ETV Bharat / state

ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಲು ಪಕ್ಷಭೇದ ಮರೆತು ಶಾಸಕರ ಒತ್ತಾಯ - ವಿಧಾನಸಭೆ ಅಧಿವೇಶನ

ವಿಧಾನಸಭೆಯಲ್ಲಿ ಇಂದು ನಿಲುವಳಿ ಸೂಚನೆಯಡಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಇತರ ಸದಸ್ಯರು ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿ ವಿಚಾರ ಪ್ರಸ್ತಾಪಿಸಿದ್ದು, ಸ್ಪೀಕರ್ ಯು.ಟಿ.ಖಾದರ್ ನಿಯಮ 69ರ ಅಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

Karnataka Assembly session
ವಿಧಾನಸಭೆ ಅಧಿವೇಶನ
author img

By ETV Bharat Karnataka Team

Published : Feb 13, 2024, 3:19 PM IST

Updated : Feb 13, 2024, 3:51 PM IST

ಜೆಡಿಎಸ್ ಶಾಸಕ ಹೆಚ್. ಡಿ ರೇವಣ್ಣ

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸುವ ಮೂಲಕ ರೈತರನ್ನು ಸಂಕಷ್ಟದಿಂದ ರಕ್ಷಿಸಬೇಕೆಂದು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಪಕ್ಷಭೇದ ಮರೆತು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜೆಡಿಎಸ್ ಶಾಸಕರಾದ ಹೆಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ, ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ಷಡಕ್ಷರಿ, ಬಿಜೆಪಿಯ ಜ್ಯೋತಿ ಗಣೇಶ್, ಹೆಚ್.ಡಿ.ಸುರೇಶ್, ಸುರೇಶ್‍ ಗೌಡ ಸೇರಿದಂತೆ ಮೊದಲಾದವರು ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಿ ನ್ಯೂನತೆಯನ್ನು ಸರಿಪಡಿಸುವಂತೆ ಆಗ್ರಹಿಸಿದರು.

ಇದಕ್ಕೂ ಮುನ್ನ ಶಾಸಕ ಹೆಚ್.ಡಿ.ರೇವಣ್ಣ ವಿಷಯ ಪ್ರಸ್ತಾಪಿಸಿ, "ಕೇಂದ್ರ ಕೃಷಿ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಭೇಟಿ ಮಾಡಿ ಕೊಬ್ಬರಿ ಖರೀದಿ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿತ್ತು. ನಂತರ ಕೇಂದ್ರದಿಂದ ಪ್ರತಿ ಕ್ವಿಂಟಲ್‍ಗೆ 12 ಸಾವಿರ ರೂ.ನಂತೆ ಖರೀದಿಗೆ ಅವಕಾಶ ನೀಡಿದೆ. ಇದರಲ್ಲಿ ಕೆಲವೆಡೆ ಲೋಪದೋಷಗಳಿದ್ದು, ಸರಿಪಡಿಸುವಂತೆ ಮನವಿ ಮಾಡಲಾಗಿದೆ. ತೆಂಗಿನಕಾಯಿ ಬೆಲೆ ಸಹ ಕುಸಿದಿದ್ದು, ಅದಕ್ಕೂ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಒತ್ತಾಯಿಸಲಾಗಿದೆ" ಎಂದು ಹೇಳಿದರು.

ಮುಂದುವರೆದು ಮಾತನಾಡಿ, "ವಿಧಾನಸಭಾ ಚುನಾವಣೆ ವೇಳೆ 15 ಸಾವಿರ ರೂ. ಬೆಂಬಲ ಬೆಲೆ ನೀಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. 15 ಸಾವಿರ ರೂ. ನೀಡಿ ಖರೀದಿಸದಿದ್ದರೆ ಚುನಾವಣೆಗಷ್ಟೇ ನಾವು ಭರವಸೆ ನೀಡಿದ್ದೆವು ಎಂದು ಹೇಳಲಿ" ಎಂದರು.

