ತಿಂಗಳಾಂತ್ಯದಲ್ಲಿ ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗಿತ್ತು. ವಾಡಿಕೆಯಂತೆ ಕೇರಳಕ್ಕೆ ಮುಂಗಾರು ಆಗಮನದ ಎರಡು ದಿನಗಳ ಅಂತರದಲ್ಲಿ ಕರಾವಳಿ ಪ್ರವೇಶಿಸಿ, ನಂತರ ಇಡೀ ರಾಜ್ಯಕ್ಕೆ ಮಳೆಯ ಸಿಂಚನವಾಗಬೇಕು. ಅದರಂತೆ, ಜೂನ್ 2ರಂದು ಕರಾವಳಿಗೆ ಮುಂಗಾರಿನ ಆಗಮನವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಜೂನ್ 6ರವರೆಗೂ ಮಳೆ ಹನಿಯಾಯಿತೇ ಹೊರತು ಅಬ್ಬರಿಸಲಿಲ್ಲ. ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ನಿರಾಶರಾಗಿದ್ದರು.

ಇಂದು ಮುಂಜಾನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ಕರಾವಳಿಯಲ್ಲಿ ಉತ್ತಮ ಮಳೆ ನಿರೀಕ್ಷಿಸಬಹುದು ಎಂದು ವರುಣ ಮಿತ್ರ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು, ನಾಳೆ ಯೆಲ್ಲೋ ಅಲರ್ಟ್: ಕರಾವಳಿ ಭಾಗಕ್ಕೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 9 ಮತ್ತು 10ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿರುಸಿನಿಂದ ಕೂಡಿದ ಗಾಳಿಸಹಿತ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ತುಮಕೂರು - ವಿಜಯಪುರದಲ್ಲಿ ಮಳೆರಾಯನದ್ದೇ ಆರ್ಭಟ - Heavy rains

ETV Bharat Logo

Copyright © 2024 Ushodaya Enterprises Pvt. Ltd., All Rights Reserved.