ETV Bharat / state

ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಮೇಕೆದಾಟು ವೈಭವ: WATCH VIDEO - mekedatu drone view

author img

By ETV Bharat Karnataka Team

Published : Aug 2, 2024, 7:07 AM IST

ಕೆಆರ್‌ಎಸ್​ ಮತ್ತು ಕಬಿನಿಯಿಂದ ಅಪಾರ ಪ್ರಮಾಣದ ನೀರಿನ ಹೊರಹರಿವಿನಿಂದ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ.

ಡ್ರೋನ್ ಕ್ಯಾಮೆರಾದಲ್ಲಿ ಮೇಕೆದಾಟು ವೈಭವ
ಮೇಕೆದಾಟು, ಸಂಗಮ (ETV Bharat)
ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಮೇಕೆದಾಟು ವೈಭವ (ETV Bharat)

ರಾಮನಗರ: ಕೆಆರ್‌ಎಸ್​ ಮತ್ತು ಕಬಿನಿ ಜಲಾಶಯದಿಂದ ನಿತ್ಯ ಎರಡು ಲಕ್ಷಕ್ಕೂ ಅಧಿಕ ಕ್ಯೂಸೆಕ್​​ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಗಡಿಭಾಗ ಕನಕಪುರ ತಾಲೂಕಿನ ಸಂಗಮದಲ್ಲಿ ಕಾವೇರಿ ನದಿ ನಿರೀಕ್ಷೆಗೂ ಮೀರಿ ತುಂಬಿ ಹರಿಯುತ್ತಿದೆ.

ಸಂಗಮದ ಬಳಿ ಇರುವ ಮಯೂರ ಯಾತ್ರಿನಿವಾಸದ ಸುತ್ತ ನೀರು ತುಂಬಿಕೊಂಡಿದೆ. ಪ್ರಸಿದ್ಧ ಪ್ರವಾಸಿ ತಾಣ ಮೇಕೆದಾಟು ಮೂಲಕ ತಮಿಳುನಾಡಿನತ್ತ ಕಾವೇರಿ ಭೋರ್ಗರೆಯುತ್ತಾ ಹರಿಯುತ್ತಿದೆ. ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿರುವ ಪರಿಣಾಮ ಕನಕಪುರ ತಾಲೂಕಿನ ಬೊಮ್ಮಸಂದ್ರ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಗ್ರಾಮಕ್ಕೆ ಹೋಗಿ ಬರಲು ಅರಣ್ಯ ಇಲಾಖೆಯಿಂದ ತೆಪ್ಪದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಕನಕಪುರ ತಾಲೂಕಿನ ಗಾಳಿಬೋರೆ ಜಂಗಲ್​ ಲಾಡ್ಸ್‌ನ ಟೆಂಟ್‌ಹೌಸ್‌ಗಳು ಜಲಾವೃತವಾಗಿವೆ. ಕಳೆದ ಮೂರು ದಿನಗಳಿಂದ ಜಂಗಲ್‌ಲಾಡ್ಜ್​​​​​ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ. ಸಂಗಮ ಮತ್ತು ಮೇಕೆದಾಟು ಪ್ರವಾಸಿತಾಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ರಾಮನಗರ
ಕಾವೇರಿ ನದಿ ನೀರಿನಿಂದ ಜಲಾವೃತಗೊಂಡಿರುವುದು. (ETV Bharat)

ಡ್ರೋನ್ ಕ್ಯಾಮೆರಾದಲ್ಲಿ ಮೇಕೆದಾಟು ವೈಭವ: ಮೇಕೆದಾಟು ಹಾಗೂ ಸಂಗಮದಲ್ಲಿ ಕಾವೇರಿ ನದಿ ನೀರು ಭೋರ್ಗರತದ ದೃಶ್ಯಾವಳಿಯನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಪ್ರತಿ ದಿನ ಕಬಿನಿ ಹಾಗೂ ಕೆಆರ್​​ಎಸ್​ನಿಂದ ಲಕ್ಷಾಂತರ ಕ್ಯೂಸೆಕ್​ ನೀರು ಬರುತ್ತಿರುವುದರಿಂದ ದೃಶ್ಯ ವೈಭವ ನೋಡಲು ಎರಡು ಕಣ್ಣುಗಳ ಸಾಲದಾಗಿದೆ. ಅರಣ್ಯದ ಮಧ್ಯ ನೈಸರ್ಗಿಕವಾಗಿ ಕಾವೇರಿ ನದಿ ನೀರು ಭೋರ್ಗರೆದು ಹರಿಯುತ್ತಿರುವುನ್ನು ನೋಡುವುದೇ ಸುಂದರವಾಗಿದೆ.

ಮೂರು ದಿನಗಳ ಕಾಲ ನಿಷೇದಾಜ್ಞೆ: ಪ್ರವಾಸಿಗರ ಹಾಟ್​​ ಸ್ಪಾಟ್ ಎಂದೇ ಕೆರಯುವ ಮೇಕೆದಾಟು ಹಾಗೂ ಸಂಗಮಕ್ಕೆ ಪ್ರತಿ ಶನಿವಾರ ಹಾಗೂ ಭಾನುವಾರ ಹಾಗೂ ರಜೆ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೆ ಆಗಮಿಸಿ ಎಂಜಾಯ್ ಮಾಡುತ್ತದೆ. ಆದರೆ, ಕಳೆದೊಂದು ವಾರದಿಂದಲೂ ಕಾವೇರಿ ಕೊಳ್ಳದ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಾವೇರಿ ‌ನದಿ ನೀರು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಇನ್ನು ಮೂರು ದಿನಗಳ ಕಾಲ ಪ್ರವಾಸಿಗರು ಯಾರು ಕೂಡು ಸಂಗಮ ಹಾಗೂ ಮೇಕೆದಾಟಿಗೆ ಬರದಂತೆ ಬಿಗಿ ಪೊಲೀಸ್​ ಬಂದೋ ಬಸ್ತ್​ ಕಲ್ಪಿಸಲಾಗಿದೆ.

ಇದನ್ನೂ ಓದಿ: ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ: ಶರಾವತಿ ನೆರೆ ತಡೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಿದ್ಧತೆ - Gerusoppa Dam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.