ಇದೇ ವೇಳೆ, "ನಕಲಿ ಬೆಳೆಗಾರರನ್ನು ಸೃಷ್ಟಿಸಿದ ಆರೋಪದಲ್ಲಿ ಆರು ಅಧಿಕಾರಿಗಳನ್ನು ಅಮಾನತು ಮಾಡಿರುವುದು ವರದಿಯಾಗಿದೆ. ಕೇಂದ್ರ ಸರ್ಕಾರ ಕ್ವಿಂಟಲ್‍ಗೆ 12 ಸಾವಿರ ರೂ. ಬೆಲೆ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ 3 ಸಾವಿರ ಬೆಂಬಲ ಬೆಲೆ ನೀಡಬೇಕು" ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್‍ನ ಶಾಸಕ ಶಿವಲಿಂಗೇಗೌಡ ಮಾತನಾಡಿ, "ಕೇಂದ್ರ ಸರ್ಕಾರ ಕೇವಲ 250 ರೂ. ಮಾತ್ರ ಹೆಚ್ಚಿಸಿದೆ. ರಾಜ್ಯ ಸರ್ಕಾರ 1,500 ರೂ. ಬೆಲೆಯನ್ನು ಕೊಬ್ಬರಿಗೆ ನೀಡುತ್ತಿದೆ. ನಫೇಡ್ ಕೇಂದ್ರ ವ್ಯಾಪ್ತಿಗೆ ಬರುತ್ತದೆ. ಮಾರುಕಟ್ಟೆ ದರ ಕ್ವಿಂಟಲ್‍ಗೆ 10 ಸಾವಿರ ರೂ. ಕೇಂದ್ರ ಸರ್ಕಾರ 2 ಸಾವಿರ ರೂ. ಮಾತ್ರ ನೀಡುತ್ತಿದೆ. 15 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಸಬೇಕು" ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ

ಇದರ ಮಧ್ಯೆ ಶಿವಲಿಂಗೇಗೌಡ, ಬಾಲಕೃಷ್ಣ ಹಾಗೂ ಹೆಚ್.ಡಿ.ರೇವಣ್ಣ ನಡುವೆ ವಾಗ್ವಾದ ನಡೆಯಿತು.
ನಂತರ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡುತ್ತಾ, "ರೈತರ ಬಳಿ ಒಂದೂವರೆ ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಉಳಿದಿದ್ದು, ಅದರ ಖರೀದಿಗೆ ಕ್ರಮ ಕೈಗೊಳ್ಳಬೇಕು. ಬೆಳೆಗಾರರಲ್ಲದವರಿಂದ ಖರೀದಿ ಮಾಡಿರುವುದರ ಬಗ್ಗೆ ನೈಜತೆ ಪರಿಶೀಲನೆಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸೂಚನೆ ನೀಡಬೇಕು ಎಂದರು. ರಾಜ್ಯ ಸರ್ಕಾರ ನೀಡುತ್ತಿರುವ 1,500 ರೂ. ಜತೆಗೆ ಮತ್ತೆ 1,500 ರೂ. ಸೇರಿಸಿ 3000 ರೂ. ಸೇರಿಸುವಂತೆ ಮನವಿ ಮಾಡಿದರು.

ಸುರೇಶ್‍ ಗೌಡ ಮಾತನಾಡಿ, "ಕಳೆದ ಆರು ತಿಂಗಳಿಂದ ರೈತರು ಕೊಬ್ಬರಿ ಮಾರಾಟಕ್ಕೆ ಕಾಯುತ್ತಿದ್ದಾರೆ. ಜನವರಿ 23ರಂದು ತುಮಕೂರಿನಲ್ಲಿ ಕೇಂದ್ರ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ಕೊಬ್ಬರಿ ಕೇಂದ್ರ ಕಚೇರಿ ಉದ್ಘಾಟಿಸಿದರು. ಆದರೆ ಇಲ್ಲಿಯವರೆಗೂ ಖರೀದಿ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, "ಕೊಬ್ಬರಿ ಖರೀದಿ ಬಗ್ಗೆ ಕಲ್ಪತರು ನಾಡಿನ ಶಾಸಕರುಗಳು ಪಕ್ಷಭೇದ ಮರೆತು ಪ್ರಸ್ತಾಪ ಮಾಡಿದ್ದಾರೆ. ಇದು ಸೂಕ್ತ ವಿಚಾರ. ಇದರ ಬಗ್ಗೆ ಇನ್ನೂ ಸುದೀರ್ಘವಾಗಿ ಚರ್ಚೆಯಾಗಬೇಕು. ಕೊಬ್ಬರಿ ಖರೀದಿ ಬಗ್ಗೆ ಇರುವ ಸಮಸ್ಯೆಗಳ ನಿವಾರಣೆ ಹಾಗೂ ಕ್ರಮಗಳ ಬಗ್ಗೆ ಕೃಷಿ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ" ಎಂದು ಸದನಕ್ಕೆ ತಿಳಿಸಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಜನಪ್ರಿಯ ಬಜೆಟ್ ನೀಡುತ್ತದೆಯೇ?

Last Updated : Feb 13, 2024, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.