ETV Bharat / state

ಆರ್​​ಸಿಬಿ ಕನ್ನಡ ಫ್ಯಾನ್ ಪೇಜ್ ಮಾಡದಿದ್ದರೆ ನೋಟಿಸ್ ನೀಡುತ್ತೇವೆ: ಸಚಿವ ಶಿವರಾಜ್ ತಂಗಡಗಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕನ್ನಡ ಫ್ಯಾನ್ ಪೇಜ್ ಮಾಡದಿದ್ದರೆ ಈ ಸಂಬಂಧ ನೋಟಿಸ್ ನೀಡಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

shivaraj tangadagi
ಶಿವರಾಜ್ ತಂಗಡಗಿ (ETV Bharat)
author img

By ETV Bharat Karnataka Team

Published : Nov 29, 2024, 8:25 PM IST

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕನ್ನಡ ಫ್ಯಾನ್ ಪೇಜ್ ಮಾಡದೇ ಇದ್ದರೆ ಇಲಾಖೆಯ ಕಾರ್ಯದರ್ಶಿ ಮೂಲಕ ನೋಟಿಸ್ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಲ್ಲಿ ಈ ವಿಚಾರವಾಗಿ ಶುಕ್ರವಾರ ಮಾತನಾಡಿದ ಅವರು, ''ಆರ್​​ಸಿಬಿಯನ್ನು ನಾವು ಗೌರವಿಸುತ್ತೇವೆ. ಅದು ನಮ್ಮ‌ ಕರ್ನಾಟಕದ ತಂಡ. ಅದು ಎಷ್ಟೇ ಬಾರಿ ಸೋಲಲಿ. ಅದರ ಬಗ್ಗೆ ನಮಗೆ ಗೌರವ ಭಾವನೆ ಇದೆ. ಅದು ಅತಿ ಹೆಚ್ಚು ಕನ್ನಡಿಗ ಅಭಿಮಾನಿಗಳನ್ನು ಹೊಂದಿದೆ. ಹೀಗಾಗಿ, ಅವರಿಗೆ ನಾವು ಕನ್ನಡಿಗರಿಗೆ ನೋವು ಮಾಡಬೇಡಿ ಎಂದಿದ್ದೇನೆ'' ಎಂದರು.

''ಕನ್ನಡಿಗರು ಅಂದರೆ ನಿಮಗೆ ಅಭಿಮಾನ ಇರಲಿ. ಆರ್​​ಸಿಬಿ ಕನ್ನಡ ಪೇಜ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅವರು ಅದನ್ನು ಬದಲಾವಣೆ ಮಾಡಬಹುದು. ಅವರು ಕನ್ನಡ ಪೇಜ್ ಮಾಡಿದ್ದರೆ ಅದನ್ನು ಅಭಿನಂದಿಸುತ್ತೇನೆ. ಇಲ್ಲವಾದರೆ, ಇಲಾಖೆ ಕಾರ್ಯದರ್ಶಿ ಮೂಲಕ ಅವರನ್ನು ಕರೆದು ಮಾತನಾಡಿ, ಮುಂದೆ ಯಾರಿಗೆ ನೊಟೀಸ್ ಕೊಡಿಸಬೇಕು ಎಂಬುದನ್ನು ನಿರ್ಧಾರ ಮಾಡುತ್ತೇವೆ'' ಎಂದು ತಿಳಿಸಿದರು.

ಸಚಿವ ಶಿವರಾಜ್ ತಂಗಡಗಿ (ETV Bharat)

ಆರ್​​ಸಿಬಿ ವಿರುದ್ಧ ತೀವ್ರ ಆಕ್ರೋಶ: ಸಾಮಾಜಿಕ ಜಾಲತಾಣದಲ್ಲಿ ಆರ್​​ಸಿಬಿ ಹಿಂದಿ ಫ್ಯಾನ್ ಪೇಜ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆರ್ ಸಿಬಿ ಕನ್ನಡ ಪೇಜ್ ಇಲ್ಲ ಎಂದು ಆಕ್ಷೇಪಿಸಿ ಮುಗಿ ಬಿದ್ದಿದ್ದಾರೆ. ಇತ್ತ ಕನ್ನಡ ಪರ ಸಂಘಟನೆಗಳೂ ಆರ್​​ಸಿಬಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕರವೇ ಅಧ್ಯಕ್ಷ ನಾರಾಯಣ ಗೌಡ ಟ್ವೀಟ್ ಮಾಡಿ, ''ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿ ಹೇರುವುದು ಅವರ ಉದ್ದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗಿಲ್ಲ‌'' ಎಂದಿದ್ದರು.

ಇದನ್ನೂ ಓದಿ: IPL ಆರಂಭಕ್ಕೂ ಮುನ್ನವೇ ವಿವಾದಕ್ಕೆ ಸಿಲುಕಿದ RCB: ಅಭಿಮಾನಿಗಳ ಆಕ್ರೋಶ

''ಕನ್ನಡಿಗರ ಪ್ರೀತಿ, ಅಭಿಮಾನಗಳಿಂದ ಆರ್​ಸಿಬಿ ಬೆಳೆದಿದೆ. ಆದರೆ, ಅದು ಮಾಡಿರುವ ವಿಶ್ವಾಸಘಾತಕತನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ತನ್ನ ತಪ್ಪುಗಳನ್ನು ಈ ಕೂಡಲೇ ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಮುಂದಿನ ಪರಿಣಾಮಗಳಿಗೆ ನಾವು ಹೊಣೆಯಲ್ಲ'' ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: RCBಗೆ ಕೊಹ್ಲಿ ನಾಯಕನಾಗುವ ಸಾಧ್ಯತೆ, ಆದರೆ ತಂಡದಲ್ಲೊಂದು ಕೊರತೆ- ಎಬಿ ಡಿವಿಲಿಯರ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.