ETV Bharat / state

ನಮಗೆ ನಿರೀಕ್ಷೆಗಿಂತ ಜಾಸ್ತಿ ಮತಗಳು ಬರುತ್ತವೆ, ಯಾವುದೇ ಭಯ ಇಲ್ಲ: ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ

ವಿಧಾನಸೌಧದಲ್ಲಿ ಸಚಿವ ಎಂಬಿ ಪಾಟೀಲ್ ಮಾತನಾಡಿ ನಮಗೆ ನಿರೀಕ್ಷೆಗಿಂತ ಜಾಸ್ತಿ ಮತಗಳು ಬರುತ್ತವೆ. ಯಾವುದೇ ಭಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Minister MB Patil
ಸಚಿವ ಎಂ.ಬಿ.ಪಾಟೀಲ್
author img

By ETV Bharat Karnataka Team

Published : Feb 26, 2024, 1:54 PM IST

ಸಚಿವ ಎಂ.ಬಿ.ಪಾಟೀಲ್ ಹೇಳಿಕೆ

ಬೆಂಗಳೂರು: ನಮಗೆ ನಿರೀಕ್ಷೆಗಿಂತ ಜಾಸ್ತಿ ಮತಗಳು ಬರುತ್ತವೆ. ಯಾವುದೇ ಭಯ ಇಲ್ಲ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲರೂ ಒಟ್ಟಿಗೆ ಇರಬೇಕು ಅಂತಾ ಇವತ್ತು ಸೇರುತ್ತಿದ್ದೇವೆ. ಸಿಎಲ್​ಪಿ ಸಭೆ ಆಗ್ತಾ ಇದೆ. ಒಟ್ಟಾಗಿ ಬಂದು ಮತದಾನ ಮಾಡಬೇಕು ಎಂದು ತಿರ್ಮಾನ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ಶಾಸಕರಿಗೆ ಆಫರ್​ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕುವಾಗ ತೋರಿಸಬೇಕು. ಅಡ್ಡಮತದಾನ ಮಾಡುವ ಪ್ರಶ್ನೆ ಬರೋಲ್ಲ. ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆ ಬರಬೇಕು ಎಂಬ ಕಾತರದಲ್ಲಿದ್ದಾರೆ. ನಮ್ಮ ಅಭ್ಯರ್ಥಿಗಳು ನಿರಾಯಾಸವಾಗಿ ನಿರೀಕ್ಷೆಗಿಂತ ಹೆಚ್ಚಿನ ಮತ ಪಡೆದು ಗೆಲ್ಲುತ್ತಾರೆ ಎಂದು ಹೇಳಿದರು.

ಐದನೇ ಅಭ್ಯರ್ಥಿ ಏಕೆ ನಿಲ್ಲಿಸಿದ್ದಾರೆ?: ಇದೇ ವೇಳೆ ಮಾತನಾಡಿದ ಶಾಸಕ ರಿಜ್ವಾನ್​ ಅರ್ಷದ್​, ಸಂಖ್ಯಾ ಬಲದ ಪ್ರಕಾರ ಕಾಂಗ್ರೆಸ್​ ಪಕ್ಷ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. ಬಿಜೆಪಿಯವರು ಒಬ್ಬರನ್ನು ಗೆಲ್ಲಿಸಿಕೊಳ್ಳಬಹುದು. ಐದನೇ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಬಿಜೆಪಿ - ಜೆಡಿಎಸ್​ ಪಕ್ಷಗಳಿಗೆ ಇಲ್ಲ. ಆದರೂ ಸಹ ಐದನೇ ಅಭ್ಯರ್ಥಿಯನ್ನು ಯಾಕೆ ಕಣಕ್ಕಿಳಿಸಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರದಿಂದ ಐಟಿ ಇಡಿ ಸಿಬಿಐನಿಂದ ಒತ್ತಡ ಹಾಕಿಸುವುದು ನೋಟಿಸ್ ಕೊಡಿಸೋದು. ಇಲ್ಲದಿದ್ದರೆ ಹಿಂದಿನ ಅನುಭವ ಇದ್ಯಲ್ಲಾ ಎಂದು ಟೀಕಿಸಿದರು.

