ETV Bharat / state

ನನಗೆ ಯಾವುದೇ ದುಡ್ಡಿನ ಆಮಿಷ ಬಂದಿಲ್ಲ : ಶಾಸಕ ಬಾಬಾಸಾಹೇಬ ಪಾಟೀಲ

ಕಾಂಗ್ರೆಸ್​ ಶಾಸಕ ಬಾಬಾಸಾಹೇಬ ಪಾಟೀಲ ಅವರು ಬಿಜೆಪಿಯಿಂದ ಕಾಂಗ್ರೆಸ್​ ಶಾಸಕರಿಗೆ ನೂರು ಕೋಟಿ ಆಫರ್​ ಕುರಿತು ಮಾತನಾಡಿ, ನನಗೆ ಯಾವುದೇ ದುಡ್ಡಿನ ಆಮಿಷ ಬಂದಿಲ್ಲ ಎಂದಿದ್ದಾರೆ.

MLA Babasaheb Patil
ಶಾಸಕ ಬಾಬಾಸಾಹೇಬ ಪಾಟೀಲ (ETV Bharat)
author img

By ETV Bharat Karnataka Team

Published : 2 hours ago

ಬೆಳಗಾವಿ : ನನಗೆ ಯಾವುದೇ ದುಡ್ಡಿನ ಆಮಿಷ ಬಂದಿಲ್ಲ. ಅಲ್ಲದೇ ದುಡ್ಡಿನ ಆಮಿಷಕ್ಕೆ ಒಳಗಾಗಿ ಬಿಜೆಪಿಗೆ ಹೋಗುವ ವ್ಯಕ್ತಿಯೂ ನಾನಲ್ಲ ಎಂದು ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ಆಫರ್ ನೀಡಲಾಗಿದೆ ಎಂದು ಮಂಡ್ಯ ಶಾಸಕ ರವಿ ಗಣಿಗ ಆರೋಪಕ್ಕೆ ನೇಗಿನಹಾಳದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಬಹಳ ದಿನಗಳ ಹಿಂದೆ ಬಿಜೆಪಿಯ ರಾಜ್ಯ ಮಟ್ಟದ ನಾಯಕರು ನನ್ನ ಸಂಪರ್ಕಿಸಿದ್ದು ನಿಜ. ನಾನು ಬಿಜೆಪಿ ಆಫರ್ ರಿಜೆಕ್ಟ್ ಮಾಡಿ, ಈ ಮಾಹಿತಿಯನ್ನು ಪಕ್ಷದ ವರಿಷ್ಠರ ಗಮನಕ್ಕೆ ಆಗಲೇ ತಂದಿದ್ದೇನೆ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು (ETV Bharat)

ನಾವೆಲ್ಲಾ ಕಾಂಗ್ರೆಸ್ ಪರವಾಗಿ ಇರುತ್ತೇವೆ : ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯನವರ ಪರವಾಗಿ, ನಾನು ಬದ್ಧನಿದ್ದೇನೆ. ಯಾಕೆಂದರೆ ರಾಜ್ಯದ ಜನ 135 ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಸ್ಪಷ್ಟ ಬಹುಮತ ನೀಡಿದ್ದಾರೆ.‌ ಆದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ವಿನಾಕಾರಣ ಗೊಂದಲ ಸೃಷ್ಟಿಸುವ ಪ್ರಕ್ರಿಯೆ ನಿರಂತರವಾಗಿದೆ. ಹಲವು ರೀತಿಯ ಆಮಿಷವೊಡ್ಡುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಸುಭದ್ರವಾಗಿದೆ. ನಾವೆಲ್ಲಾ ಕಾಂಗ್ರೆಸ್ ಪರವಾಗಿ ಇರುತ್ತೇವೆ. ಯಾವುದೇ ರೀತಿ ಬದಲಾವಣೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರ ಆಮಿಷಕ್ಕೆ ನಾವು ಮರುಳಾಗುವುದಿಲ್ಲ: ''ಈ ಹಿಂದೆ ಬಿಜೆಪಿಯವರು ಸಂಪರ್ಕಿಸಿ, ಈ ಸರ್ಕಾರ ಸ್ಥಿರವಾಗಿ ಉಳಿಯುವುದಿಲ್ಲ, ನಮ್ಮ ಜೊತೆ ಬನ್ನಿ ಎಂದಿದ್ದರು. ಆಗಲೇ ಅವರಿಗೆ ಹೇಳಿದ್ದೆ, ಸ್ಥಿರವಾಗಿ ಇರದಿದ್ದರೆ ಯಾಕೆ ರಾಜ್ಯದ ಜನ ನಮಗೆ ಬಹುಮತ ಕೊಡುತ್ತಿದ್ದರು ಎಂದಿದ್ದೆ. ಬಳಿಕ ನನ್ನನ್ನು ಬಿಜೆಪಿಯ ಯಾವ ನಾಯಕರು ಸಂಪರ್ಕಿಸಿಲ್ಲ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಹಿಂದೆಯಿಂದಲೂ ನಡೆದಿವೆ, ಮುಂದೆಯೂ ನಡೆಯುತ್ತದೆ. ಬಹಳಷ್ಟು ಮಂದಿ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ಬಿಜೆಪಿಯವರ ಆಮಿಷಕ್ಕೆ ನಾವು ಯಾರೂ ಮರುಳಾಗುವುದಿಲ್ಲ'' ಎಂದು ಸ್ಪಷ್ಟಪಡಿಸಿದರು.

ನನ್ನ ಕ್ಷೇತ್ರಕ್ಕೆ ಒಳ್ಳೆಯ ಅನುದಾನ ತಂದ ತೃಪ್ತಿ ನನಗಿದೆ: ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಕ್ಕೆ ಅನುದಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಾಬಾಸಾಹೇಬ ಪಾಟೀಲ, ಸಣ್ಣ ಪುಟ್ಟ ವ್ಯತ್ಯಾಸ ಇರಬಹುದು‌. ಆದರೆ, ನನ್ನ ಕ್ಷೇತ್ರಕ್ಕೆ ಒಳ್ಳೆಯ ಅನುದಾನ ತಂದ ತೃಪ್ತಿ ನನಗಿದೆ. ಮುಂದೆ ಇನ್ನೂ ಹೆಚ್ಚು ಅನುದಾನ ಕೊಡುವ ಭರವಸೆ ಕೊಟ್ಟಿದ್ದು, ಅಲ್ಲಿಯವರೆಗೂ ಕಾಯಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ; ಮೊದಲು ದಾಖಲೆ ಬಿಡುಗಡೆ ಮಾಡಲಿ ಎಂದು ಪ್ರಲ್ಹಾದ್ ಜೋಶಿ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.