ETV Bharat / state

ಹಣದ ಬ್ಯಾಗ್ ಬಿಟ್ಟೋದ ವ್ಯಕ್ತಿ; ಸಿಕ್ಕ ಲಕ್ಷಾಂತರ ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ

ಜ್ಯೂಸ್ ಕುಡಿಯುವುದಕ್ಕೆ ಬಂದು ಹಣವಿದ್ದ ಬ್ಯಾಗ್​ ಮರೆತು ಬಿಟ್ಟು ಹೋಗಿದ್ದ ವ್ಯಕ್ತಿಗೆ ಶಾಸಕ ಕೆ. ಎಸ್​ ಬಸವಂತಪ್ಪ ಅವರು ಹಿಂದಿರುಗಿಸಿದ್ದಾರೆ.

MLA K S Basavanthappa
ಹಣದ ಬ್ಯಾಗ್​ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಕೆ ಎಸ್​ ಬಸವಂತಪ್ಪ (ETV Bharat)
author img

By ETV Bharat Karnataka Team

Published : Nov 7, 2024, 6:42 PM IST

ದಾವಣಗೆರೆ : ಜ್ಯೂಸ್ ಕುಡಿಯಲು ಬಂದು ಹಣವಿದ್ದ ಬ್ಯಾಗ್ ಬಿಟ್ಟೋದ ವ್ಯಕ್ತಿಗೆ ಶಾಸಕ ಕೆ. ಎಸ್​ ಬಸವಂತಪ್ಪ ಹಿಂದಿರುಗಿಸಿ ಮಾನವೀಯತೆ ಮೆರೆದಿರುವ ಘಟನೆ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿರುವ ರಸವಂತಿ ಜ್ಯೂಸ್ ಸೆಂಟರ್​ ಬಳಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಕಿರಾಣಿ ಅಂಗಡಿ ಮಾಲೀಕ ವೆಂಕಟೇಶ್ ಅವರು ಹಣ ಕಳೆದುಕೊಂಡಿದ್ದರು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಎಸ್ ಬಸವಂತಪ್ಪ ಅವರು ಹಣ ಹಿಂದಿರುಗಿಸಿದ್ದಾರೆ.

ಘಟನೆಯ ಹಿನ್ನೆಲೆ : ರಾಣೆಬೆನ್ನೂರು ಮೂಲದ ವೆಂಕಟೇಶ್ ಎಂಬುವವರು ದಾವಣಗೆರೆಯ ಶಿರಮಗೊಂಡನಹಳ್ಳಿ ಬಳಿ ಇರುವ ಅನ್ ಮೋಲ್ ಕಾಲೇಜಿಗೆ ತಮ್ಮ ಮಗನನ್ನು ಸೇರಿಸಲು 1.20 ಲಕ್ಷ ಹಣದ ಸಮೇತ ಆಗಮಿಸಿದ್ದರು. ಈ ವೇಳೆ ರಾಮ್ ಅಂಡ್ ಕೋ ವೃತ್ತದಲ್ಲಿರುವ ರಸವಂತಿ ಜ್ಯೂಸ್ ಸೆಂಟರ್​ಗೆ ಜ್ಯೂಸ್ ಕುಡಿಯಲು ತೆರಳಿದ್ದಾರೆ. ಇದೇ ವೇಳೆ ಹಣ ಇರುವ ಬ್ಯಾಗ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ಹಣದ ಬ್ಯಾಗ್ ಟೇಬಲ್ ಮೇಲೆ ಇಟ್ಟು ಜ್ಯೂಸ್ ಕುಡಿದಿದ್ದಾರೆ. ಬಳಿಕ ಹಣದ ಬ್ಯಾಗ್ ಟೇಬಲ್ ಮೇಲೆ ಬಿಟ್ಟು ಕಾಲೇಜಿಗೆ ತೆರಳಿ ವೆಂಕಟೇಶ್ ಅವರು ಹಣದ ಬ್ಯಾಗ್ ಹುಡುಕಾಡಿದ್ದಾರೆ. ಅಲ್ಲಿ ಹಣ ಸಿಕ್ಕಿಲ್ಲ. ನಂತರ ಕಾರಿನಲ್ಲಿ ಹುಡುಕಾಡಿದ್ದಾರೆ, ಅಲ್ಲಿಯೂ ಸಿಕ್ಕಿಲ್ಲ. ಆಗ ಕಾಲೇಜಿಗೆ ಬರುವ ಮುನ್ನ ಜ್ಯೂಸ್ ಸೆಂಟರ್​ಗೆ ತೆರಳಿ ಜ್ಯೂಸ್ ಸೇವಿಸಿದ್ದು ನೆನಪಿಸಿಕೊಂಡು ಬ್ಯಾಗ್​ಗಾಗಿ ತಡಕಾಡಿದ್ದಾರೆ. ನಂತರ ಜ್ಯೂಸ್​ ಸೆಂಟರ್​ಗೆ ಆಗಮಿಸಿ ಬ್ಯಾಗ್ ಹುಡುಕಾಡಿದ್ದಾರೆ.

