ETV Bharat / state

ಡಾ.ಯತೀಂದ್ರ ಆ್ಯಂಡ್​ ಟೀಂ ಸಹಕಾರದಿಂದ ಮುಡಾದಲ್ಲಿ 5 ಸಾವಿರ ಕೋಟಿ ರೂ. ಅವ್ಯವಹಾರ: ಹೆಚ್. ವಿಶ್ವನಾಥ್ - H Vishwanath

author img

By ETV Bharat Karnataka Team

Published : Jun 30, 2024, 6:26 PM IST

Updated : Jun 30, 2024, 6:36 PM IST

''ಎಂಎಲ್​ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ತಂಡದ ಸಹಕಾರದಿಂದ ಮುಡಾ ಅಧಿಕಾರಿಗಳು ಸುಮಾರು 5 ಸಾವಿರ ಕೋಟಿ ರೂ. ಗಳ ಅವ್ಯವಹಾರ ನಡೆಸಿದ್ದಾರೆ. ಅವ್ಯವಹಾರದ ವಿಚಾರ ಹೊರಗೆ ಬರುತ್ತಿದ್ದಂತೆ, ಭಾನುವಾರವಾದರೂ ಅಧಿಕಾರಿಗಳು ಸಚಿವ ಬೈರತಿ ಸುರೇಶ್ ಅಣತಿ ಮೇರೆಗೆ ಮುಡಾದ ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ'' ಎಂದು ಎಂಎಲ್​ಸಿ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಹೆಚ್.ವಿಶ್ವನಾಥ್
ಹೆಚ್.ವಿಶ್ವನಾಥ್ (ETV Bharat)

ಹೆಚ್. ವಿಶ್ವನಾಥ್ (ETV Bharat)

ಮೈಸೂರು: ''ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ತಂಡದ ಸಹಕಾರದಿಂದ ಮುಡಾ ಅಧಿಕಾರಿಗಳು ಸುಮಾರು 5 ಸಾವಿರ ಕೋಟಿ ರೂ. ಗಳ ಅವ್ಯವಹಾರ ನಡೆಸಿದ್ದಾರೆ'' ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದರು.

ನಗರದ ಜಲದರ್ಶಿನಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಜನಪ್ರತಿನಿಧಿಗಳು - ಅಧಿಕಾರಿಗಳು ಸಿಂಡಿಕೇಟ್‌ವೊಂದನ್ನು ರಚಿಸಿಕೊಂಡಿದ್ದಾರೆ. ಇದರ ಮೂಲಕ ಅವ್ಯವಹಾರ ನಡೆಸಿದ್ದಾರೆ. ಇದರಲ್ಲಿ ಮುಡಾ ಆಯುಕ್ತ ದಿನೇಶ್ ಕುಮಾರ್, ಶಾಸಕ ಕೆ. ಹರೀಶ್‌ಗೌಡ, ರಾಕೇಶ್ ಪಾಪಣ್ಣ, ಮುಡಾ ಅಧ್ಯಕ್ಷ ಕೆ. ಮರೀಗೌಡ, ಹಿಂದಿನ ಅಧ್ಯಕ್ಷ ರಾಜೀವ್, ಆಯುಕ್ತ ನಟೇಶ್, ಮರಿತಿಬ್ಬೇಗೌಡರ ಸಂಬಂಧಿ ಸುದೀಪ್, ದಲ್ಲಾಳಿಗಳಾದ ಉತ್ತಮಗೌಡ, ಮೋಹನ್, ಮುಡಾ ಕಮೀಷನರ್ ಬಾಮೈದ ತೇಜಸ್‌ಗೌಡ, ರೆಕಾರ್ಡ್ ರೂಂ ಅಧಿಕಾರಿ ತ್ರಿಶೂಲ್ ಮತ್ತಿತರರು ಭಾಗಿಯಾಗಿದ್ದಾರೆ'' ದೂರಿದರು.

''ಅವ್ಯವಹಾರದ ವಿಚಾರ ಹೊರಗೆ ಬರುತ್ತಿದ್ದಂತೆ, ಭಾನುವಾರವಾದರೂ ಅಧಿಕಾರಿಗಳು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಣತಿ ಮೇರೆಗೆ ಮುಡಾದ ಕಡತಗಳನ್ನು ದೊಡ್ಡ- ದೊಡ್ಡ ಸೂಟ್‌ಕೇಸ್‌ಗಳಿಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಏನು-ಏನನ್ನೋ ಸರಿಮಾಡುತ್ತಾರೋ ನೋಡಬೇಕು. ರಿಯಲ್​ ಎಸ್ಟೆೆಟ್ ನಡೆಸುತ್ತಿದ್ದದ್ದವನಿಗೆ ತಮ್ಮ ಶಿಷ್ಯ ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ನಗರಾಭಿವೃದ್ದಿ ಖಾತೆ ಕೊಟ್ಟರೆ, ಆತ ಎಲ್ಲವನ್ನೂ ಕುಲಗೆಡಿಸಿ ಬಿಟ್ಟಿದ್ದಾನೆ'' ಎಂದು ಆರೋಪಿಸಿದರು.

