ETV Bharat / state

ಕುಮಾರಸ್ವಾಮಿ ಮಾತನಾಡೋದನ್ನ ದೇವೇಗೌಡ್ರು ಸರಿ ಅಂದ್ರೆ ನಾನೂ ಒಪ್ಪುತ್ತೇನೆ: ಸಚಿವ ಎನ್.ಚಲುವರಾಯಸ್ವಾಮಿ - N CHALUVARAYASWAMY - N CHALUVARAYASWAMY

ಕೇಂದ್ರದ ಮಂತ್ರಿಯಾಗಿರುವ ಕುಮಾರಸ್ವಾಮಿ ವಾರದಲ್ಲಿ 3 ದಿನ ಬೆಂಗಳೂರಿಗೆ ಬಂದು ರಾಜ್ಯದ ಅಭಿವೃದ್ಧಿಗೆ ಬಗ್ಗೆ ಮಾತನಾಡುವ ಬದಲು ಅವರಿವರ ಬಗ್ಗೆ ಮಾತನಾಡುವ ಕೆಲಸ ಮಾಡುತ್ತಿದ್ದಾರೆ ಎಷ್ಟೇ ಎಂದು ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.

MINISTER N CHALAUVARAYASWAMY
ಸಚಿವ ಎನ್.ಚಲುವರಾಯಸ್ವಾಮಿ (ETV Bharat)
author img

By ETV Bharat Karnataka Team

Published : Oct 2, 2024, 6:04 PM IST

ಮಂಡ್ಯ: ಮಹಾತ್ಮ ಗಾಂಧೀಜಿ ಅವರ 155ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಕಾಂಗ್ರೆಸ್ ಕಚೇರಿಯಿಂದ ಗಾಂಧಿ ಪ್ರತಿಮೆ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.

ನೂರಾರು ಕಾಂಗ್ರೆಸ್​ ಕಾರ್ಯಕರ್ತ ಜಾಥಾದಲ್ಲಿ ಭಾಗವಹಿಸಿ ಗಾಂಧೀಜಿ ಸ್ಮರಣೆ ಮಾಡಿದರು. ಗಾಂಧಿ ಟೋಪಿ ಧರಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಕೂಗಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ‌ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ್​, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಒ ಶೇಖ್ ತನ್ವಿರ್ ಆಸಿಫ್, ಸೇರಿ ಹಲವರು ಭಾಗಿಯಾಗಿದ್ದರು.

ಸಚಿವ ಎನ್.ಚಲುವರಾಯಸ್ವಾಮಿ (ETV Bharat)

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಸಿಎಂ ಪತ್ನಿಯಿಂದ ಮುಡಾ ಸೈಟ್ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ "ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಪಕ್ಕದವರ ತಟ್ಟೆ ಬಗ್ಗೆ ಯೋಚನೆ ಮಾಡ್ತಾರಂತೆ. ಮುಡಾದಲ್ಲಿ ನೂರಾರು ಜನ ಫಲಾನುಭವಿಗಳಿದ್ದಾರೆ. ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷದವರು ಇದ್ದಾರೆ. ಎಲ್ಲರೂ ಸರ್ಕಾರದ ಅನುಮೋದನೆ ಇಲ್ಲದೇ ಅನಧಿಕೃತವಾಗಿ ಸೈಟ್ ಪಡೆದ ಬಹಳಷ್ಟು ಜನ ಇದ್ದಾರೆ. ತನಿಖೆ ಬಳಿಕ ಎಲ್ಲವೂ ಸತ್ಯ ಹೊರಗೆ ಬರುತ್ತೆ. 15, 20, 30, 50 ಸೈಟ್​ಗಳನ್ನು ತೆಗೆದುಕೊಂಡಿರುವವರ ಬಗ್ಗೆಯೂ ಹೊರಗೆ ಬರುತ್ತೆ." ಎಂದರು.

