ETV Bharat / state

ರಾಜ್ಯದ ಆರ್ಥಿಕತೆಯ ಬೆನ್ನೆಲುಬು ಗಟ್ಟಿಗೊಳಿಸುವುದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಧ್ಯೇಯ: ಕಾಸಿಯಾ ಅಧ್ಯಕ್ಷ - MSME Conference

author img

By ETV Bharat Karnataka Team

Published : Aug 30, 2024, 10:07 PM IST

ರಾಜ್ಯದ ಆರ್ಥಿಕತೆ ಬಗ್ಗೆ, ಎಂಎಸ್​ಎಂಇ ವಲಯಕ್ಕೆ ಬಡ್ಡಿ ದರ ಕಡಿಮೆ ಮಾಡುವ ಸೇರಿದಂತೆ ಕೈಗಾರಿಕೋದ್ಯಮದ ಬಗ್ಗೆ ಕಾಸಿಯಾ ಅಧ್ಯಕ್ಷ ಎಂ.ಜಿ ರಾಜಗೋಪಾಲ್ ಮಾತನಾಡಿದ್ದಾರೆ.

MICRO AND SMALL SCALE INDUSTRIES  STATE ECONOMY  KASSIA PRESIDENT  BENGALURU
ಅರಮನೆ ಮೈದಾನದಲ್ಲಿ ಎಂಎಸ್​ಎಂಇ ಸಮಾವೇಶ (ETV Bharat)

ಬೆಂಗಳೂರು: ರಾಜ್ಯದ ಆರ್ಥಿಕತೆಯ ಬೆನ್ನೆಲುಬನ್ನು ಗಟ್ಟಿಗೊಳಿಸುವುದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಧ್ಯೇಯವಾಗಿದೆ. ರಾಜ್ಯದ ಏಳಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡಲು ಅನುವಾಗುವಂತೆ ವಾತಾವರಣ ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎಂಎಸ್​ಎಂಇ ಸಮಾವೇಶದ ಹಿನ್ನೆಲೆ ಕೈಗಾರಿಕೆಯಲ್ಲಿ ಹೊಸ ಆವಿಷ್ಕಾರ, ಉದ್ಯೋಗ ಸೃಷ್ಟಿಯ ಅವಕಾಶದ ಬಗ್ಗೆ ಈಟಿವಿ ಭಾರತದ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು, ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ಸಾಲಗಳ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡುವ ಮೂಲಕ ಎಂ.ಎಸ್.ಎo.ಇ.ಗಳಿಗೆ ಬೆಂಬಲವನ್ನು ಹೆಚ್ಚಿಸಬೇಕಿದೆ ಎಂದರು.

ತ್ವರಿತ ಅನುಮೋದನೆಗಳೊಂದಿಗೆ ಸಾಲದ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕಿದೆ. ಸಣ್ಣ ವ್ಯಾಪಾರಗಳಿಗೆ ಅಗತ್ಯವಿರುವ ಸಾಲಗಳನ್ನು ಪಡೆಯಲು ಸಹಾಯ ಮಾಡಬೇಕಿದೆ. ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮಗಳಿಗೆ ಹಾಗೂ ಇತ್ತೀಚಿನ ಸವಾಲುಗಳಿಂದ ಹೆಚ್ಚು ಹಾನಿಗೊಳಗಾದ ವಲಯಗಳಿಗೆ ಹೆಚ್ಚಿನ ಸಬ್ಸಿಡಿಗಳನ್ನು ಮತ್ತು ಅನುದಾನಗಳನ್ನು ಸರ್ಕಾರ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.

ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಜಿಎಸ್‌ಟಿ ಮತ್ತು ಇತರೆ ತೆರಿಗೆಗಳ ದರಗಳಲ್ಲಿ ಕಡಿತ ಮಾಡುವುದರಿಂದ ನಗದು ಹರಿವಿನ ಜೊತೆಗೆ ಸ್ಫರ್ಧಾತ್ಮತಕತೆಯನ್ನು ಹೆಚ್ಚಿಸಬಹುದಾಗಿದೆ. ಪ್ರಸ್ತುತ ರಾಜ್ಯದಲ್ಲಿ ಶೇಕಡಾ 90 ರಷ್ಟು ಕೈಗಾರಿಕೆಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಅನುಕೂಲವಾಗುವಂತೆ ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಬೇಕು. ಸುಧಾರಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಬೆಂಬಲವನ್ನು ನೀಡುವ ಮೂಲಕ ಸರಕು ಮತ್ತು ಸೇವೆಗಳನ್ನು ಸುಗಮಗೊಳಿಸುವಲ್ಲಿ ತುರ್ತು ಗಮನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರದಿಂದ ಅನುದಾನಿತ ತರಬೇತಿ ಕಾರ್ಯಕ್ರಮಗಳಾದ ಡಿಜಿಟಲ್ ಮಾರ್ಕೆಟಿಂಗ್, ಹಣಕಾಸು ನಿರ್ವಹಣೆ ಮತ್ತು ತಂತ್ರಜ್ಞಾನದ ಮೇಲೆ ಕೇಂದ್ರೀಕೃತವಾಗಿಸಬೇಕು. ನುರಿತ ಉದ್ಯಮಿಗಳಿಂದ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಅಮೂಲ್ಯವಾದ ಮಾರ್ಗದರ್ಶನದ ಜೊತೆಗೆ ಮುಂದಿನ ಪೀಳಿಗೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.

