ETV Bharat / state

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆ ಅನುಮತಿ ಬೇಕಾ, ಬೇಡವಾ?: ಸಚಿವರು ಹೇಳಿದ್ದೇನು? - Teacher Recruitment - TEACHER RECRUITMENT

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಶಿಕ್ಷಣ ಸಚಿವ ಮಧುಬಂಗಾರಪ್ಪ ಹಾಗೂ ಸಚಿವ ಈಶ್ವರ್ ಖಂಡ್ರೆ ಹೇಳಿಕೆಗಳಿಂದ ಸದನದಲ್ಲಿ ಗೊಂದಲ ಉಂಟಾಯಿತು.

Legislative Council
ಶಿಕ್ಷಣ ಸಚಿವ ಮಧುಬಂಗಾರಪ್ಪ (ETV Bharat)
author img

By ETV Bharat Karnataka Team

Published : Jul 15, 2024, 6:33 PM IST

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಆರ್ಥಿಕ ಇಲಾಖೆ ಅನುಮತಿ ನೀಡುತ್ತಿದ್ದಂತೆ ನೇಮಕಾತಿ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ 371ಜೆ ಅಡಿ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ಬೇಕಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿ ಒಂದೇ ಸರ್ಕಾರದಿಂದ ಎರಡು ಉತ್ತರ ಬಂದಿದ್ದರಿಂದ ಸದನದಲ್ಲಿ ಗೊಂದಲ‌ ಸೃಷ್ಟಿಯಾದ‌ ಘಟನೆ ನಡೆಯಿತು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಿಕ್ಷಕರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗ 10 ಸಾವಿರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ಕೋರಿದ್ದು, ಅದರಲ್ಲಿ 6,500 ಶಿಕ್ಷಕರನ್ನು ಈ ಭಾಗಕ್ಕೆ ನೇಮಕ ಮಾಡಲಾಗುತ್ತದೆ. 52 ಸಾವಿರ ಶಿಕ್ಷಕರ ಕೊರತೆ ಇದೆ. ಅತಿಥಿ ಉಪನ್ಯಾಸಕರ ಬಳಕೆ ಮಾಡುತ್ತಿದ್ದು, ಇದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗಿದೆ. ಕೊಠಡಿಗಳ ಸಂಖ್ಯೆಯನ್ನೂ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡುತ್ತೇವೆ. 4 ವರ್ಷದ ಹಿಂದೆ 5 ಸಾವಿರದ ಒಳಗೆ ಮಾತ್ರ ನೇಮಕ ಮಾಡಿದ್ದರು. ನಾವು 12 ಸಾವಿರ ಮಾಡಿದ್ದೇವೆ. ಈಗ 10 ಸಾವಿರ ಹುದ್ದೆಯಲ್ಲಿ ಆರ್ಥಿಕ ಇಲಾಖೆ ಅನುಮತಿ ಬರುತ್ತಿದ್ದಂತೆ ನೇಮಕಾತಿಗೆ ಮುಂದಾಗಲಿದ್ದೇವೆ ಎಂದರು.

ಆರ್ಥಿಕ ಇಲಾಖೆ ಅನುಮತಿ 371ಜೆಗೆ ಬರಲ್ಲ. ಆದರೂ ಯಾಕೆ ಕೇಳಿದ್ದೀರಿ ಎನ್ನುವ ಪ್ರಶ್ನೆಗೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, 371 ಜೆ ಅಡಿ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಇಲ್ಲ ಎನ್ನುವುದು ನಿಜ, ಅದರಂತೆಯೇ ನೇಮಕಾತಿಗೆ ಸಿಎಂ ಸೂಚಿಸಿದ್ದಾರೆ ಎಂದರು.

ಈ ವೇಳೆ ಇಬ್ಭರು ಸಚಿವರ ಎರಡು ರೀತಿಯ ಸ್ಪಷ್ಟೀಕರಣ ಗೊಂದಲ ಸೃಷ್ಟಿಸಿತು. ನಂತರ ಸಭಾಪತಿಗಳು ಲೋಪ ಸರಿಪಡಿಸಿ ಎನ್ನುವ ನಿರ್ದೇಶನ ನೀಡುತ್ತಾ ಸದಸ್ಯರಿಗೆ ಉತ್ತರ ತೃಪ್ತಿ ತಾರದಿದ್ದಲ್ಲಿ ಪತ್ರ ನೀಡಿ, ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗದಂತೆ ಕ್ರಮ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಗೈರಿನಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು, ಹಾಜರಾತಿ ಕಡಿಮೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ‌ ಸಚಿವರು, ಈ ಬಾರಿ ಪರೀಕ್ಷೆ ಬಹಳ ಕಟ್ಟುನಿಟ್ಟಾಗಿ ಮಾಡಿದ್ದೇವೆ. ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ನೇಮಿಸಿದ್ದೇವೆ. ಆದರೆ ಮಕ್ಕಳು ಶಾಲೆಗೆ ಬಾರದಿದ್ದಲ್ಲಿ ಸಮಸ್ಯೆಯಾಗಲಿದೆ. ಬಿಸಿಯೂಟ, ಸಮವಸ್ತ್ರ, ಮೊಟ್ಟೆ ಎಲ್ಲ ಕೊಟ್ಟರೂ ಮಕ್ಕಳು ಶಾಲೆಗೆ ಬಾರದಿದ್ದಲ್ಲಿ ಯಾರಿಗೆ ಪಾಠ ಮಾಡಬೇಕು? ಮಕ್ಕಳ ದಾಖಲಾತಿ ಇದ್ದರೂ ಹಾಜರಾತಿ ಕಡಿಮೆ ಇದೆ. ಇದು ಗುಣಮಟ್ಟಕ್ಕೆ ಹೊಡೆತವಾಗುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ವಹಿಸಲಾಗುತ್ತದೆ ಎಂದರು. ಶಾಲೆಗಳಲ್ಲಿ ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಇಂದಿನಿಂದ ವಿಧಾನಮಂಡಲ ಅಧಿವೇಶನ: ಶಾಸಕರ ಹಾಜರಾತಿ ಗುರುತಿಸಲು ಎಐ ತಂತ್ರಜ್ಞಾನ ಬಳಕೆ - Karnataka Monsoon Session

ETV Bharat Logo

Copyright © 2025 Ushodaya Enterprises Pvt. Ltd., All Rights Reserved.