ETV Bharat / state

ನಮ್ಮ ಶಾಸಕರು ಆಮಿಷಕ್ಕೆ ಬಲಿಯಾಗಲ್ಲ, ಇಲ್ಲಿ ಯಾರೂ ಏಕನಾಥ್ ಶಿಂಧೆಗಳಿಲ್ಲ: ಸಚಿವ ಎಂ.ಬಿ.ಪಾಟೀಲ್ - operation kamala - OPERATION KAMALA

ಬಿಜೆಪಿಯ ಎಂಟತ್ತು ಶಾಸಕರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಆಪರೇಷನ್ ಕಮಲ ವರ್ಕೌಟ್ ಆಗಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸಚಿವ ಎಂ.ಬಿ.ಪಾಟೀಲ್
ಸಚಿವ ಎಂ.ಬಿ.ಪಾಟೀಲ್ (ETV Bharat)
author img

By ETV Bharat Karnataka Team

Published : Aug 26, 2024, 1:29 PM IST

ಬೆಂಗಳೂರು: ಕಾಂಗ್ರೆಸ್​ ಶಾಸಕರು ಆಮಿಷಕ್ಕೆ ಬಲಿಯಾಗಲ್ಲ. ಇಲ್ಲಿ ಯಾರೂ ಏಕನಾಥ್ ಶಿಂಧೆಗಳಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸದಾಶಿವನಗರದ ಬಳಿ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ನಾವು 136 ಸೀಟು ಪಡೆದು ಸರ್ಕಾರ ರಚಿಸಿದ್ದೇವೆ. ಸರ್ಕಾರ ಕೆಡವಬೇಕಾದರೆ ಅವರಿಗೆ 80 ಸೀಟುಗಳು ಬೇಕಾಗುತ್ತದೆ. ಆಪರೇಷನ್ ಕಮಲ ಮಾಡಿದ್ರೂ 60 ಮಂದಿ ಬೇಕು. ಬಿಜೆಪಿಯ ಎಂಟತ್ತು ಶಾಸಕರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಆಪರೇಷನ್ ಕಮಲ ವರ್ಕೌಟ್ ಆಗಲ್ಲ. ಒಬ್ಬನೇ ಒಬ್ಬ ಕಾಂಗ್ರೆಸ್​ ಶಾಸಕ ಇವರಿಗೆ ಬಲಿಯಾಗಲ್ಲ. ಆಪರೇಷನ್ ಕಮಲ ಉದ್ಭವಿಸಲ್ಲ. 100, 500 ಕೋಟಿ‌ ಕೊಟ್ರೂ ಏನೂ‌ ಆಗುವುದಿಲ್ಲ ಎಂದು ಹೇಳಿದರು.

