ETV Bharat / state

'ರಾಹುಲ್​ ಗಾಂಧಿ ಕೈಯಲ್ಲಿರುವ ಸಂವಿಧಾನ ಬುಕ್​ ಬೈಬಲ್ ರೀತಿ ಕಾಣುತ್ತಿದೆ ಎಂದರೆ ಅವರನ್ನೇ ಕೇಳಬೇಕು' - Santosh Lad

author img

By ETV Bharat Karnataka Team

Published : Jun 24, 2024, 1:05 PM IST

ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅವರು 'ರಾಹುಲ್​​​ ಗಾಂಧಿ ಹಿಡಿದಿಕೊಳ್ಳುವ ಪುಸ್ತಕ ಬೈಬಲ್' ರೀತಿ ಕಾಣುತ್ತಿದೆ ಎಂದು ನೀಡಿರುವ ಹೇಳಿಕೆಗೆ ​​ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ. ನೀಟ್​ ಪರೀಕ್ಷೆ ಗೊಂದಲ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೂ ಅವರು ಮಾತನಾಡಲಿ ಎಂದಿದ್ದಾರೆ.

ಸಚಿವ ಸಂತೋಷ ಲಾಡ್
ಸಚಿವ ಸಂತೋಷ ಲಾಡ್ (ETV Bharat)

ಸಚಿವ ಸಂತೋಷ ಲಾಡ್ ಹೇಳಿಕೆ (ETV Bharat)

ಧಾರವಾಡ: ರಾಹುಲ್​​​ ಗಾಂಧಿ ಹಿಡಿದ ಪುಸ್ತಕ ಬೈಬಲ್​​ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿಕೆ ವಿಚಾರಕ್ಕೆ 'ರಾಹುಲ್​ ಗಾಂಧಿ ಯಾವಾಗಲು ಸಂವಿಧಾನ ಬುಕ್​ ಹಿಡಿದುಕೊಂಡು ಇರುತ್ತಾರೆ. ಅಂತಹ ಬುಕ್​ ಬೆಲ್ಲದವರಿಗೆ ಬೈಬಲ್​ ರೀತಿ ಕಾಣುತ್ತದೆ ಅಂದರೆ ಅವರನ್ನೇ ಕೇಳಬೇಕು. ಇಲ್ಲ ಅವರು ಕಣ್ಣು ಚೆಕ್​ ಮಾಡಬೇಕು' ಎಂದು ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ತುರ್ತು ಪರಿಸ್ಥಿತಿ ಹೇರಿದ ದಿನವನ್ನು ವಿರೋಧಿ ದಿನ ಎಂದು ಬಿಜೆಪಿ ಕಾರ್ಯಕ್ರಮದ ಬಗ್ಗೆ ಲಾಡ್​ ಪ್ರತಿಕ್ರಿಯಿಸಿ, "ಅವರಿಗೆ ಮಾಡಲಿಕ್ಕೆ ಅಧಿಕಾರ ಇದೆ, ಮಾಡಲಿ. ಮೋದಿ ಸಾಹೇಬರು ಮಾಡೋದರ ಬಗ್ಗೆ ಸ್ವಲ್ಪ ಮಾತನಾಡುತ್ತಾರಾ? ನೀಟ್ ಬಗ್ಗೆ ಮಾತನಾಡುತ್ತಾರಾ?. 25 ಲಕ್ಷ ವಿದ್ಯಾರ್ಥಿಗಳ‌ ಪರಿಸ್ಥಿತಿ ಏನಾಗಿದೆ?. ಅದರ ಜೊತೆ ಎಲೆಕ್ಷನ್​ ಬಾಂಡ್ ಬಗ್ಗೆಯೂ ಮಾತನಾಡೋಕೆ ಹೇಳಿ ಸ್ವಲ್ಪ. ಇಂತಹ ವಿಚಾರಗಳನ್ನು ಸ್ವಲ್ಪ ಮಾತನಾಡಬೇಕು ಅವರು. ಯಾಕಂದರೆ ಇಂತಹ ವಿಚಾರ ಮಾತನಾಡೋದು ಉತ್ತಮ" ಎಂದು ವಾಗ್ದಾಳಿ ನಡೆಸಿದರು.

ಮುಂದುವರೆದು, ಕಾಂಗ್ರೆಸ್​ ಸರ್ಕಾರದಿಂದ ಶಾಸಕರಿಗೆ ಯಾವುದೇ ಅನುದಾನ ಇಲ್ಲ ಎನ್ನುವ ವಿಚಾರಕ್ಕೆ "ರಾಜ್ಯ ಸರ್ಕಾರದ್ದು ಇರಲಿ, ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ ಕೇಳಿ. ಈ ರೀತಿ ಆರೋಪ ಮಾಡೋದು ಹೊಸದೇನಲ್ಲ. ಸಹಜವಾಗಿ ಅವರು ಆರೋಪ ಮಾಡುತ್ತಾರೆ ಎಂದರು.

ಇದನ್ನೂ ಓದಿ: ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಘೋರ ಅಪಚಾರ ಮಾಡಿದ್ದರು: ಅರವಿಂದ ಬೆಲ್ಲದ್ - Arvind Bellad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.