ETV Bharat / state

ಹಾನಗಲ್​ ಅತ್ಯಾಚಾರ ಪ್ರಕರಣ: ಮಾಧ್ಯಮಗಳ ಪ್ರಶ್ನೆಗೆ ಸಚಿವ ಶಿವಾನಂದ ಪಾಟೀಲ್​ ಗರಂ - minister sivananda patil

ಹಾನಗಲ್​ನಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಮಾಧ್ಯಮದವರು ಕೇಳಿದ ಸಾಲು ಸಾಲು ಪ್ರಶ್ನೆಗಳಿಗೆ ಸಚಿವ ಗರಂ ಆದ ಘಟನೆ ಇಂದು ಹಾವೇರಿಯಲ್ಲಿ ನಡೆದಿದೆ.

Minister Shivananda Patil
ಸಚಿವ ಶಿವಾನಂದ ಪಾಟೀಲ್​
author img

By ETV Bharat Karnataka Team

Published : Jan 26, 2024, 8:02 PM IST

Updated : Jan 26, 2024, 8:33 PM IST

ಸಚಿವ ಶಿವಾನಂದ ಪಾಟೀಲ್

ಹಾವೇರಿ: ಜಿಲ್ಲೆ ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಕೆಲಕಾಲ ಗರಂ ಆದ ಘಟನೆ ಹಾವೇರಿಯಲ್ಲಿ ನಡೆಯಿತು.

ಧ್ವಜಾರೋಹಣ ನಡೆಸಿ ಸುದ್ದಿಗೋಷ್ಠಿಗೆ ಆಗಮಿಸಿದ ಸಚಿವ ಪಾಟೀಲ್‌ಗೆ ಹಾನಗಲ್‌ನಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಗುವಂತಹ ಘಟನೆ ನಡೆದಿದೆ. ಇಷ್ಟಾದರೂ ರಾಜ್ಯ ಸರ್ಕಾರ ಯಾವ ಪ್ರತಿನಿಧಿಯು ಸಂತ್ರಸ್ತೆಯನ್ನು ಭೇಟಿಯಾಗಿಲ್ಲವೇಕೆ?. ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವೆ, ಕೊನೆ ಪಕ್ಷ ಜಿಲ್ಲಾ ಉಸ್ತುವಾರಿ ಸಚಿವರಾದ ನೀವಾದರೂ ಸಂತ್ರಸ್ತೆಗೆ ಸಾಂತ್ವನ ಹೇಳಿಲ್ಲ ಯಾಕೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದರು.

ಈ ವೇಳೆ ಪ್ರತಿಕ್ರಿಯಿಸಿದ ಪಾಟೀಲ್, "ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡಿದೆ. ಮಾಧ್ಯಮದವರು ತಿಳಿದುಕೊಂಡಂತೆ ಆಗಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 19 ಆರೋಪಿಗಳನ್ನು ಬಂಧಿಸಲಾಗಿದೆ. ವಿಷಯವನ್ನು ಮಾಧ್ಯಮದವರು ಸೆನ್ಸಿಟಿವ್ ಮಾಡುತ್ತಿದ್ದಾರೆ" ಎಂದು ಗರಂ ಆದರು.

"8ಕ್ಕೆ ಘಟನೆ ನಡೆದರೂ, ಬೆಳಕಿಗೆ ಬಂದಿದ್ದು 10ಕ್ಕೆ. ಅಲ್ಲಿನ ಲಾಡ್ಜ್​ ಮಾಲೀಕರು ಈ ಕುರಿತಂತೆ ಪೊಲೀಸರಿಗೆ ದೂರು ನೀಡಬೇಕಾಗಿತ್ತು. ಯಾಕೆ ನೀಡಿಲ್ಲ?" ಎಂದು ಪ್ರಶ್ನಿಸಿದ ಸಚಿವ, "ಯಾವುದೇ ಪಕ್ಷ, ಜಾತಿ ನೋಡದೇ ಆರೋಪಿಗಳನ್ನು ಬಂಧಿಸಿದ್ದೇವೆ" ಎಂದು ತಿಳಿಸಿದರು.

"ಪ್ರಕರಣದ ಬಗ್ಗೆ ಬಹಳ ಗಮನ ಇಟ್ಟು, ನಾನು ನೋಡುತ್ತಿದ್ದೇನೆ. ಕೂಲಂಕಷವಾಗಿ ತನಿಖೆ ನಡೆದ ನಂತರ ಆರೋಪಿಗಳು ಯಾರೇ ಆಗಿರಲಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಸಂತ್ರಸ್ತೆಗೆ ಪರಿಹಾರ ಹಾಗೂ ನ್ಯಾಯವನ್ನೂ ಕೊಡಿಸುತ್ತೇವೆ. ಪ್ರಕರಣದಲ್ಲಿ ನೈತಿಕ ಪೊಲೀಸ್​ಗಿರಿ ಮಾಡಿದ ಆರೋಪಿಗಳ ವಿರುದ್ಧ ನಮ್ಮ ಸರ್ಕಾರ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಘಟನೆ ನಡೆದಾಗ ಪ್ರಕರಣ ದಾಖಲಿಸದ ಹೋಟೆಲ್ ಮಾಲೀಕ ಕೂಡ ಆರೋಪಿ ಸ್ಥಾನದಲ್ಲಿದ್ದಾನೆ. ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಜಾಲ ಬೀಸಿತ್ತು." ಎಂದು ಹೇಳಿದರು.

