ETV Bharat / state

49 ಹೊಸ ತಾಲೂಕುಗಳಿಗೆ ಎರಡ್ಮೂರು ವರ್ಷದಲ್ಲಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣ: ಸಚಿವ ಕೃಷ್ಣಬೈರೇಗೌಡ - ಶಾಸಕ ಪ್ರಕಾಶ ಕೋಳಿವಾಡ

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದರು.

Revenue Minister Krishnabhaire Gowda spoke.
ವಿಧಾನಸಭೆ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿದರು.
author img

By ETV Bharat Karnataka Team

Published : Feb 19, 2024, 5:38 PM IST

ಬೆಂಗಳೂರು: ರಾಜ್ಯದ 49 ಹೊಸ ತಾಲೂಕುಗಳಿಗೆ 2-3 ವರ್ಷದಲ್ಲಿ ಆಡಳಿತ ಕಚೇರಿ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಭರವಸೆ ನೀಡಿದರು.

ಇಂದು ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಯು.ಬಿ. ಬಣಕಾರ್ ಪರವಾಗಿ ಶಾಸಕ ಪ್ರಕಾಶ ಕೋಳಿವಾಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, 63 ಹೊಸ ತಾಲೂಕುಗಳು ಮಂಜೂರಾಗಿವೆ. ಆದರೆ 14 ತಾಲೂಕುಗಳಿಗೆ ಮಾತ್ರ ಆಡಳಿತ ಕಚೇರಿ ಮಂಜೂರಾಗಿದೆ. ಉಳಿದ 49 ಹೊಸ ತಾಲೂಕುಗಳಿಗೆ ಹಿಂದಿನ ಸರ್ಕಾರದಲ್ಲಿ ಆಡಳಿತ ಕಚೇರಿ ಮಂಜೂರಾಗಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಹಳೆಯ ಕೆಲವು ತಾಲೂಕುಗಳಲ್ಲಿ ಆಡಳಿತ ತಾಲೂಕು ಕಚೇರಿ ಬೇಡಿಕೆಯಿದೆ. ಒಟ್ಟಾರೆ 80 ರಿಂದ 100 ತಾಲೂಕು ಆಡಳಿತ ಕಚೇರಿಗೆ ಬೇಡಿಕೆಯಿದೆ. ಅನುದಾನದ ಲಭ್ಯತೆ ಆಧಾರದ ಮೇಲೆ ಆಡಳಿತ ಕಚೇರಿಗಳನ್ನು ನಿರ್ಮಿಸಲಾಗುವುದು. ಆಡಳಿತ ಕಚೇರಿಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಗಲುವ ವೆಚ್ಚವನ್ನು ತಯಾರು ಮಾಡಲಾಗುತ್ತಿದೆ.

ಒಂದು ಕಟ್ಟಡ ನಿರ್ಮಾಣಕ್ಕೆ ಮಾದರಿ ಅಂದಾಜು ವೆಚ್ಚ ಸಿದ್ಧಪಡಿಸಲಾಗುವುದು. ಇಲ್ಲದಿದ್ದರೆ ಅಂದಾಜು ವೆಚ್ಚ ಪರಿಷ್ಕರಣೆ ಆಗಬೇಕಾಗುತ್ತದೆ. ಸದ್ಯಕ್ಕೆ 10 ಕೋಟಿ ರೂ. ಇದ್ದು, ಅದನ್ನು ವಾಸ್ತವಿಕ ಅಂದಾಜು ವೆಚ್ಚದ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುತ್ತದೆ. ಈ ಸಂಬಂಧ ಲೋಕೋಪಯೋಗಿ ಮತ್ತು ಗೃಹಮಂಡಳಿಯ ಎಂಜಿನಿಯರ್​ಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.

ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ನೇಮಕ: ಇನ್ನೊಂದು ತಿಂಗಳಿನಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವುದಾಗಿ ಶಾಸಕ ಕಿರಣಕುಮಾರ್ ಕೋಡ್ಗಿ ಅವರ ಪ್ರಶ್ನೆಗೆ ಕಂದಾಯ ಸಚಿವರು ಉತ್ತರಿಸಿದರು, ಕಂದಾಯ ಇಲಾಖೆಯಿಂದ ನಿಯೋಜನೆ ಮೇಲೆ ಹೋಗಲು 2 ಸಾವಿರ ಹುದ್ದೆಗಳಿಗೆ ಬೇಡಿಕೆಯಿದೆ. ಆದರೆ ನಾನು ಅವಕಾಶ ಮಾಡಿಕೊಟ್ಟಿಲ್ಲ. ಕಣ್ತಪ್ಪಿಸಿ ಅಧಿಕಾರಿಗಳು ಕೆಲವರನ್ನು ಬೇರಡೆ ನಿಯೋಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಕುಂದಾಪುರ ತಾಲೂಕು ಕಚೇರಿಯಲ್ಲಿ 19 ಹುದ್ದೆಗಳ ಸಿಬ್ಬಂದಿ ನಿಯೋಜನೆ ಮೇಲೆ ಬೇರೆಡೆ ಕೆಲಸ ಮಾಡುತ್ತಿದ್ದಾರೆ. ಹಿಂದೆ ಸಂಬಂಧಿಸಿದ ಜಿಲ್ಲಾಕಾರಿಗಳಿಗೆ ಸೂಚನೆ ನೀಡಿ ತೀರಾ ಅನಿವಾರ್ಯ ಎನಿಸಿದ ಐವರನ್ನು ಹೊರತುಪಡಿಸಿ ಉಳಿದ 14 ಮಂದಿ ಸಿಬ್ಬಂದಿ ನಿಯೋಜನೆಯನ್ನು ರದ್ದುಪಡಿಸಿ ಮೂಲ ಸ್ಥಾನಕ್ಕೆ ಮರಳುವಂತೆ ಸೂಚಿಸಲಾಗುವುದು. ಇದು ಕೇವಲ ಕುಂದಾಪುರಕ್ಕೆ ಸೀಮಿತವಾಗುವುದಿಲ್ಲ. ವ್ಯಕ್ತಿ ಹಿತಕ್ಕಿಂತ ಸಾರ್ವಜನಿಕರ ಹಿತ ಮುಖ್ಯ ಎಂದು ಹೇಳಿದರು.

