ಹಾವೇರಿ: ''ನಟ ದರ್ಶನ್‌ಗೆ ಜಾಮೀನು ಸಿಕ್ಕಿರುವುದು ನನಗೆ ಖುಷಿ ನೀಡಿದೆ'' ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.
ಜಿಲ್ಲೆಯ ಶಿಗ್ಗಾಂವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ನ್ಯಾಯಾಲಯದಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ ಎಂದು ಗೊತ್ತಾಯಿತು. ಅವರು ನನ್ನ ಆಪ್ತರು. ಆತ್ಮೀಯರಾಗಿರುವ ಕಾರಣಕ್ಕೆ ಜಾಮೀನು ಸಿಕ್ಕಿರುವುದು ಸಹಜವಾಗಿಯೇ ಖುಷಿ ತಂದಿದೆ. ಅವರ ಆರೋಗ್ಯ ವಿಚಾರಿಸುತ್ತೇನೆ'' ಎಂದರು.
"ಈ ಘಟನೆಗೂ ಮುನ್ನ ನಾನು, ದರ್ಶನ್ ಪ್ರತೀ ತಿಂಗಳು ಎರಡು ಬಾರಿ ಭೇಟಿ ಆಗುತ್ತಿದ್ದೆವು" ಎಂದು ಇದೇ ತಿಳಿಸಿದರು.
ವಕ್ಪ್ ಆಸ್ತಿ ಒತ್ತುವರಿ ಆರೋಪ ಕುರಿತ ಪ್ರಶ್ನೆಗೆ, "ಉಪಚುನಾವಣೆ ಸಲುವಾಗಿ ಬಿಜೆಪಿ ಈ ಪ್ರಕರಣವನ್ನು ಎಬ್ಬಿಸಿದ್ದಾರೆ. ಯಾರದ್ದೋ ಆಸ್ತಿಯನ್ನು ಬೇರೆ ಯಾರೋ ತೆಗೆದುಕೊಳ್ಳಲು ಸಾಧ್ಯವೇ?. ಇದೆಲ್ಲಾ ಪೊಲಿಟಿಕಲ್ ಗಿಮಿಕ್. ಅವರಿಗೆ ಯಾವುದೇ ವಿಷಯ ಇಲ್ಲ" ಎಂದರು.
ಇದೇ ವೇಳೆ ಬಸವರಾಜ್ ಬೊಮ್ಮಾಯಿ ಅವರನ್ನು ಟೀಕಿಸುತ್ತಾ, "ಸಿದ್ದರಾಮಯ್ಯನವರು ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡಿದ್ದಾರೆ. ಆದರೆ ಬೊಮ್ಮಾಯಿ ರಾಜ್ಯ ಇರಲಿ, ತಮ್ಮ ಕ್ಷೇತ್ರವನ್ನೂ ಅಭಿವೃದ್ಧಿ ಮಾಡಿಲ್ಲ" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ದರ್ಶನ್‌ಗೆ ಮಧ್ಯಂತರ ಜಾಮೀನು: ಹರ್ಷ ವ್ಯಕ್ತಪಡಿಸಿದ ನಿರ್ದೇಶಕ ನಂದಕಿಶೋರ್; ನಟನ ಮನೆ, ಕಾರು ಶುಚಿಗೊಳಿಸಿದ ಕೆಲಸಗಾರರು
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 8 ಸಾವಿರ ಮತಗಳ ಲೀಡ್ ಸಿಕ್ಕಿತ್ತು. ಆಗ ಬೊಮ್ಮಾಯಿ ಶೇಂಗಾ ಬೀಜ ತಿನ್ನುತ್ತಿದ್ದರಾ? ಎಂದು ಜಮೀರ್ ಇದೇ ವೇಳೆ ಟೀಕಿಸಿದರು.
ಇದನ್ನೂ ಓದಿ: 'ಟಾಕ್ಸಿಕ್' ಶೂಟಿಂಗ್ ಸ್ಪಾಟ್ಗೆ ಸಚಿವ ಈಶ್ವರ್ ಖಂಡ್ರೆ ಭೇಟಿ: ಮತ್ತೆ ಸಂಕಷ್ಟದಲ್ಲಿ ಯಶ್ ಸಿನಿಮಾ
ದರ್ಶನ್‌ಗೆ ಸಿಕ್ತು ಮಧ್ಯಂತರ ಜಾಮೀನು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅವರಿಗೆ ಇಂದು ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಈ ಆದೇಶ ಹೊರಡಿಸಿದರು.