ದಾವಣಗೆರೆ: ಮೋದಿಜೀ ನೀವು ವಚನಭ್ರಷ್ಟರ ಪರ ಇದ್ದೀರಿ. ರೈತ ಸಾಲ ಮನ್ನಾ ಮಾಡಿಲ್ಲ, ಬದಲಿಗೆ ಅದಾನಿ ಅಂಬಾನಿಯಂತಹ ಶ್ರೀಮಂತರ ಕಣ್ಣೀರು ಒರೆಸಿದ್ದೀರಿ. ಹಿಂದು ಹಿಂದು ಎನ್ನುತ್ತೀರಿ, ಅದೇ ಹಿಂದುಗಳಲ್ಲಿ ದುರ್ಬಲರು, ಬಡವರು, ಭೂಮಿ ಇಲ್ಲದ ಇರುವವರು, ಕೃಷಿ ಮಾಡುವವರಿಗೆ ಏನು ಕೊಟ್ಟಿದ್ದೀರಿ. ಮೋದಿಯವರಿಗೆ ಸಾಮಾಜಿಕ ನ್ಯಾಯದ ಪರಿಚಯ ಇಲ್ಲ. ಅವರು ಇದ್ದವರು ಇಲ್ಲದೇ ಇರುವವರಿಗೆ ಸಮಪಾಲಾಗಿ ಹಂಚುವ ಕೆಲಸ ಮಾಡಿಲ್ಲ. ಎಲ್ಲ ಜಾತಿ ಹಾಗೂ ಧರ್ಮದ ಜನರನ್ನು ಒಂದೇ ತಾಯಿಯ ಮಕ್ಕಳಂತೆ ನೋಡ್ಬೇಕು. ಧರ್ಮ ಮತ್ತು ಜಾತಿ ಒಡೆದಾಳುವ ನೀತಿ ಅನುಸರಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆರೋಪಿಸಿದರು.
ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಸಿ ಎಸ್ಟಿ ಹಣವನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಂಡಿದ್ದರು. ಅದ್ರೆ ಆ ಹಣವನ್ನು ಗ್ಯಾರಂಟಿಗಳಿಗೆ ಹಣ ಬಳಕೆ ಮಾಡಿಕೊಂಡಿಲ್ಲ. ಇದರ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರತಿ ಕುಟುಂಬದ ಮಹಿಳೆಯರಿಗೆ ಎರಡು ಸಾವಿರ ರೂ ಕೊಟ್ಟಿದ್ದೇವೆ. ಹೆಣ್ಣುಮಕ್ಕಳು ಪ್ರವಾಸ ಮಾಡಲು ಉಚಿತ ಶಕ್ತಿ ಯೋಜನೆ ಕೊಟ್ಟಿದ್ದೇವೆ. ಅನ್ನಭಾಗ್ಯ ಯೋಜನೆ ಕೊಟ್ಟಿದ್ದೇವೆ, ನಿರುದ್ಯೋಗಿ ಯುವಕರಿಗೆ ಆಸರೆಯಾಗಲೆಂದು ಶಿಷ್ಯ ವೇತನ ಕೊಟ್ಟಿದ್ದೇವೆ. ಉಚಿತ ವಿದ್ಯುತ್ ಕೊಟ್ಟಿದ್ದೇವೆ. ಈ ಪಂಚ ಗ್ಯಾರಂಟಿಗಳು ಕಾಂಗ್ರೆಸ್ ಗೆಲುವಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ದಾವಣಗೆರೆಯನ್ನು ಸುಂದರ ನಗರವನ್ನಾಗಿ ಮಾಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂಓದಿ: ನಿಮ್ಮ ವೋಟು ಬೊಮ್ಮಾಯಿಯವರನ್ನು ಕೇಂದ್ರದಲ್ಲಿ ಮಂತ್ರಿ ಮಾಡುತ್ತೆ: ಸಂಸದ ಪ್ರತಾಪ್ ಸಿಂಹ - pratap simha