ನೋಂದಣಿ ಮತ್ತು ಅನುಸರಣೆ ಕಾರ್ಯ ವಿಧಾನಗಳನ್ನು ಸರಳಗೊಳಿಸಬೇಕು ಹಾಗೂ ಏಕಗವಾಕ್ಷಿ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಅಳವಡಿಸುವುದರಿಂದ ಅಧಿಕಾರಶಾಹಿ ರೆಡ್‌ಟೇಪಿಸಂ ಕಡಿಮೆಯಾಗುತ್ತದೆ. ಇದರಿಂದ ಎಂ.ಎಸ್.ಎಂ.ಇಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ. ತಾಂತ್ರಿಕ ಪ್ರಗತಿ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಪಾಲುದಾರಿಕೆಗಳಿಗೆ ಹೆಚ್ಚಿನ ಅನುದಾನ ನೀಡುವುದರ ಜೊತೆಗೆ ವಿನೂತನ ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋವಿಡ್ ಸಾಂಕ್ರಾಮಿಕದ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಉದ್ದೇಶಿತ ಮಾರುಕಟ್ಟೆ ಪ್ರಚಾರಗಳು ಮತ್ತು ಮೂಲಸೌಕರ್ಯ ಬೆಂಬಲದೊಂದಿಗೆ ವಿಶೇಷ ಗಮನ ಹೆರಿಸಬೇಕಾದ ಅಗತ್ಯವಿದೆ. ಪ್ರಸ್ತುತ ವಿಕಸನಗೊಳ್ಳುತ್ತಿರುವ ಅಗತ್ಯಗಳು ಮತ್ತು ವಾಸ್ತವಗಳಿಗೆ ಹೊಂದಿಕೊಳ್ಳಲು ಅನುವಾಗುವಂತೆ ನೀತಿಗಳು ಪರಿಣಾಮಕಾರಿಯಾಗಿಸಲು ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಯಮಿತವಾದ ಸಮಾಲೋಚಿಸಬೇಕಾದ ಅಗತ್ಯತೆ ಇದೆ ಎಂದು ರಾಜಗೋಪಾಲ್ ತಿಳಿಸಿದರು.