"ಕುಮಾರಸ್ವಾಮಿ ಅವರು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಬಿದ್ದಿದ್ದಾರೆ. ಕಾನೂನಲ್ಲಿ ಅಧಿಕಾರಿಗಳಿಗೆ ಒಂದು ಮಿತಿ ಇದೆ. ಅವರು ಕೂಡ ಈ ದೇಶದ ಪ್ರಜೆ. ಏನು ಬೇಕಾದರೂ ಮಾತನಾಡಬಹುದಾ? ಕಾನೂನಾತ್ಮಕ ವಿಚಾರವನ್ನು ಅಧಿಕಾರಿ ತಿಳಿಸಿದ್ದಾರೆ. ಕುಮಾರಸ್ವಾಮಿ ಅದನ್ನು ಎದುರಿಸಲಿ" ಎಂದರು.

"ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ದೇವೇಗೌಡರು ಸರಿ ಎಂದು ಹೇಳಿದರೆ ನಾನೂ ಒಪ್ಪುತ್ತೇನೆ. ಅರ್ಜುನನ ಹಿಂದೆ ಕೃಷ್ಣ ಇದ್ದ ಹಾಗೆ ಕುಮಾರಸ್ವಾಮಿ ಅವರ ಹಿಂದೆ ದೇವೇಗೌಡರು ಇದ್ದಾರೆ. ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಕುಮಾರಸ್ವಾಮಿ ಅವರೇ. ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾಗಿದ್ದಾರೆ. ಒಳ್ಳೆಯ ಕೆಲಸಕ್ಕೆ ರಾಜ್ಯದ ಜೊತೆ ಬರಬೇಕು. ರಾಜ್ಯದ ಕೆಲಸ, ಕೇಂದ್ರ ಕೆಲಸ ಮುಖ್ಯ ಅಲ್ಲ, ವಾರಕ್ಕೆ ಮೂರು ದಿನ ಬೆಂಗಳೂರಿಗೆ ಬಂದು ಅವರಿವರ ಬಗ್ಗೆ ಮಾತನಾಡೊದು ಅಷ್ಟೆ ಕೆಲಸ. ಬಾಯಿಗೆ ಹಿಡಿತ ಇಲ್ಲದೇ ಮಾತನೋಡೋದು. ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಆ ಮಾತು ಬಳಕೆ ಮಾಡೋದು ಸರಿಯಲ್ಲ." ಎಂದು ಹೇಳಿದರು.

"ಇದು ಸಿದ್ದರಾಮಯ್ಯ ಅವರ ನಿಲುವು ಅಲ್ಲ, ಇದರಲ್ಲಿ ಅವರ ಪಾತ್ರ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗ ಆಗಿರುವ ವಿಚಾರ. ಅವರ ಪತ್ನಿ ಕೊಟ್ಟಿದ್ದಾರೆ ಅಷ್ಟೆ. ಸಿದ್ದರಾಮಯ್ಯ ತಪ್ಪು ಮಾಡಿಲ್ಲ" ಎಂದು ವಾಗ್ದಾಳಿ ನಡೆಸಿದರು.

ಇನ್ನು ದಲಿತ ಸಚಿವರಿಂದ ಸಿಎಂ ಸ್ಥಾನಕ್ಕೆ ಪೈಪೋಟಿ ಚರ್ಚೆ ಕುರಿತು ಮಾತನಾಡಿ, "ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ. ಎಐಸಿಸಿ ಮುಖ್ಯಮಂತ್ರಿ ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದೆ. ಬಿಜೆಪಿ-ಜೆಡಿಎಸ್ ಆರೋಪಗಳ ಬಗ್ಗೆ ಮಾತನಾಡಲು ಸಭೆ ಮಾಡಿದ್ದೇವೆ ಅಷ್ಟೆ" ಎಂದು ತಿಳಿಸಿದರು.

ಇದನ್ನೂ ಓದಿ: 'ಸಿಎಂ ಪತ್ನಿ ಮುಗ್ಧೆ': ಮುಡಾ ಸೈಟ್‌ ವಾಪಸ್‌ ನಿರ್ಧಾರ ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕರು - MUDA Scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.