ಹಣದ ಬ್ಯಾಗ್​ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಕೆ ಎಸ್​ ಬಸವಂತಪ್ಪ (ETV Bharat)

ಶಾಸಕರ ಕೈ ಸೇರಿತ್ತು ಹಣವಿದ್ದ ಬ್ಯಾಗ್ : ಅದೇ ಸಮಯಕ್ಕೆ ರಸವಂತಿ ಜ್ಯೂಸ್ ಸೆಂಟರ್​ಗೆ ಜ್ಯೂಸ್‌ ಸೇವಿಸಲು ಆಗಮಿಸಿದ ಶಾಸಕ ಕೆ. ಎಸ್ ಬಸವಂತಪ್ಪ ಅವರಿಗೆ ಟೇಬಲ್ ಮೇಲೆ ಬಿಟ್ಟು ಹೋಗಿದ್ದ ಹಣದ ಬ್ಯಾಗ್ ಕಂಡಿದೆ. ಬ್ಯಾಗ್ ತೆಗೆದು ನೋಡಿದಾಗ ಹಣ ಇರುವುದು ಗೊತ್ತಾಗಿದೆ. ಯಾರೋ ಹಣ ಬಿಟ್ಟು ಹೋಗಿದ್ದಾರೆ ಎಂದು ಶಾಸಕ ಬಸವಂತಪ್ಪ, ಜ್ಯೂಸ್ ಸೆಂಟರ್ ಮಾಲೀಕ ಮತ್ತು ಜನರ ಎದುರು ಹಣವನ್ನು ಎಣಿಸಿದ್ದಾರೆ.

ಆಗ ಬ್ಯಾಗ್​ನಲ್ಲಿ 1.20 ಲಕ್ಷ ರೂ. ಇರುವುದು ತಿಳಿದಿದೆ. ಕೂಡಲೇ ಈ ಹಣ ಯಾರದ್ದು ಎಂದು ಗೊತ್ತಾಗುವವರೆಗೂ ನನ್ನ ಬಳಿ ಇರುತ್ತದೆ. ಅವರು ಬಂದ ಮೇಲೆ ಫೋನ್ ಮಾಡಿ ಎಂದು ಶಾಸಕರು ಜ್ಯೂಸ್ ಸೆಂಟರ್ ಮಾಲೀಕನಿಗೆ ಹೇಳಿ ಕಾಫಿ ಬಾರ್ ಬಳಿ ತೆರಳಿದ್ದರು. ಹಣದ ಬ್ಯಾಗ್ ಹುಡುಕುತ್ತ ಧಾವಿಸಿದ ವೆಂಕಟೇಶ್ ಅವರು ಜ್ಯೂಸ್ ಸೆಂಟರ್ ಮಾಲೀಕನ ಬಳಿ ವಿಚಾರಿಸಿದಾಗ, ಅವರು ನಿಮ್ಮ ಬ್ಯಾಗ್ ಶಾಸಕರ ಬಳಿ ಇದೆ ಹೋಗಿ ಎಂದು ಹೇಳಿದ್ದಾರೆ.

ಹಣವನ್ನ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ : ಆಗ ವೆಂಕಟೇಶ್ ಅವರು ಶಾಸಕ ಬಸವಂತಪ್ಪ ಅವರ ಬಳಿ ಆಗಮಿಸಿ ಹಣದ ಬ್ಯಾಗ್ ಬಗ್ಗೆ ವಿಚಾರಿಸಿದ್ದಾರೆ. ಆಗ ಶಾಸಕ ವೆಂಕಟೇಶ್ ಅವರಿಗೆ ಬ್ಯಾಗ್​ನಲ್ಲಿ ಎಷ್ಟು ಹಣ ಇತ್ತು? ಎಂದು ಪ್ರಶ್ನೆ ಮಾಡಿದ್ದಾರೆ‌. ಬ್ಯಾಗ್ ಅಲ್ಲಿ 1.20 ಲಕ್ಷ ಇದೆ ಎಂದು ಸರಿಯಾಗಿ ಉತ್ತರಿಸಿದ್ದಾರೆ. ನಂತರ ಶಾಸಕ ಬಸವಂತಪ್ಪ ವೆಂಕಟೇಶ್ ಅವರಿಗೆ ನೀತಿ ಪಾಠ ಮಾಡಿ ಹಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ : ಠಾಣೆಗೆ ಬಂದು ಹಣವಿದ್ದ ಬ್ಯಾಗ್ ವಾರಸುದಾರರಿಗೆ ಒಪ್ಪಿಸಿದ ಆಟೋ ಚಾಲಕ: ಪ್ರಾಮಾಣಿಕತೆಗೆ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.