ETV Bharat / state

ಕುಮಾರಸ್ವಾಮಿಗೆ ಅಭದ್ರತೆ ಕಾಡ್ತಿದೆ, ಅದಕ್ಕೆ ಡಿಕೆಶಿ ಟಾರ್ಗೆಟ್ ಮಾಡ್ತಿದ್ದಾರೆ: ಸಚಿವ ಚಲುವರಾಯಸ್ವಾಮಿ ಕಿಡಿ - Minister N Chaluvarayaswamy - MINISTER N CHALUVARAYASWAMY

ಸಚಿವ ಎನ್ ಚಲುವರಾಯಸ್ವಾಮಿ ಅವರು ಹಾಸನ ಪೆನ್​ಡ್ರೈವ್​ ಪ್ರಕರಣದ ಕುರಿತು ಮಾತನಾಡಿದರು.

minister-n-chaluvarayaswamy
ಸಚಿವ ಚಲುವರಾಯಸ್ವಾಮಿ (ETV Bharat)
author img

By ETV Bharat Karnataka Team

Published : May 9, 2024, 9:18 PM IST

ಸಚಿವ ಚಲುವರಾಯಸ್ವಾಮಿ (ETV Bharat)

ಮಂಡ್ಯ: ಒಬ್ಬ ಮಾಜಿ ಮುಖ್ಯಮಂತ್ರಿಯಾದರೂ ಹಾದಿ ಬೀದಿ ರಂಪಾಟ ಮಾಡ್ತಿರೋದು ಎಷ್ಟು ಸರಿ?. ಇದರ ಬಗ್ಗೆ ಮಾತನಾಡೋದಕ್ಕೆ ನಮಗೆ ಮುಜುಗರ ಆಗಿದೆ ಎಂದು ಕಾಂಗ್ರೆಸ್ ಹಾಗೂ ಡಿಕೆಶಿ ವಿರುದ್ಧ ಜೆಡಿಎಸ್ ಪ್ರತಿಭಟನೆ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಹಿಳೆ ಮಾನ ತೆಗೆದವರು ಯಾರು?. ಈ ಘಟನೆ ನಡೆದಿರುವುದಕ್ಕೆ ಯಾರ ಕುಟುಂಬ ಕಾರಣ? ಯಾವ ಸಾಧನೆಗಾಗಿ ಪ್ರತಿಭಟನೆ ಮಾಡಿಸುತ್ತಿದ್ದಾರೆ?. ತಮ್ಮ ಹುಡುಗ ಮಾಡಿದ್ದು ಸರಿಯಿದೆ ಅನ್ನುವ ಸಂತೋಷಕ್ಕಾ?. ಇಷ್ಟೊಂದು ಕುಟುಂಬ ಇಂದು ಬೀದಿಗೆ ಬಂದಿದೆ. ಪಕ್ಕದ ಮನೆ ಮದುವೆಗೆ ಹೋಗಲು ಯೋಚಿಸುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡಲಾಗದ ಪರಿಸ್ಥಿತಿ ಬಂದಿದೆ ಎಂದರು.

