ETV Bharat / state

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಕಲಿ ಕಾರ್ಮಿಕರ ಪತ್ತೆಗೆ ಕಾಲಾವಕಾಶ ಬೇಕು; ಸಚಿವ ಸಂತೋಷ್ ಲಾಡ್ - ನಕಲಿ ಫಲಾನುಭವಿಗಳು

ಕಾರ್ಡ್ ಪಡೆದವರಲ್ಲೂ ಬಹಳಷ್ಟು ಮಂದಿ ನಕಲಿ ಫಲಾನುಭವಿಗಳಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬೇಸರ ವ್ಯಕ್ತಪಡಿಸಿದರು.

ಸಚಿವ ಸಂತೋಷ್ ಲಾಡ್
ಸಚಿವ ಸಂತೋಷ್ ಲಾಡ್
author img

By ETV Bharat Karnataka Team

Published : Feb 13, 2024, 3:59 PM IST

Updated : Feb 13, 2024, 4:15 PM IST

ವಿಧಾನಸಭೆ ಅಧಿವೇಶನ

ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದವರಲ್ಲಿ ಅನರ್ಹರ ಸಂಖ್ಯೆ ಹೆಚ್ಚಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಧಾನಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ, ಮಂಡಳಿ ವತಿಯಿಂದ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಆರು ವರ್ಷಗಳಿಂದ ಇದ್ದಷ್ಟೆ ಕಾರ್ಮಿಕರ ಸಂಖ್ಯೆ ಈಗಲೂ ಇದೆ. ಬಡವರಿಗೆ ಯೋಜನೆಯ ಸೌಲಭ್ಯ ತಲುಪಿಸಲು ಸರ್ಕಾರ ಮತ್ತಷ್ಟು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಶಾಸಕ ಟಿ. ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಸೇರಿದಂತೆ ಹಲವು ಶಾಸಕರು ಮಧ್ಯ ಪ್ರವೇಶ ಮಾಡಿ, ಕಾರ್ಮಿಕರ ನೋಂದಣಿ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಗುತ್ತಿಗೆದಾರರು ಕೆಲಸ ಮಾಡಿದ ವಿವರಗಳನ್ನು ಕಾರ್ಮಿಕರಿಂದ ಪಡೆಯುವ ನಿಯಮಗಳನ್ನು ಅಳವಡಿಸಲಾಗಿದೆ. ಇದು ಸರಿಯಲ್ಲ, ಸರ್ಕಾರ ಕಾರ್ಮಿಕರಿಗೆ ಸೌಲಭ್ಯ ಹೆಚ್ಚು ನೀಡುತ್ತಿರುವುದರಿಂದ ಹೆಚ್ಚಿನ ಜನ ನೋಂದಣಿಗೆ ಮುಂದಾಗಿದ್ದಾರೆ. ನಕಲಿಗಳನ್ನು ತಡೆದು, ನಿಯಮಾವಳಿಗಳನ್ನು ಸರಳೀಕರಣಗೊಳಿಸಿ ಎಂದು ಸಲಹೆ ನೀಡಿದರು.

ಈ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ರಾಜ್ಯದಲ್ಲಿ 2016ರಲ್ಲಿ ನಾನು ಕಾರ್ಮಿಕ ಸಚಿವನಾಗಿ ಕೆಲಸ ಮಾಡಿದ್ದೇನೆ. ಅವಾಗ 12 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದರು. ಈಗ 53 ಲಕ್ಷ ನೋಂದಣಿಯಾಗಿದೆ. ಅದರಲ್ಲಿ ಏಳು ಲಕ್ಷ ಅನರ್ಹರನ್ನು ತಿರಸ್ಕಾರ ಮಾಡಿ, 42 ಲಕ್ಷ ಮಂದಿಗೆ ಕಾರ್ಡ್ ನೀಡಿದ್ದೇವೆ ಎಂದು ತಿಳಿಸಿದರು‌.

ಕಾರ್ಡ್ ಪಡೆದವರಲ್ಲೂ ಬಹಳಷ್ಟು ಮಂದಿ ನಕಲಿ ಫಲಾನುಭವಿಗಳಿವೆ. ಹಾವೇರಿ ಜಿಲ್ಲೆಯಲ್ಲಿ ಮೂರು ಲಕ್ಷ ನೋಂದಣಿ ಇದೆ. ಅದರಲ್ಲಿ ಶೇ. 2.70 ಲಕ್ಷ ನಕಲಿ ಫಲಾನುಭವಿಗಳಿದ್ದರೆ, 70 ಸಾವಿರ ಮಾತ್ರ ಅಸಲಿಯಾಗಿದೆ ಎಂದು ಹೇಳಿದರು.

ಮಂಡಳಿಯ ನೋಂದಣಿಗೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನೇ ರಾಜ್ಯ ಸರ್ಕಾರ ಪಾಲನೆ ಮಾಡುತ್ತಿದೆ. ನಕಲಿಗಳನ್ನು ಪತ್ತೆ ಹಚ್ಚಿ ಎಲ್ಲವನ್ನೂ ಸರಿ ಪಡಿಸಲು ಕಾಲಾವಕಾಶ ಬೇಕಿದೆ. ಸದಸ್ಯರು ಸಹಕರಿಸಿದರೆ ಶೀಘ್ರವೇ ಎಲ್ಲವನ್ನು ತಹಬದಿಗೆ ತರುತ್ತೇನೆ ಎಂದು ಭರವಸೆ ನೀಡಿದರು.

ಕಲ್ಯಾಣ ಮಂಡಳಿಯಿಂದ ನೈಜ ಕಾರ್ಮಿಕರಿಗೆ ಮನೆ ಕಟ್ಟಿ ಕೊಡಲು ಪ್ರಯತ್ನಿಸಲಾಗುವುದು, ಜಿಲ್ಲಾ ಕೇಂದ್ರಗಳಲ್ಲಿ ಮಂಡಳಿಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.

ಇದನ್ನೂ ಓದಿ: ಭಾರತ್ ರೈಸ್ ಹೆಸರಲ್ಲಿ ದೇಶವನ್ನ ಆರ್ಥಿಕ ದಿವಾಳಿಗೆ ನೂಕಲಾಗುತ್ತಿದೆ: ಸಚಿವ ಮುನಿಯಪ್ಪ

Last Updated : Feb 13, 2024, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.