ಜಿಂದಾಲ್​ಗೆ ಭೂಮಿ ನೀಡಿದ ವಿಚಾರವಾಗಿ ಮಾತನಾಡಿ, ಭೂಮಿ ಕೊಟ್ಟವರು ಯಡಿಯೂರಪ್ಪ. ಮಾರುಕಟ್ಟೆ ಬೆಲೆಗೆ ಭೂಮಿ ನೀಡಲಾಗಿದೆ. ಚಾಣಕ್ಯ ವಿವಿಯಂತೆ ನಾವು ಮಾಡಿಲ್ಲ. ನಮ್ಮ ಪಾಲಿಸಿಯಂತೆಯೇ ಮಾಡಿದ್ದೇವೆ. ಇಂಡಸ್ಟ್ರಿ ಮಾಡಬೇಕಾದರೆ ಕೋಟಿ ರೂ. ಇತ್ತು ಅನ್ನಿ, ನಾವು ಇಂಡಸ್ಟ್ರಿಗೆ ಜಾಗ ಕೊಡ್ತೇವೆ. ಅವತ್ತಿನ ಮಾರ್ಕೆಟ್ ಬೆಲೆಯಂತೆ ಕೊಟ್ಟಿರುತ್ತೇವೆ. ಅದು ಯಾವಾಗಲೇ ಮಾಡಲಿ ರನ್ನಿಂಗ್ ಕಂಡೀಷನ್ ಇರುತ್ತೆ. ಹಾಗಾಗಿ ಜಿಂದಾಲ್​ಗೂ ಬೇರೆಯದಕ್ಕೂ ಸಂಬಂಧವಿಲ್ಲ. ಹೈಕೋರ್ಟ್ ನಿರ್ದೇಶ‌ನ ಕೊಟ್ಟಿದೆ. 2020ರ ಕ್ಯಾಬಿನೆಟ್ ತೀರ್ಮಾನ ಪಾಲನೆಗೆ ಹೇಳಿದೆ. ಆಗೇನು ನಾವು ಇದ್ವಾ?. ಎಲ್ಲಿಯೂ ನಾವು ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ಧಾರ್ಥ ಟ್ರಸ್ಟ್​ಗೆ ಸೈಟ್ ನೀಡಿದ ಕುರಿತು ಲೆಹರ್ ಸಿಂಗ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಶಾಲೆ, ಫಯರ್ ಸ್ಟೇಷನ್, ಡಾಮಿಟ್ರಿ, ಅಪಾರ್ಟ್​ಮೆಂಟ್ ಇಲ್ಲವೂ ಇರುತ್ತದೆ. ರಾಹುಲ್, ಖರ್ಗೆ ರೀಸರ್ಚ್ ಟ್ರೈನಿಂಗ್​ಗೆ ಅರ್ಜಿ ಹಾಕಿದ್ದಾರೆ. ಅವರಿಗೆ ಕೊಡೋದ್ರಲ್ಲಿ ತಪ್ಪೇನಿದೆ. ಎಸ್​ಸಿ, ಎಸ್​ಟಿ ಸಮುದಾಯವನ್ನು ಪರಿಗಣಿಸುತ್ತೇವೆ. ಅದೇ ರೀತಿ ಇಲ್ಲಿ ಮಾಡಲಾಗಿದೆ. ಎಸ್​ಸಿ, ಎಸ್​ಟಿಗೆ ಯಾವುದೇ ವಿನಾಯಿತಿ ಇಲ್ಲ. ಚಾಣಕ್ಯ ವಿವಿಗೆ 137 ಕೋಟಿ ಬೆಲೆಯ ಜಾಗ ಕೊಡಲಾಗಿದೆ. ಆಗೇನು ಲೆಹರ್ ಸಿಂಗ್ ಕಣ್ಣುಮುಚ್ಚಿ ಕುಳಿತಿದ್ರಾ?. ರಾಹುಲ್, ಖರ್ಗೆಗೆ 5 ಎಕರೆ ಕೊಟ್ಟಿದ್ದಕ್ಕೆ ಕೇಳ್ತಾರೆ. ಚಾಣಕ್ಯ ವಿವಿಯದ್ದು ಯಾಕೆ ಕೇಳುತ್ತಿಲ್ಲ. ಲೆಹರ್ ಸಿಂಗ್ ಅವರೇ ಚಾಣಕ್ಯ ವಿವಿಯದ್ದು ಕೇಳಿ. ನಿವೇಶನ ವಾಪಸ್ ಕೊಡಿ ಅಂತ ಕೇಳಲಿ ಎಂದು ತಿರುಗೇಟು ನೀಡಿದರು.

ಮುಡಾ ಪ್ರಕರಣದಲ್ಲಿ ನ್ಯಾಯ ಸಿಗಲಿದೆ. ಮುಡಾ ಎನ್‌ಕ್ರೋಚ್‌ಮೆಂಟ್‌ ಮಾಡಿ ಸೈಟ್ ಅಲಾಟ್ ಮಾಡಿದೆ. ಮುಡಾದವರ ಬಗ್ಗೆ ಯಾರೂ ಮಾತನಾಡ್ತಿಲ್ಲ. ಸಿಎಂ ವಿರುದ್ಧ ಫಾಲ್ಸ್ ಕೇಸ್ ಹಾಕಿದ್ದರೆ. ಸ್ಟೇ ಸಿಗುತ್ತೆ, ಸ್ವ್ಕಾಶ್ ಕೂಡ ಆಗುತ್ತದೆ ಎಂದರು.

ಇದನ್ನೂ ಓದಿ: 'ಸಿಎಂ ವಿರುದ್ಧದ ಹೋರಾಟ ದೆಹಲಿ ಮಟ್ಟಕ್ಕೆ ಕೊಂಡೊಯ್ಯುತ್ತೇವೆ': ಆರ್​. ಅಶೋಕ್ - MUDA SCAM CASE DEVELOPMENTS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.