ಪ್ರಕರಣ ನಡೆದಾಗಿನಿಂದ ಇಲ್ಲಿಯವರೆಗೆ ನೀವು ಬರಲೇ ಇಲ್ಲ ಎಂದು ಪತ್ರಕರ್ತರು ಹೇಳುತ್ತಿದ್ದಂತೆ ಮತ್ತಷ್ಟು ಕೋಪಗೊಂಡ ಸಚಿವರು, "ಅಲ್ರಿ ನಾನು ಬಂದರೆ ಪರಿಹಾರ ಸಿಗುತ್ತೆ ಅನ್ನುವಂತಿದ್ದರೆ, ನಾನು ಪ್ರತಿದಿನ ಇಲ್ಲಿಯೇ ಇರುತ್ತಿದ್ದೆ. ಸಂತ್ರಸ್ತೆಗೆ ಮಾಧ್ಯಮದವರು ಧೈರ್ಯ ತುಂಬಿದ್ದಾರೆ. ನಾವು ಸಹ ಧೈರ್ಯ ತುಂಬಿದ್ದೇವೆ" ಎಂದು ಉತ್ತರಿಸಿದರು.

ಜಗದೀಶ್​ ಶೆಟ್ಟರ್ ಮರಳಿ ಬಿಜೆಪಿಗೆ ಸೇರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಈ ಕುರಿತಂತೆ ಶೆಟ್ಟರ್​ ಅವರನ್ನೇ ಕೇಳಿ" ಎಂದು ಜಾರಿಕೊಂಡರು. ಸಚಿವ ಶಿವಾನಂದ ಪಾಟೀಲ್ ಹಾವೇರಿ ಶಾಸಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರಾ? ಎನ್ನುವ ಪ್ರಶ್ನೆಗೆ, "ನಾನು ಅಂತರ ಕಾಯ್ದುಕೊಳ್ಳುತ್ತಿಲ್ಲ ನೀವು ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಬೇಡಿ. ಇಲ್ಲಿ ನಾನು ಮಾಧ್ಯಮದ ಕುರಿತಂತೆ ಹೇಳಿಕೆ ನೀಡಿಲ್ಲ" ಎಂದು ಪಾಟೀಲ್ ಜಾರಿಕೊಂಡರು.

"ಹಾವೇರಿ- ಗದಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷದಲ್ಲಿ ಕೆಲವರು ಅರ್ಜಿ ಹಾಕಿದ್ದಾರೆ. ಅದರಲ್ಲಿ ಪ್ರಮುಖವಾಗಿ ಎರಡು ಅಭ್ಯರ್ಥಿ ಅಕಾಂಕ್ಷಿಗಳಿದ್ದು, ಸಾಮರಸ್ಯದಿಂದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಕಾಂಗ್ರೆಸ್‌ನಲ್ಲಿ ಸಚಿವರಿಗೆ, ಶಾಸಕರಿಗೆ, ಸಿಎಂಗೆ ಸಹ ಟಾಸ್ಕ್ ನೀಡಲಾಗಿದೆ" ಎಂದು ತಿಳಿಸಿದರು.

ಗೌರವ ವಂದನೆ ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್

ಗಣರಾಜ್ಯೋತ್ಸವ ಆಚರಣೆ: ಹಾವೇರಿಯ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಧ್ವಜಾರೋಹಣ ನೇರವೇರಿಸಿದರು. ನಂತರ ತೆರೆದ ವಾಹನದಲ್ಲಿ ವಿವಿಧ ಪ್ಲಟೋನ್‌ಗಳಿಂದ ಗೌರವ ವಂದನೆ ಸ್ವೀಕರಿಸಿದರು. ಸುಮಾರು 19ಕ್ಕೂ ಅಧಿಕ ಪ್ಲಟೋನ್‌ಗಳ ಪಥಸಂಚಲನ ಆಕರ್ಷಣೀಯವಾಗಿತ್ತು. ನಂತರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈದಾನದಲ್ಲಿ ಹೊಸ ಲೋಕವನ್ನೇ ಅನಾವರಣಗೊಳಿಸಿದವು. ರಾಷ್ಟ್ರ ಭಕ್ತಿಗೀತೆಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು. ಸ್ವಾತಂತ್ರ ಹೋರಾಟಗಾರರ ವೇಷ ಧರಿಸಿದ ಮಕ್ಕಳು ರಾಷ್ಟ್ರಪ್ರೇಮ ಮೆರೆದರು.

ಇದನ್ನೂ ಓದಿ: ವಿದೇಶಿ ಸೇರಿ ವಿವಿಧ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ: ಎಂ.ಬಿ.ಪಾಟೀಲ್

Last Updated : Jan 26, 2024, 8:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.