ETV Bharat / state

ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ ಯುವತಿಯರಿಗೆ ವಂಚನೆ, ಆರೋಪಿ ಸೆರೆ - Matrimonial Fraud

ಮ್ಯಾಟ್ರಿಮೋನಿ ವೆಬ್‌ಸೈಟ್‌​ ಮೂಲಕ ಯುವತಿಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಂಧನ
ಆರೋಪಿ ಬಂಧನ
author img

By ETV Bharat Karnataka Team

Published : Apr 11, 2024, 2:49 PM IST

ಬೆಂಗಳೂರು: ವೈವಾಹಿಕ ಸಂಬಂಧಕ್ಕೆ ವೇದಿಕೆಯಾಗಿರುವ ಮ್ಯಾಟ್ರಿಮೋನಿ ವೆಬ್‌ಸೈಟ್​ಗಳ ಮೂಲಕ ನಕಲಿ ಪ್ರೋಫೈಲ್ ರಚಿಸಿ ಯುವತಿಯರನ್ನು ಪರಿಚಯಿಸಿಕೊಂಡು‌ ಮದುವೆ ಮಾಡಿಕೊಳ್ಳುವ ಸೋಗಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ. ಚಿಕ್ಕನಾಯಕನಹಳ್ಳಿಯ ಹುಳಿಯಾರು ಮೂಲದ ದೀಪಕ್ (42) ಬಂಧಿತ ಆರೋಪಿ.

ಬಿಎಸ್​ಸಿ ವಿದ್ಯಾಭ್ಯಾಸ ಮಾಡಿರುವ ದೀಪಕ್,​ ಈ ಹಿಂದೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.‌ ಸುಲಭವಾಗಿ ಹಣ‌ ಸಂಪಾದಿಸುವ ಉದ್ದೇಶದಿಂದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ‌ ಕೊಡಿಸುವುದಾಗಿ ಹೇಳಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದನು. ಇದೇ ರೀತಿ ವಿಧವೆ ಆಥವಾ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಪೇಜ್ ತೆರೆದು ಅಪರಿಚಿತರ ಫೋಟೊ ಬಳಸಿಕೊಂಡು ತಾನೇ ಎಂದು ಬಿಂಬಿಸಿಕೊಳ್ಳುತ್ತಿದ್ದ. ನಂತರ ಮದುವೆ ಮಾಡಿಕೊಳ್ಳುವುದಾಗಿ ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಮಹಿಳೆ ಜೆ.ಪಿ.ನಗರದ 1ನೇ ಹಂತದಲ್ಲಿ ಸುಮಾರು 20 ವರ್ಷಗಳಿಂದ ತಾಯಿಯೊಂದಿಗೆ ವಾಸವಾಗಿದ್ದು, ಕಳೆದ‌ ಫೆಬ್ರವರಿಯಲ್ಲಿ ವಿವಾಹ ಮಾಡಿಕೊಳ್ಳಲು ವರನನ್ನು ಹುಡುಕುತ್ತಿದ್ದರು. ಇದಕ್ಕಾಗಿ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಲಾಗಿನ್ ಆಗಿದ್ದರು. ಈ ವೇಳೆ‌ ದೀಪಕ್ ಎಂಬಾತನ ಪ್ರೊಫೈಲ್ ಕಂಡು ಸಂಪರ್ಕಿಸಿದ್ದಾರೆ. ತಾನು ತಮಿಳುನಾಡಿನ ಮಧುರೈಯ ಎಸ್​ಬಿಐನಲ್ಲಿ‌ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ದೀಪಕ್ ಹೇಳಿಕೊಂಡಿದ್ದ. ವಾಟ್ಸ್​ಆ್ಯಪ್​​ ಮೂಲಕ ಬಯೊಡೇಟಾ ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಆರೋಪಿ ಹೇಳಿದ್ದಾನೆ.