ಕುಂದಾಪುರ ತಾಲೂಕು ಕಚೇರಿಯಲ್ಲಿ 110 ಹುದ್ದೆಗಳು ಮಂಜೂರಾಗಿದ್ದು, 70 ಹುದ್ದೆಗಳು ಭರ್ತಿಯಾಗಿವೆ. 36 ಹುದ್ದೆಗಳು ಖಾಲಿ ಇವೆ. ಭರ್ತಿಯಾದ ಹುದ್ದೆಗಳಲ್ಲಿ 19 ಜನರು ನಿಯೋಜನೆ ಮೇಲೆ ಬೇರೆಡೆ ಕೆಲಸ ಮಾಡುತ್ತಿರುವುದು ತಪ್ಪು. ಕಂದಾಯ ಇಲಾಖೆಯಲ್ಲಿ ಜನರ ಕೆಲಸಗಳು ಹೆಚ್ಚಾಗಿರುತ್ತವೆ. ಆದರೂ ಕಳೆದ ಸರ್ಕಾರದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ನಿಯೋಜನೆ ಮೇಲೆ ಬೇರೆಡೆಗೆ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದರು.

ಕಂದಾಯ ಇಲಾಖೆಯ ಸಿಬ್ಬಂದಿಗೆ 2014ರಿಂದ ಕಂದಾಯ ವಿಷಯಗಳಿಗೆ ಸಂಬಂಸಿದಂತೆ ತರಬೇತಿ ನೀಡಿಲ್ಲ. ಹೀಗಾಗಿ ಗ್ರಾಮ ಲೆಕ್ಕಿಗರಿಗೆ ನಿಯಮ ಗೊತ್ತಿಲ್ಲ. ಈ ಸಂಬಂಧ ಒಂದು ಯೋಜನೆ ರೂಪಿಸಿ ಸರ್ಕಾರದಿಂದ ತರಬೇತಿ ನೀಡಲಾಗುವುದು ಎಂದರು.

ವರದಿ ಬಂದ ನಂತರ ಕ್ರಮ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಹೋಬಳಿ 31 ಗ್ರಾಮಗಳನ್ನು ಬೈಲಹೊಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಸಚಿವ ಕೃಷ್ಣಬೈರೇಗೌಡ, ಬೈಲಹೊಂಗಲ ಕ್ಷೇತ್ರದ ಶಾಸಕ ಶಿವಾನಂದ ಕೌಜಲಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಈ ಮೊದಲು ಯರಗಟ್ಟಿ ಹೋಬಳಿಯನ್ನು ತಾಲೂಕನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಸವದತ್ತಿಯಲ್ಲಿ ಉಳಿದಿರುವುದು 95 ಗ್ರಾಮಗಳ 3 ಹೋಬಳಿಗಳು ಮಾತ್ರ. ಈಗ ಮತ್ತೆ 31 ಗ್ರಾಮಗಳನ್ನು ಬೈಲಹೊಂಗಲಕ್ಕೆ ಹತ್ತಿರವಾಗಿವೆ ಎಂಬ ಕಾರಣಕ್ಕೆ ಪುನರ್ ವಿಂಗಡಣೆ ಮಾಡಿದರೆ ಸವದತ್ತಿಯಲ್ಲಿ ಉಳಿಯುವುದು 60 ಗ್ರಾಮಗಳ ಮಾತ್ರ. ಮತ್ತೊಂದೆಡೆ ಬೈಲಹೊಂಗಲ ತಾಲೂಕಿಗೆ 117 ಗ್ರಾಮಗಳಾಗಲಿವೆ. ಇದು ಆಡಳಿತಾತ್ಮಕವಾಗಿಯೂ ಹೊರೆಯಾಗಲಿದೆ. ಆದರೂ ಶಾಸಕರ ಜೊತೆ ಚರ್ಚೆ ನಡೆಸಿ ಅಧಿಕಾರಿಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದನ್ನೂಓದಿ:'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಪುನಃ ಬರೆಸದಿದ್ದರೆ ಪರಿಣಾಮ ಎದುರಿಸಿ: ಬಿಜೆಪಿ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.