ಆಪರೇಷನ್​ ಕಮಲ ಮಾಡಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಹಣ ಸುರಿಯುತ್ತಿದ್ದಾರೆ. ಇಂತಹ ಅವರ ರಣನೀತಿ ಇದ್ದೇ ಇರುತ್ತೆ.‌ ಬಿಜೆಪಿಯವರು ಭ್ರಷ್ಟಾಚಾರ ಮಾತಾಡುತ್ತಾರೆ. ಅದೇ ಹಣದಲ್ಲಿ ಆಪರೇಷನ್ ಕಮಲ ಕೂಡಾ ಮಾಡುತ್ತಾರೆ.‌ ಅವರ ತಂತ್ರಗಾರಿಕೆಗೆ ನಮ್ಮ ಸ್ಟ್ರಾಟಜಿ ಮಾಡಿಕೊಳ್ಳಬೇಕಲ್ಲ. ನಮ್ಮ ಶಾಸಕರನ್ನು ಒಂದೆಡೆ ಸೇರಿಸಿ ಸಮಾಲೋಚನೆ ನಡೆಸಿ, ಯಾವ ರೀತಿ ಮತದಾನ ಮಾಡಬೇಕು. ಯಾವ ಅಭ್ಯರ್ಥಿಗೆ ಯಾವ್ಯಾವ ಶಾಸಕರು ಓಟು ಹಾಕಬೇಕು. ಲಿಖಿತ ರೂಪದಲ್ಲಿ ಓಟು ಹಾಕುವುದರಿಂದ ಅದರ ಟ್ರೈನಿಂಗ್​​ ಕೊಡಬೇಕಾಗುತ್ತೆ. 70 ಕ್ಕಿಂತ ಅಧಿಕ ಶಾಸಕರು ಹೊಸದಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಇದು ಮೊದಲ ಚುನಾವಣೆ ಅದಕ್ಕಾಗಿ ಸಂಜೆ ಸೇರುತ್ತಿದ್ದೇವೆ ಎಂದರು.

ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯಸಭಾ ಚುನಾವಣೆ ಆದ ನಂತರ ರಾಜ್ಯದ ಎಲ್ಲ ನಾಯಕರು ಚರ್ಚೆ ಮಾಡುತ್ತಾರೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯುತ್ತೆ, ಆದ ನಂತರ ನೋಡಬೇಕು. ಪಕ್ಷ ಏನು ತೀರ್ಮಾನ ಮಾಡುತ್ತೆ ಗೊತ್ತಿಲ್ಲ. ಬಹಳಷ್ಟು ಜನ ಅರ್ಹರಿದ್ದಾರೆ. ಎನ್​ಎ ಹ್ಯಾರಿಸ್​, ಜಮೀರ್ ಅಹಮ್ಮದ್ ಖಾನ್ ಇದ್ದಾರೆ. ಬೇರೆ ಹೊಸಬರು ಕೂಡ ಕೇಳುತ್ತಿದ್ದಾರೆ.‌ ಪಕ್ಷದಲ್ಲಿ ಏನೆ ತೀರ್ಮಾನ ಆದರೂ ಬದ್ಧರಾಗಿರುತ್ತೇವೆ. ಕಾಂಗ್ರೆಸ್​ ಪಕ್ಷ 20ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಆತ್ಮವಿಶ್ವಾಸ ಇದೆ ಎಂದರು.

ಇದನ್ನೂ ಓದಿ: ಬಿಜೆಪಿ ಟಿಕೆಟ್​ಗೆ ಹಿಂದೂ ಮುಖಂಡ ಸತ್ಯಜಿತ್​ ಹಕ್ಕೊತ್ತಾಯ.. ಇಲ್ಲವಾದರೆ ಸ್ವತಂತ್ರ ಸ್ಪರ್ಧೆಗೆ ಚಿಂತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.