ಕಾಲಕ್ರಮೇಣ ಪರಸ್ಪರ ಇಬ್ಬರು ಕರೆ‌ ಮಾಡಿ ಮಾತನಾಡುತ್ತಿದ್ದರು. ಈ‌ ಮಧ್ಯೆ ತನ್ನ ವ್ಯಾಲೆಟ್ ಕಳೆದುಕೊಂಡಿದ್ದು ಹಣ ಬೇಕಾಗಿದೆ‌ ಎಂದು ಮಹಿಳೆಯಿಂದ 30 ಸಾವಿರ ರೂ. ಪಡೆದುಕೊಂಡಿದ್ದ. ಅಲ್ಲದೇ ತಾನು ಬಳಸುತ್ತಿರುವ ಸಿಮ್‌ ಬ್ಯಾಂಕ್‌ನವರದ್ದು, ಖಾಸಗಿಯಾಗಿ ಮಾತನಾಡಲು ಆಗುತ್ತಿಲ್ಲ. ಹೀಗಾಗಿ ಸಿಮ್‌ ಖರೀದಿಸುವಂತೆಯೂ ಬೇಡಿಕೆಯಿಟ್ಟಿದ್ದ. ಇದನ್ನು ನಂಬಿ ಮಹಿಳೆ ಸಿಮ್ ಖರೀದಿಸಿದ್ದರು. ಸಿಮ್‌ ತೆಗೆದುಕೊಳ್ಳಲು ಆಫೀಸ್ ಬಾಯ್ ಕಳುಹಿಸುವುದಾಗಿ ನಂಬಿಸಿ ತಾನೇ ಯುವತಿಯಿಂದ ಸಿಮ್ ಪಡೆದಿದ್ದ. ಸಿಮ್‌ ಪಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದ. ಸ್ನೇಹಿತರ ಬಳಿ ಈ ವಿಚಾರದ ಬಗ್ಗೆ ಹೇಳಿದಾಗ ತಾನು ಮೋಸ ಹೋಗಿರುವುದನ್ನು ಅರಿತ ಮಹಿಳೆ ತನ್ನ ಹೆಸರಿನಲ್ಲಿ ಖರೀದಿಸಿದ ಸಿಮ್ ಬ್ಲಾಕ್ ಮಾಡಿಸಿದ್ದರು. ಆನ್‌ಲೈನ್ ಮೂಲಕ‌ ಪರಿಚಯಿಸಿಕೊಂಡು ತನ್ನನ್ನು ನಂಬಿಸಿ ವಂಚಿಸಿದ ಆರೋಪಿ ವಿರುದ್ಧ ನೀಡಿದ ದೂರಿನ ಮೇರೆಗೆ ವಂಚಕ ದೀಪಕ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎರಡು ದಿನದಲ್ಲಿ 10 ಮೊಬೈಲ್‌ ನಂಬರ್ ಬದಲಾವಣೆ: ವಂಚಿಸುವ ಕಾಯಕವನ್ನು ಸಿದಿಸಿಕೊಂಡಿದ್ದ ದೀಪಕ್, ಬೇರೆ‌ ಬೇರೆ ಹೆಸರಿನಲ್ಲಿ ಅನ್ಯರ ಫೋಟೊಗಳ ಪ್ರೊಫೈಲ್ ಬಳಸಿಕೊಳ್ಳುತ್ತಿದ್ದ. ಮಹಿಳೆಯರನ್ನು ಮೃದುವಾಗಿ ಮಾತನಾಡಿ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದ. ನೇರವಾಗಿ ಭೇಟಿಯಾಗದೇ ಆನ್‌ಲೈನ್ ಮೂಲಕವೇ ಹಣ ಪಾವತಿಸಿಕೊಂಡು ವಂಚಿಸುತ್ತಿದ್ದ.‌ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸುತ್ತಿದ್ದಂತೆ ಬಂಧನ ಭೀತಿಯಿಂದ ಎರಡು ದಿನಗಳ ಅಂತರದಲ್ಲಿ 10 ಮೊಬೈಲ್ ನಂಬರ್ ಬದಲಾಯಿಸಿದ್ದ ಎಂದು ಪೊಲೀಸರ​ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು: ಯುಪಿಐ ಸ್ಕ್ಯಾನರ್ ಅಪ್ ಡೇಟ್ ಸೋಗಿನಲ್ಲಿ ಹೋಟೆಲ್​​ ಮಾಲೀಕರಿಗೆ 48 ಸಾವಿರ ರೂ. ವಂಚನೆ - fraud to hotel owner

ETV Bharat Logo

Copyright © 2024 Ushodaya Enterprises Pvt. Ltd., All Rights Reserved.