ಸಣ್ಣ ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿ: ಬೃಹತ್ ಕೈಗಾರಿಕೆಗಳು ಮತ್ತು ಐಟಿ ಕಂಪನಿಗಳು ನಿರ್ದಿಷ್ಟ ಅರ್ಹತೆ ಮತ್ತು ಕೌಶಲ್ಯಗಳೊಂದಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಆದರೆ ಎಂಎಸ್​ಎಂಇಗಳು ಶಾಲೆ ಬಿಟ್ಟ, ಅನಕ್ಷರಸ್ಥ ಮತ್ತು ಯಾವುದೇ ಕೌಶಲ್ಯಗಳಿಲ್ಲದ ಉದ್ಯೋಗಿಗಳಿಗೆ ಕೆಲಸ ನೀಡಿ ಅವರಿಗೆ ಸೂಕ್ತ ತರಬೇತಿ ನೀಡುತ್ತಿವೆ. ಆದ್ದರಿಂದ 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಬೇಕಿದೆ. ದೇಶದ ಎಂಎಸ್ಎಂಇಗಳಿಗೆ ಸಾಮಾನ್ಯ ಕನಿಷ್ಠ ವೇತನ ನೀತಿಯನ್ನು ಜಾರಿಗೊಳಿಸಬೇಕಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಸಣ್ಣ ಕೈಗಾರಿಕೆಗಳ ಮನವಿ: ಎಂಎಸ್​ಎಂಇಗಳನ್ನು ಆದ್ಯತೆಯ ಸಾಲಕ್ಕಾಗಿ ಪರಿಗಣಿಸಲಾಗಿದ್ದರೂ ಸಹ ಬ್ಯಾಂಕ್​ಗಳು ವಿಧಿಸುತ್ತಿರುವ ಬಡ್ಡಿ ದರವು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ನೀಡುವ ಸಾಲದ ಬಡ್ಡಿ ದರಕ್ಕಿಂತ ಅಧಿಕವಾಗಿದೆ. ಪಡೆಯುವ ಸಾಲದ ಬಡ್ಡಿಯ ದರವನ್ನು ಕಡಿಮೆ ಮಾಡಬೇಕು. ಪ್ರಸ್ತುತ ಎನ್​ಪಿಎ ಮಾಡದಂಡವು 90 ದಿನಗಳಾಗಿದ್ದು, ಇದನ್ನು 180 ದಿನಗಳಿಗೆ ಏರಿಸಿ ಎಂಎಸ್​ಎಂಇಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಪ್ರಸ್ತುತ ಸಿಜಿಟಿಎಂಎಸ್​ಇ ಕವರೇಜ್ ಅಡಿಯಲ್ಲಿ ಸಾಲಗಾರರ ವರ್ಗವನ್ನು ಅನುಸರಿಸಿ ಶೇ.75 ರಿಂದ 85 ರಷ್ಟು ಸಾಲಗಳನ್ನು ಮಂಜೂರು ಮಾಡಲಾಗುತ್ತಿದೆ. ಆದರೆ 15 ರಿಂದ 25 ರಷ್ಟು ನಷ್ಟದ ಭಯದಿಂದಾಗಿ ಬ್ಯಾಂಕ್‌ಗಳು ಸಾಲವನ್ನು ನೀಡಲು ಹಿಂಜರಿಯುತ್ತಿವೆ. ಈ ಕವರೇಜ್ ಮಿತಿಯನ್ನು ಶೇ.90ರ ವರೆಗೆ ಹೆಚ್ಚಿಸಿದರೆ ಬ್ಯಾಂಕ್​ಗಳು ಯಾವುದೇ ಹಿಂಜರಿಕೆಯಿಲ್ಲದೆ ಸಿಜಿಟಿಎಂಎಸ್ಇ ಕವರೇಜ್ ಅಡಿಯಲ್ಲಿ ಸಾಲ ನೀಡುವಂತಾಗುತ್ತದೆ ಎಂದು ಹೇಳಿದರು.

ಎಂಎಸ್​ಎಂಇ ಸಚಿವಾಲಯ ಉದ್ಯಮ ಪ್ರಮಾಣ ಪತ್ರವನ್ನು ಸಾರ್ವತ್ರಿಕವಾಗಿ ಉತ್ಪಾದನೆ, ಸೇವಾ ವಲಯ ಹಾಗೂ ವ್ಯಾಪಾರಗಳಂತಹ ಎಲ್ಲಾ ಕ್ಷೇತ್ರಗಳಿಗೆ ನೀಡುತ್ತಿರುವುದರಿಂದ ಸ್ಪಷ್ಟತೆ ಇಲ್ಲದೆ ಗೊಂದಲವಾಗುತ್ತಿದೆ. ಉದಾಹರಣೆಗೆ ನಿರ್ಮಾಣ ವಲಯವನ್ನು ಸೇವಾ ವಲಯವಾಗಿ ಪರಿಗಣಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಇದರಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಮೀಸಲಾದ ಎಂಎಸ್​ಇಎಫ್​ಸಿ ಕೌನ್ಸಿಲ್​ನಲ್ಲಿ ಹೆಚ್ಚಿನ ಸಂಸ್ಥೆಗಳು ನಿರ್ಮಾಣ ವಲಯಕ್ಕೆ ಸೇರಿದವು ಇರುತ್ತವೆ. ಆಗ ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ಸಿಗುವುದಿಲ್ಲ. ಆದ್ದರಿಂದ ಉದ್ಯಮ ಪ್ರಮಾಣ ಪತ್ರವನ್ನು ನೀಡುವಾಗ, ಹೆಚ್ಚು ಸ್ಪಷ್ಟತೆಯನ್ನು ಹೊಂದಲು ವರ್ಗವಾರು ಸೂಚ್ಯಂಕವನ್ನು ರಚಿಸಬೇಕು ಎಂದು ರಾಜಗೋಪಾಲ್ ಮನವಿ ಮಾಡಿದರು.

ಓದಿ: ಸಾರ್ವಜನಿಕ ಉದ್ದಿಮೆಗಳು ದೇಶದ ಎಂಎಸ್‌ಎಂಇ ಗಳಿಂದ ಕಚ್ಚಾವಸ್ತು ಖರೀದಿಗೆ ಆದ್ಯತೆ ನೀಡಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ - Union Minister Shobha Karandlaje

ETV Bharat Logo

Copyright © 2024 Ushodaya Enterprises Pvt. Ltd., All Rights Reserved.