ರೇವಣ್ಣ ಕುಟುಂಬ, ನನ್ನ ಕುಟುಂಬ ಬೇರೆ ಬೇರೆ ಎಂಬ ಹೆಚ್​​ಡಿಕೆ ಹೇಳಿಕೆ ವಿಚಾರಕ್ಕೆ ಹೌದಾ, ಇವಾಗ ಯಾರ ಪರ ಪ್ರತಿಭಟನೆ ಮಾಡ್ತಿದ್ದಾರೆ?. ಸಂತ್ರಸ್ತ ಹೆಣ್ಣುಮಕ್ಕಳ ಬಗ್ಗೆ ಅನುಕಂಪ ತೋರಲಿಲ್ಲ‌. ಅವರಲ್ಲಿ ಕ್ಷಮೆ ಕೂಡ ಕೇಳಲಿಲ್ಲ. ಅನ್ಯಾಯ ಆದವರಿಗೆ ನಿಮ್ಮ ಪರ ಇದ್ದೀವಿ ಎನ್ನಲಿಲ್ಲ. ಪ್ರಜ್ವಲ್​ನ ಕರೆಸುವ ಜವಾಬ್ದಾರಿ ಯಾರದ್ದು?. ಸಾಮಾನ್ಯ ವ್ಯಕ್ತಿ ಆರೋಪಿ ಹೊರಗೆ ಹೋದರೆ ಅವರಪ್ಪ, ಅಣ್ಣನನ್ನ ಕರೆಸಿ ಕೂರಿಸ್ತೀರಾ? ಕುಮಾರಸ್ವಾಮಿಯೇ ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್​ನ ಕರೆಸಬೇಕಲ್ವ? ಪ್ರಜ್ವಲ್ ಕುಮಾರಸ್ವಾಮಿಯ ಅಣ್ಣನ ಮಗ. ಪೆನ್​ಡ್ರೈವ್ ಎಲ್ಲಿಂದ ಬಂತು?. ವಿಡಿಯೋ ರೆಕಾರ್ಡ್ ಮಾಡಿದವರು ಯಾರು?. ಸಂತ್ರಸ್ತರನ್ನ ಬೀದಿಗೆ ತಂದವರು ಯಾರು? ಎಂದು ಪ್ರಶ್ನಿಸಿದರು.

ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು, ರಾಜ್ಯದ ಉಪಮುಖ್ಯಮಂತ್ರಿಗಳು. ಅವರ ಬಳಿ ಸಂತ್ರಸ್ತರು, ಸಂತ್ರಸ್ತರ ಪರ ಇರುವವರು ಭೇಟಿ ಮಾಡಿ ಮಾಹಿತಿ ನೀಡಿ ಚರ್ಚೆ ಮಾಡಿದರೆ ತಪ್ಪೇನು?. ಚರ್ಚೆ ಮಾಡೋದು ಅಪರಾಧನಾ?. ತನಿಖೆ ಆಗೋವರೆಗೂ ಕಾಯುವ ತಾಳ್ಮೆ ಜೆಡಿಎಸ್​ನವರಿಗೆ ಇಲ್ಲ. ರಾಜ್ಯದ ಹಲವು ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿದರೆ, ಕರ್ನಾಟಕದ ತನಿಖೆ ಸಂಸ್ಥೆಯಿಂದ ಸಿಬಿಐ ಮಾಡಿದ ತನಿಖೆಗಳೆಲ್ಲ ಕ್ಲೀನ್ ಚಿಟ್ ಆಗಿವೆ. ಇಲ್ಲ ಮೂಲೆ ಸೇರಿವೆ. ಈ ಹಿಂದೆ ಕುಮಾರಸ್ವಾಮಿಯೇ ರಾಜ್ಯದ ಪೊಲೀಸರನ್ನ ಸಮರ್ಥರು, ದಕ್ಷರು ಎಂದಿದ್ದಾರೆ ಎಂದು ಹೆಚ್​​​​ಡಿಕೆ ವಿರುದ್ದ ಕಿಡಿಕಾರಿದ್ದಾರೆ.

ಹೆಚ್​ ಡಿ ಕುಮಾರಸ್ವಾಮಿಗೆ ಅಭದ್ರತೆ ಕಾಡ್ತಿದೆ. ಅದಕ್ಕೆ ಡಿ. ಕೆ ಶಿವಕುಮಾರ್ ಟಾರ್ಗೆಟ್ ಆಗ್ತಿದ್ದಾರೆ. ಹೆಚ್​​​ಡಿಕೆ ಇವಾಗ ಚಲುವರಾಯಸ್ವಾಮಿ ಯಾವನ್ರೀ ಅಂತಾರೆ. ಇದಕ್ಕೆ ಏನ್ ಮಾಡೋಕೆ ಆಗುತ್ತೆ. ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದವರು. ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. 136 ಸೀಟು ಗೆಲ್ಲಿಸಿ ಸರ್ಕಾರ ತಂದಿದ್ದಾರೆ. ಇಲ್ಲಿಯವರೆಗೆ ದೇವೇಗೌಡರು ಜೆಡಿಎಸ್ ಪಕ್ಷವನ್ನ ಉಳಿಸಿ, ಬೆಳೆಸಿಕೊಂಡು ಬಂದರು ಎಂದರು.

