ETV Bharat / state

ಮಂಡ್ಯ ಬಂದ್, ಹೋರಾಟ ಯಾವ ಪುರುಷಾರ್ಥಕ್ಕೆ: ಜೆಡಿಎಸ್ ಬಿಜೆಪಿ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ - ಬಿಜೆಪಿ

ನಾವು ಮಂಡ್ಯದ ಮಣ್ಣಿನ ಮಕ್ಕಳು. ಹಿಂದುತ್ವ ನಮಗೂ ಅವರಿಗಿಂತ ಜಾಸ್ತಿ ಇದೆ. ಅವರಿಗಿಂತ ದೇಶಭಕ್ತಿಯೂ ಜಾಸ್ತಿ ಇದೆ. ಮಂಡ್ಯವನ್ನು ಮಂಗಳೂರು ಮಾಡಲು ನಾವು ಬಿಡುವುದಿಲ್ಲ. ಜನರೇ ಬಂದ್ ವಿರುದ್ಧ ತಿರುಗಿ ಬೀಳುವರು ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

Minister Cheluvarayaswamy spoke to the media.
ಸಚಿವ ಚಲುವರಾಯಸ್ವಾಮಿ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Feb 2, 2024, 7:17 PM IST

Updated : Feb 2, 2024, 10:39 PM IST

ಸಚಿವ ಚಲುವರಾಯಸ್ವಾಮಿ ಮಾಧ್ಯಮದವರ ಜೊತೆ ಮಾತನಾಡಿದರು.

ಮೈಸೂರು: ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದರೆ ನಾವೇ ಅವರ ಹೋರಾಟ ಬೆಂಬಲಿಸಿ ನಿಂತುಕೊಳ್ಳುತ್ತಿದ್ದೆವು. ಆದರೆ, ಈಗ ಯಾವ ಪುರುಷಾರ್ಥಕ್ಕಾಗಿ ಬಂದ್ ಹಾಗೂ ಹೋರಾಟವನ್ನು ಬಿಜೆಪಿ, ಜೆಡಿಎಸ್​​ನವರು ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಮೈಸೂರಿನಲ್ಲಿ ಸಚಿವ ಚಲುವರಾಯಸ್ವಾಮಿ ಕುಟುಕಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮುಖಂಡರು ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾವು ಸಹ ಮಂಡ್ಯದ ಮಣ್ಣಿನ ಮಕ್ಕಳು. ನಮಗೂ ಮಾತನಾಡಲು ನಾಲಿಗೆ ಇದೆ. ಹಿಂದುತ್ವ ಅವರಿಗಿಂತ ನಮಗೆ ಜಾಸ್ತಿ ಇದೆ. ಅವರಿಗಿಂತ ದೇಶಭಕ್ತಿಯೂ ಜಾಸ್ತಿ ಇದೆ. ಮಂಡ್ಯವನ್ನ ಮಂಗಳೂರು ಮಾಡಲು ನಾವು ಬಿಡುವುದಿಲ್ಲ. ಜನರೇ ಬಂದ್ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿಯಿಂದ ನಾನು ಲೀಡರ್ ಆಗಿಲ್ಲ: ಕುಮಾರಸ್ವಾಮಿ ಬಳಿ ನಾನು ವಿನಯದ ಬಗ್ಗೆ ಕೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರಿಂದ ನಾನು ಲೀಡರ್ ಆಗಿಲ್ಲ. ಎಚ್ ಡಿ.ದೇವೇಗೌಡರ ಮೇಲಿನ ಗೌರವದಿಂದ ಸುಮ್ಮನೆ ಇದ್ದೇನೆ. ದೇವೇಗೌಡರ ಹೆಸರು ಕುಮಾರಸ್ವಾಮಿ ಜೊತೆ ಇಲ್ಲದಿದ್ದರೆ ಸರಿಯಾಗಿ ಉತ್ತರ ಕೊಡುತ್ತಿದ್ದೆನು. ಚಲುವರಾಯಸ್ವಾಮಿ ಏನು ಕುಮಾರಸ್ವಾಮಿ ಮನೆಯ ಋಣದಲ್ಲಿ ಇದ್ದೇವೆಯಾ. ನಾವು ಅವರ ಆಸ್ತಿ ತಿಂದಿದ್ದೇವಾ, ಮಾತನಾಡುವುದಕ್ಕೆ ಗೌರವ ಬೇಕು. ಕುಮಾರಸ್ವಾಮಿ ಕೈಯಲ್ಲಿ ನನ್ನ ಹಣೆ ಬರಹ ಬರೆಯಲು ಸಾಧ್ಯವೇ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರು ವಿಚಾರವೇ ಪ್ರಸ್ತುತ ಅಲ್ಲ. ರಾಮಕೃಷ್ಣ ಹೆಗಡೆ, ಜೆ ಎಚ್.ಪಟೇಲ್, ಬೈರೇಗೌಡ ಅವರನ್ನು ಜೆಡಿಎಸ್ ನಿಂದ ಹೊರಗೆ ಕಳುಹಿಸಿದ್ದು ಯಾರು ಎಂಬುದನ್ನು ಕುಮಾರಸ್ವಾಮಿ ಹೇಳಲಿ. ಮಂಡ್ಯದಲ್ಲಿ ಇವರಿಗೆ ಕೊಟ್ಟ ಗೌರವ ಈಗ ಅಶಾಂತಿ ಮತ್ತು ಗಲಭೆಯ ಮೂಲಕ ವಾಪಸ್ ಕೊಡುತ್ತಿದ್ದಾರೆಯೇ ಎಂದು ಸಚಿವ ಚಲುವರಾಯಸ್ವಾಮಿ ಆರೋಪಿಸಿದರು.

