ETV Bharat / state

ಸಂಪುಟ ದರ್ಜೆ ಸಚಿವ ಸ್ಥಾನ ಮಿಸ್, ಮತ್ತೊಮ್ಮೆ ರಾಜ್ಯ ಖಾತೆ: ಶೋಭಾ ಕರಂದ್ಲಾಜೆ ಹೇಳಿದ್ದೇನು? - Shobha Karandlaje - SHOBHA KARANDLAJE

ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಕೈ ತಪ್ಪಿದೆ. ಅವರಿಗೆ ಮತ್ತೊಮ್ಮೆ ರಾಜ್ಯ ಖಾತೆ ಸ್ಥಾನ ಲಭಿಸಿದೆ. ಈ ಕುರಿತು ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Miss Cabinet Grade Ministershi  State Ministership  Shobha Karandlaje  Bengaluru
ಶೋಭಾ ಕರಂದ್ಲಾಜೆ (ETV Bharat)
author img

By ETV Bharat Karnataka Team

Published : Jun 10, 2024, 2:05 PM IST

ಬೆಂಗಳೂರು: ''ರಾಜ್ಯಕ್ಕೆ ಮೂರು ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದು, ನನಗೆ ಈಗ ಸಿಕ್ಕಿರುವ ಜವಾಬ್ದಾರಿ ಬಗ್ಗೆ ಖುಷಿ ಇದೆ. ಸಂತಸದಿಂದಲೇ ನನ್ನ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ'' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ ಮಂತ್ರಿ ಮಂಡಲದಲ್ಲಿ ನನಗೆ ಅವಕಾಶ ಕೊಟ್ಟಿದ್ದಾರೆ. ಇದರಿಂದ ನನಗೆ ಆನಂದ ಆಗಿದೆ. ಅವರ ಜೊತೆ ಕೆಲಸ ಮಾಡುವುದೇ ಒಂದು ವಿಶೇಷ ಅನುಭವ ಮತ್ತು ದೊಡ್ಡ ಜವಾಬ್ದಾರಿ ಎಂದು ಬಣ್ಣಿಸಿದರು. ಕರ್ನಾಟಕದಿಂದ 5 ಜನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದೇವೆ. ಯಾವ ಜವಾಬ್ದಾರಿ ಕೊಡಲಿದ್ದಾರೋ ಅದನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮತ್ತು ಮಿಷನ್ 2047ಗೆ ನನ್ನ ಪ್ರಯತ್ನವನ್ನೂ ನಾನು ಮಾಡಲಿದ್ದೇನೆ'' ಎಂದರು.

''ಬೆಂಗಳೂರಿನಲ್ಲಿ ಬಹಳ ದೊಡ್ಡ ಅಂತರದಿಂದ ಗೆಲ್ಲಿಸಿದ್ದಾರೆ. ಇದರ ಶ್ರೇಯ ಮತದಾರರು, ಕಾರ್ಯಕರ್ತರು ಮತ್ತು ಮುಖಂಡರಿಗೆ ಸಿಗಬೇಕು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಾನು ಇಂದು ಏನಾಗಿದ್ದೇನೋ ಅದಕ್ಕೆ ಕಾರ್ಯಕರ್ತರು, ಮುಖಂಡರ ಪ್ರೀತಿ ಮತ್ತು ಜನರ ವಿಶ್ವಾಸ ಕಾರಣ, ಮೋದಿ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ನಾನು ಅವರ ಜೊತೆ ಹೆಜ್ಜೆ ಹಾಕಲಿದ್ದೇನೆ ಎನ್ನುವ ಭರವಸೆಯನ್ನು ನಾಡಿನ ಜನತೆಗೆ ಕೊಡುತ್ತಿದ್ದೇನೆ'' ಎಂದು ಹೇಳಿದರು.

ಕಳೆದ ಬಾರಿ ಮೋದಿ ಅವರ ಸಂಪುಟದಲ್ಲಿ ರಾಜ್ಯ ಖಾತೆ ನಿರ್ವಹಣೆ ಮಾಡಿದ್ದರಿಂದ ಈ ಬಾರಿ ಸಂಪುಟ ದರ್ಜೆಯ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಯಾಕೆ ಸಿಕ್ಕಿಲ್ಲ ಎನ್ನುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ''ಈ ಬಾರಿ ಅನಿವಾರ್ಯತೆ ಇತ್ತು. ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಇದೆ. ನಿರ್ಮಲಾ ಸೀತಾರಾಮನ್ ಹಾಗೂ ಪ್ರಲ್ಹಾದ್ ಜೋಶಿ ಮುಂದುವರೆದಿದ್ದಾರೆ. ಕುಮಾರಸ್ವಾಮಿ ಹೊಸ ಸೇರ್ಪಡೆಯಾಗಿ ಬಂದಿದ್ದಾರೆ. ಮೂರು ಕ್ಯಾಬಿನೆಟ್ ರಾಜ್ಯಕ್ಕೆ ಸಿಕ್ಕಿದೆ. ಯಾವ ಜವಾಬ್ದಾರಿ ನನಗೆ ಸಿಕ್ಕಿದೆಯೋ ಅದರಲ್ಲಿ ನನಗೆ ಖುಷಿಯಾಗಿದೆ ಅದರಲ್ಲೇ ಕೆಲಸ ಮಾಡಲಿದ್ದೇನೆ'' ಎಂದರು.

ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಮೋದಿ ಸಂಪುಟದಲ್ಲಿ ಅವಕಾಶ ಸಿಗಲ್ಲ ಎನ್ನುವ ಸುದ್ದಿ ಹರಿದಾಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ''ಯಾರೋ ಈ ರೀತಿಯ ಊಹಾಪೋಹ ಹಬ್ಬಿಸಿದ್ದಾರೆ. ಕಳೆದ 10 ವರ್ಷದಿಂದ ನನ್ನನ್ನು ಕೇಂದ್ರ ನಾಯಕರು ಗಮನಿಸುತ್ತಿದ್ದಾರೆ. ಪಕ್ಷ, ಚುನಾವಣೆ, ಸರ್ಕಾರದ ಜವಾಬ್ದಾರಿ ಕೊಟ್ಟಾಗ ಹೆಚ್ಚು ಸಮಯ ನೀಡಿ ಕೆಲಸ ಮಾಡಿದ್ದೇನೆ. ಅದಕ್ಕಾಗಿ ಈಗ ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಕೊಟ್ಟ ಜವಾಬ್ದಾರಿ ನಿರ್ವಹಣೆ ಮಾಡುವ ಕೆಲಸ ಮಾಡಲಿದ್ದೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ತೀರ್ಮಾನವನ್ನು ವರಿಷ್ಠರು ಮಾಡುತ್ತಾರೆ: ಸಚಿವ ಜಿ.ಪರಮೇಶ್ವರ್ - G PARAMESHWAR REACTION ON DCM POST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.