ಅದನ್ನ ಮುಂದುರೆಸಲು ಆಗದೇ ಬಿಜೆಪಿ ಜೊತೆ ಮೈತ್ರಿಯಾಗಿದ್ದಾರೆ. ಮೈತ್ರಿಯಲ್ಲಿ ಈ ವಿಚಾರದಿಂದ ಗೊಂದಲ ಸೃಷ್ಟಿಯಾಗಿದೆ. ಈ ವೇಳೆ ಶಿವಕುಮಾರ್ ಮೇಲೆ ಮಾತಾಡೋದರಿಂದ ಡಿಕೆ ವ್ಯಕ್ತಿತ್ವವನ್ನ ಅಲ್ಲಾಡಿಸಬಹುದು, ಈ ವಿಷಯವನ್ನ ಡೈವರ್ಟ್ ಮಾಡಬಹುದು ಎಂಬ ಪ್ಲಾನ್ ಇರಬೇಕು. ಹೆಚ್​​ಡಿಕೆ-ದೇವರಾಜೇಗೌಡ ಭೇಟಿಯಾಗಿದ್ರು ಎಂದರು.

ಪೆನ್ ಡ್ರೈವ್ ಬಿಡುಗಡೆ ಹಿಂದೆ ಹೆಚ್ಡಿಕೆ ಕೈವಾಡ ಶಂಕೆ ವ್ಯಕ್ತಪಡಿಸಿದ ಸಚಿವ!?: ಒಂದು ವರ್ಷದ ಹಿಂದೆ ದೇವೇರಾಜೇಗೌಡ ಒಬ್ಬನಿಗೆ 5GB ವಿಡಿಯೋ ಕೊಟ್ಟಿದ್ದೇನೆ ಎಂದು ಡ್ರೈವರ್ ಕಾರ್ತಿಕ್ ಹೇಳಿದ್ದಾನೆ. ಕೊಟ್ಟಿರುವಷ್ಟು ವಿಡಿಯೋ ಮಾತ್ರ ರಿಲೀಸ್ ಆಗಿದೆ. ನಾನೇ ಬಿಟ್ಟಿದ್ರೆ ಇನ್ನು ಜಾಸ್ತಿ ವಿಡಿಯೋ ರಿಲೀಸ್ ಆಗ್ತಿತ್ತು ಎಂದಿದ್ದಾನೆ ಎಂದರು.

ಕುಮಾರಸ್ವಾಮಿ - ದೇವೇರಾಜೇಗೌಡ ಭೇಟಿಯಾಗಿದ್ದಾರೆ. ಏನಕ್ಕೆ ಆಗಿದ್ರು?. ಯಾವಾಗ ಭೇಟಿಯಾಗಿದ್ದರು ಸರ್ ಎಂಬ ಮಾಧ್ಯಮದವರ ಪ್ರಶ್ನೆಗೆ, ತನಿಖೆಯಲ್ಲಿ ಬರುತ್ತೆ ಬಿಡ್ರೀ ಎಂದು ಹೇಳಿದರು.

ಇದನ್ನೂ ಓದಿ : ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು: ಹೆಚ್​ಡಿಕೆಗೆ ಸಚಿವ ಕೃಷ್ಣ ಬೈರೇಗೌಡ ತಿರುಗೇಟು - Minister Krishna Byre Gowda

ETV Bharat Logo

Copyright © 2025 Ushodaya Enterprises Pvt. Ltd., All Rights Reserved.