ETV Bharat / state

ನಂದಿನಿ ಹಾಲಿನ ದರ ಏರಿಕೆ: ಮೈಸೂರಿನಲ್ಲಿ ಹೋಟೆಲ್ ಮಾಲೀಕರು ಹೇಳಿದ್ದೇನು? - Milk Price Hike Reactions

ನಂದಿನಿ ಹಾಲಿನ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ನಡೆಗೆ ಮೈಸೂರಿನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದರು.

author img

By ETV Bharat Karnataka Team

Published : Jun 25, 2024, 4:48 PM IST

Mysuru people On Milk Price Increase
ಹಾಲಿನ ದರ ಹೆಚ್ಚಳಕ್ಕೆ ಮೈಸೂರಿನಲ್ಲಿ ಆಕ್ರೋಶ (ETV Bharat)
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ಪ್ರತಿಕ್ರಿಯೆ (ETV Bharat)

ಮೈಸೂರು: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್​ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಮಂದಿ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದು, ಕೂಡಲೇ ದರವನ್ನು ಪುನರ್‌ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ಪ್ರತಿಕ್ರಿಯೆ: ''ಈಗಾಗಲೇ ಡೀಸೆಲ್, ಪೆಟ್ರೋಲ್ ದರ ಹೆಚ್ಚಳವಾಗಿದೆ. ಈ ಬೆನ್ನಲ್ಲೇ ನೂರಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ ಎಂದು ಭಾವಿಸಿದ್ದೆವು. ಅದು ಈಗ ಸತ್ಯವಾಯಿತು. ಈಗಾಗಲೇ ಹೋಟೆಲ್ ಉದ್ಯಮ ಕಷ್ಟದಲ್ಲಿದೆ. ಅದರ ನಡುವೆ ಹಾಲಿನ ದರ ಹೆಚ್ಚಾಗಿದೆ. ಇದರ ಪರಿಣಾಮ ಹೋಟೆಲ್ ತಿಂಡಿ ತಿನಿಸುಗಳು, ಕಾಫಿ-ಟೀ ಬೆಲೆಯನ್ನೂ ಹೆಚ್ಚಿಸುವ ಅನಿವಾರ್ಯತೆ ಉಂಟಾಗುತ್ತದೆ. ಕೋವಿಡ್ ನಂತರ ಹೋಟೆಲ್ ಉದ್ಯಮ ಕಷ್ಟದಲ್ಲಿದೆ. ಈಗಲಾದರೂ ಹೆಚ್ಚಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಹಾಲಿನ ದರವನ್ನು ಮುಖ್ಯಮಂತ್ರಿಗಳು ಪುನರ್‌ಪರಿಶೀಲನೆ ಮಾಡಲಿ" ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮನವಿ ಮಾಡಿದರು.

ಟೀ ಅಂಗಡಿಯ ಶಿವು ಮಾತನಾಡಿ, "ಹೀಗೆ ಎರಡು ತಿಂಗಳು, ಮೂರು ತಿಂಗಳಿಗೆ ಹಾಲಿನ ದರ ಹೆಚ್ಚಿಸಿದರೆ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ. ಮೊದಲೇ ಕೆಲಸ ಇಲ್ಲ. ಇಂತಹ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹಾಲಿನ ದರ ಹೆಚ್ಚಿಸಿದ್ದು ಸರಿಯಲ್ಲ" ಎಂದರು.

ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್​: ಹಾಲಿನ ದರ ಪ್ರತಿ ಲೀಟರ್​ಗೆ 2 ರೂ. ಹೆಚ್ಚಳ! - MILK PRICE HIKE

"ಈಗಾಗಲೇ ಪೆಟ್ರೋಲ್ ಡೀಸೆಲ್ ದರ ಜಾಸ್ತಿಯಾಗಿದ್ದು, ಸಾಗಾಣಿಕೆ ವಚ್ಚವೂ ಹೆಚ್ಚಾಗಿದೆ. ಇತರೆ ವೆಚ್ಚಗಳನ್ನು ಸರಿದೂಗಿಸಲು ಸರ್ಕಾರ ಹಾಲಿನ ದರವನ್ನೂ ಏರಿಸಿದೆ" ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ದೂರವಾಣಿಯಲ್ಲಿ 'ಈಟಿವಿ ಭಾರತ್'​ಗೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಸಿಎಂ, ಡಿಸಿಎಂ ತಿಗಣೆಯಂತೆ ಬಡವರ ರಕ್ತ ಹೀರುತ್ತಿದ್ದಾರೆ: ಆರ್.ಅಶೋಕ್ ವಾಗ್ದಾಳಿ - R Ashok

ETV Bharat Logo

Copyright © 2024 Ushodaya Enterprises Pvt. Ltd., All Rights Reserved.