ETV Bharat / state

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿ ಯುವಕರ ಪುಂಡಾಟ - Miscreants Damaged Vehicles

ಶಿವಮೊಗ್ಗದ ಹೊಸಮನೆ ಬಡಾವಣೆಯ 3ನೇ ತಿರುವಿನಲ್ಲಿ ಮನೆಗಳ ಎದುರು ನಿಲ್ಲಿಸಲಾಗಿದ್ದ ವಾಹನಗಳನ್ನು ಪುಂಡರು ಹಾನಿಗೊಳಿಸಿದ್ದಾರೆ.

Vehicles Damaged By Youths
ಹಾನಿಗೊಳಗಾದ ವಾಹನ (ETV Bharat)
author img

By ETV Bharat Karnataka Team

Published : May 30, 2024, 12:32 PM IST

ಘಟನಾ ಸ್ಥಳಕ್ಕೆ ಶಾಸಕರ ಭೇಟಿ, ಪರಿಶೀಲನೆ (ETV Bharat)

ಶಿವಮೊಗ್ಗ: ರಸ್ತೆಯಲ್ಲಿ ಬರ್ತ್​ಡೇ ಪಾರ್ಟಿ ನಡೆಸಿದ ಯುವಕರ ಗುಂಪೊಂದು ಮನೆ ಮುಂದೆ ನಿಲ್ಲಿಸಿದ್ದ ಕಾರು, ಆಟೋ, ಬೈಕ್​ಗಳನ್ನು ಜಖಂಗೊಳಿಸಿರುವ ಘಟನೆ ಬುಧವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ.

Vehicles Damaged By Youths
ಆಟೋಗೆ ಹಾನಿ (ETV Bharat)

ಹೊಸಮನೆ ಬಡಾವಣೆಯ ಮೂರನೇ ತಿರುವುವಿನ ಮಾರಿಕಾಂಬ ದೇವಾಲಯ, ಅಂಬೇಡ್ಕರ್ ಭವನದ ಎದುರು ರಾತ್ರಿ ಸ್ಥಳೀಯ ಯುವಕರು ಬರ್ತ್​​ಡೇ ಪಾರ್ಟಿ ನಡೆಸಿದ್ದಾರೆ. ರಸ್ತೆ ಮಧ್ಯೆ ಕೇಕ್ ಕತ್ತರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದಾದ ನಂತರ ಈ ಯುವಕರ ಗುಂಪಿನ ಕೆಲವರು ಇಲ್ಲಿನ ಮನೆಗಳ ಮುಂದೆ ನಿಲ್ಲಿಸಿದ್ದ ಸಾಂಟ್ರೋ ಕಾರು, ಐ-20 ಕಾರು, ಎರಡು ಆಟೋ ಹಾಗೂ ಬೈಕ್​​ಗಳನ್ನು ಜಖಂಗೊಳಿಸಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಶಾಸಕರ ಭೇಟಿ: ವಾಹನಗಳನ್ನು ಜಖಂಗೊಳಿಸಲಾದ ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು.

Vehicles Damaged By Youths
ಕಾರ್​ ಡ್ಯಾಮೇಜ್​ (ETV Bharat)

ಗಾಂಜಾ ನಶೆಯಲ್ಲಿ ದುಷ್ಕೃತ್ಯ: ಹೊಸಮನೆ ಬಡಾವಣೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಘಟನೆ. ಗಾಂಜಾ ಸೇವಿಸುವ ಪುಂಡರ ಗುಂಪು ಈ ಭಾಗದಲ್ಲಿ ಪದೇ ಪದೇ ಇಂತಹ ದುಷ್ಕೃತ್ಯಗಳನ್ನು ಎಸಗುತ್ತಿದೆ. ನಶೆಯಲ್ಲಿ ಮನಸೋಇಚ್ಛೆ ಬೈಕ್‌ನಲ್ಲಿ ಸುತ್ತುವುದು, ಬೆದರಿಸುವುದು, ಸಿಕ್ಕ ಸಿಕ್ಕ ವಾಹನಗಳನ್ನು ಜಖಂಗೊಳಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಐಪಿಪಿಬಿ ಖಾತೆ ಹೊಂದಿದವರಿಗೆ ₹1 ಲಕ್ಷ ವದಂತಿ: ಪೋಸ್ಟ್‌ ಆಫೀಸ್ ಮುಂದೆ ಕ್ಯೂ ನಿಂತ ಮಹಿಳೆಯರು - Women Rush To Post Office

ETV Bharat Logo

Copyright © 2024 Ushodaya Enterprises Pvt. Ltd., All Rights Reserved.