''ಮುಡಾದ ಸಭೆಯಲ್ಲಿ ಏನಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಯಾವ ಅಜೆಂಡಾವೂ ಇರುವುದಿಲ್ಲ. ಯಾವ ವಿಷಯವನ್ನು ತರುತ್ತಾರೆ. ಯಾವ ವಿಷಯ ಚರ್ಚೆಯಾಗುತ್ತದೆ ಎನ್ನುವುದು ಕೂಡಾ ತಿಳಿಯುವುದಿಲ್ಲ. ವಿಷಯಗಳು ಹೊರಗೆ ಬರುವುದೇ ಇಲ್ಲ. ಆದರೆ ರೆಕಾರ್ಡ್ ಆಗಿರುತ್ತದೆ. ಇದಕ್ಕಾಗಿಯೇ ಕೆಲವು ಎಂಎಲ್ಎ, ಎಂಎಲ್​ಸಿಗಳು ಇದ್ದಾರೆ. ನಾನು ಈಗಿನ ಅವ್ಯವಹಾರ ಕುರಿತು ಮುಡಾ ಆಯುಕ್ತರಿಗೆ ಪತ್ರ ಬರೆದು ಬಹಳ ದಿನವಾಗಿದೆ. ಇಲ್ಲಿವರೆಗೂ ವಾಪಸ್ ಪ್ರತಿ ಉತ್ತರ ಬಂದಿಲ್ಲ ಎಂದು ಅಸಮಾಧಾನ'' ಹೊರಹಾಕಿದರು.

''50:50 ಅನುಪಾತದ ವಿಚಾರ ಸಭೆಯಲ್ಲಿ ಚರ್ಚೆಯಾಗಿತ್ತೇ ವಿನಃ ನಿರ್ಣಯವಾಗಿರಲಿಲ್ಲ. ಆದರೆ ಮುಡಾ ಅಧಿಕಾರಿಗಳು ನಿರ್ಣಯವಾಗಿದೆ ಎಂದು ಹೇಳಿ 40-50 ವರ್ಷದ ಹಿಂದಿನ ಲೇಔಟ್‌ಗಳಿಗೂ ಇದನ್ನು ಅನ್ವಯ ಮಾಡಿ, ಅಂದಿನವರಿಗೆಲ್ಲ ಪರಿಹಾರ ನೀಡಿ, ಒಬ್ಬಬ್ಬರಿಗೆ ಇಪ್ಪತ್ತು-ಮೂವತ್ತು ಸೈಟ್​ಗಳನ್ನು ನೀಡಿದ್ದಾರೆ. ಪ್ರಾಧಿಕಾರವು ಒಳಸಂಚಿನಿಂದ ಯಾರ-ಯಾರ ಆಸ್ತಿಯನ್ನು ಬಳಸಿಕೊಂಡು ಪರಿಹಾರಗಳನ್ನು ಸಂಬಂಧಿಸಿದವರಿಗೆ ತಿಳಿಯದಂತೆ ಹೇಗೆ ತಗೆದುಕೊಂಡಿದ್ದಾರೆ ಎನ್ನುವುದಕ್ಕೆೆ ಸಿದ್ದರಾಮಯ್ಯ ಅವರ ಹೆಂಡತಿ ಪಾರ್ವತಮ್ಮ ಅವರ ಸೋದರ ಸಂಬಂಧಿ ಮಲ್ಲಣ್ಣ ಎಂಬುವರ ಕೆಸರೆಯ 464ನೇ ಸರ್ವೇ ನಂಬರಿನ 3.16 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಮಲ್ಲಣ್ಣ ಪಾರ್ವತಮ್ಮನವರಿಗೆ ಆ ಜಮೀನನ್ನು ಗಿಫ್ಟ್​ ಡೀಡ್ ಮಾಡಿಕೊಟ್ಟಿದ್ದರು. ಮುಡಾ ಇವರ ಹೆಸರಿನಲ್ಲೂ ಪರಿಹಾರವನ್ನು ತೆಗೆದುಕೊಂಡಿದ್ದಾರೆ. ಈ ರೀತಿಯಾಗಿ ಇನ್ನೂ ಎಷ್ಟು ಅವ್ಯವಹಾರ ಮಾಡಿರಬೇಕು'' ಎಂದು ಹೇಳಿದರು.

ಮಂಜೇಗೌಡ ಮುಡಾ ಅಟೆಂಡರ್​: ''ಮುಡಾ ಅವ್ಯವಹಾರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕೂಡಾ ಶಾಮೀಲಾಗಿದ್ದಾರೆ. ಮಂಜೇಗೌಡ ಎಂಎಲ್​ಸಿ ಅಲ್ಲ. ಅವರೊಬ್ಬ ಮುಡಾ ಅಟೆಂಡರ್, ಯಾವಾಗಲೂ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಸೈಟ್​ಗಳನ್ನು ಹಿಡಿದುಕೊಂಡು ಓಡಾಡುತ್ತಾರೆ. ಮಲಗುವುದು ಅಲ್ಲೇ, ಬೆಳಗ್ಗೆ ಎದ್ದು ಮುಖ ತೊಳೆಯುವುದು ಅಲ್ಲೇ. ತಿಂಡಿ ಸೇವಿಸೋದು ಎಲ್ಲ ಅಲ್ಲೇ'' ಎಂದು ಲೇವಡಿ ಮಾಡಿದರು.

ಸಿಬಿಐ ತನಿಖೆ ಆಗಬೇಕು: ''ಮುಡಾ ಅವ್ಯವಹಾರ ವಿಚಾರವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು. ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಸಲು ಆಗುವುದಿಲ್ಲ. ಏಕೆಂದರೆ ಅದು ರಾಜ್ಯ ಸರಕಾರದ ಮಾರ್ಗದರ್ಶನದಲ್ಲಿ ನಡೆಯುತ್ತದೆ'' ಎಂದರು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ: ಬಸವನಗೌಡ ದದ್ದಲ್ - Basavanagowda Daddal

Last Updated : Jun 30, 2024, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.