ಬಾಗಲಕೋಟೆ: ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣ ಸೋಮವಾರ ನಡೆಯಿತು.
ಯತ್ನಾಳ್ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಆರಂಭಿಸುತ್ತಿದ್ದಂತೆ, "ನೀವು ಇಲ್ಲಿ ರಾಜಕೀಯ ಭಾಷಣ ಮಾಡಬೇಡಿ" ಎಂದು ಭಕ್ತರು ಎದ್ದು ನಿಂತು ತಕರಾರು ಎತ್ತಿದರು.
"ಇದು ರಾಜಕೀಯನಾ?" ಎಂದು ಯತ್ನಾಳ್ ಮರುಪ್ರಶ್ನಿಸಿದಾಗ ಭಕ್ತರು, "ಹೌದು, ಇದು ಯಾವ ಕಾರ್ಯಕ್ರಮ, ನೀವು ಏನು ಮಾತಾಡುತ್ತಿದ್ದೀರಿ? ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಸಮುದಾಯವರು ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು ಆರು ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ. ಇದು ರಾಜಕೀಯ ಮಾತಾನಾಡುವ ಜಾಗ ಅಲ್ಲ" ಎಂದರು.
ಬಳಿಕ "ಇದು ರಾಜಕೀಯ ಭಾಷಣ ಅಂದ್ರ ಬಿಡ್ರಿ" ಎಂದು ವೇದಿಕೆಯಿಂದ ಶಾಸಕರು ಹೊರಟು ಹೋದರು. ನಂತರ ವೇದಿಕೆಯ ಇತರ ಕಾರ್ಯಕ್ರಮಗಳು ಮುಂದುವರಿದವು.
ಇದನ್ನೂ ಓದಿ: ಅಡ್ಜಸ್ಟ್ಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಲಾಗಿದೆ: ಬಸನಗೌಡ ಪಾಟೀಲ್ ಯತ್ನಾಳ್