ಚರ್ಚೆಗೆ ಆಹ್ವಾನ ವಿಚಾರ: ಮಂಡ್ಯದ ಅಭಿವೃದ್ಧಿ ಬಗ್ಗೆ ದಳಪತಿಗಳು ಚರ್ಚೆಗೆ ಆಹ್ವಾನ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ನಾಚಿಕೆಯಾಗಬೇಕು. ಒಂದು ಅಂಗನವಾಡಿ ಕಟ್ಟಡ ಕಟ್ಟಲು ಅವರಿಂದ ಆಗಿಲ್ಲ. ಅವರೇನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಮಂಡ್ಯ ಇಲ್ಲದಿದ್ದರೆ, ವಿಧಾನ ಸಭೆಯಲ್ಲೇ ಒಂದು ದಿನ ಚರ್ಚೆ ಮಾಡೋಣ.

ಇದೇ ವಿಚಾರವಾಗಿ ಒಂದು ದಿನ ಚರ್ಚಿಸಲು ಸ್ಪೀಕರ್​ಗೆ ಸಮಯ ಕೇಳುತ್ತೇನೆ. ಅವರೇ ಕಲಾಪದಲ್ಲಿ ಮಾತನಾಡಲಿ, ನಾವು ಚರ್ಚೆ ಮಾಡೋಣ. ಅದನ್ನು ಬಿಟ್ಟು ಈ ರೀತಿ ಬೈದುಕೊಂಡು ತಿರುಗಾಡಿದರೆ ಜನ ನಿಮ್ಮನ್ನು ನಂಬುತ್ತಾರೆ ಎಂದು ತಿಳಿದುಕೊಂಡಿದ್ದೀರಿ. ಈ ರೀತಿ ಅಭಿವೃದ್ಧಿ ಮಾಡಿದ್ದರೆ ಯಾಕೆ ಎಂಟು ಜನ ಚುನಾವಣೆಯಲ್ಲಿ ಸೋತರು ಎಂದು ಸಚಿವ ಚಲುವರಾಯಸ್ವಾಮಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂಓದಿ:ಕೆರಗೋಡು ಘಟನೆಗೆ ಶಾಸಕ ರವಿಕುಮಾರ್​ ಗಣಿಗ ಕಾರಣ: ಸಿ.ಎಸ್.ಪುಟ್ಟರಾಜು

Last Updated : Feb 2, 2024, 10:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.