ETV Bharat / state

ಮಸೀದಿ ದರ್ಶನ: ಮುಸ್ಲಿಮರ ಪ್ರಾರ್ಥನಾ ಸ್ಥಳಕ್ಕೆ ಹಿಂದೂಗಳ ಭೇಟಿ, ಕನ್ನಡದಲ್ಲೇ ಪ್ರವಚನ - Masjid Darshan

author img

By ETV Bharat Karnataka Team

Published : Jul 27, 2024, 10:38 AM IST

Updated : Jul 27, 2024, 12:52 PM IST

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜಮಾಯತ್-ಎ-ಇಸ್ಲಾಮಿಯಾ ಹಿಂದ್ ಸಂಸ್ಥೆ ಹಮ್ಮಿಕೊಂಡ 'ಮಸೀದಿ ದರ್ಶನ' ನಿಮಿತ್ತ 'ಆಲಿ' ಮಸೀದಿಗೆ ಮುಸ್ಲಿಮರು, ಹಿಂದೂಗಳು, ಕ್ರೈಸ್ತರು, ಮಹಿಳೆಯರು ಸೇರಿ 300 ಜನರು ಮಸೀದಿಗೆ ಆಗಮಿಸಿದ್ದರು.

ಹರಿಹರದಲ್ಲಿ ಮಸೀದಿ ದರ್ಶನ
ಹರಿಹರದಲ್ಲಿ ಮಸೀದಿ ದರ್ಶನ (ETV Bharat)
ಹರಿಹರದಲ್ಲಿ ಮಸೀದಿ ದರ್ಶನ (ETV Bharat)

ದಾವಣಗೆರೆ: ಭಾವೈಕ್ಯತೆ ಸಾರಲು, ಸೌಹಾರ್ದತೆಯನ್ನು ಬಲಪಡಿಸಬೇಕೆಂಬ ನಿಟ್ಟಿನಲ್ಲಿ ಜಿಲ್ಲೆಯ ಹರಿಹರದ ಪ್ರಶಾಂತ್ ನಗರದಲ್ಲಿರುವ 'ಅಲಿ' ಮಸೀದಿಗೆ ಶುಕ್ರವಾರ ಅನ್ಯ ಧರ್ಮೀಯರ ದರ್ಶನಕ್ಕೆ ಅನುವು ಕೊಡಲಾಯಿತು. ಜಮಾಯತ್- ಎ-ಇಸ್ಲಾಮಿಯಾ ಹಿಂದ್ ಸಂಸ್ಥೆ ಹಮ್ಮಿಕೊಂಡ 'ಮಸೀದಿ ದರ್ಶನ' ಎಂಬ ಕಾರ್ಯಕ್ರಮದಡಿ ಹಿಂದೂಗಳು, ಕ್ರೈಸ್ತರು, ಮಹಿಳೆಯರು ಮಸೀದಿಗೆ ಸೌಹಾರ್ದಯುತವಾಗಿ ಭೇಟಿ ನೀಡಿದರು.

ಹರಿಹರದಲ್ಲಿ ಮಸೀದಿ ದರ್ಶನ
ಹರಿಹರದಲ್ಲಿ ಮಸೀದಿ ದರ್ಶನ (ETV Bharat)

ಮಸೀದಿ, ನಮಾಜ್ ಎಂದರೆ ಏನು?, ಅಲ್ಲಿ ಯಾವ ರೀತಿಯ ಪ್ರವಚನ ನಡೆಯುತ್ತದೆ ಎಂದು ಅನ್ಯಧರ್ಮಿಯರು ತಿಳಿದುಕೊಳ್ಳಲು ಈ ಮಸೀದಿ ದರ್ಶನದ ಉದ್ದೇಶ. ಶುಕ್ರವಾರ ಹಿಂದೂ ಬಾಂಧವರು ಮಸೀದಿಯ ಪ್ರವೇಶಿಸುವ ಮೊದಲು ಕೈಕಾಲು ತೊಳೆದುಕೊಂಡರು. ಈ ವೇಳೆ, ಮುಸ್ಲಿಮರು ಯಾವ ರೀತಿ ಕಾಲು ತೊಳೆದುಕೊಳ್ಳುತ್ತಾರೆ (ವಝು) ಎಂದು ಮಸೀದಿಯವರು ತಿಳಿಸಿಕೊಟ್ಟರು. ಅನ್ಯ ಧರ್ಮೀಯರ ಭೇಟಿ ಹಿನ್ನೆಲೆಯಲ್ಲಿ ಉರ್ದು ಬದಲಿಗೆ ಕನ್ನಡದಲ್ಲೇ ವಿಶೇಷ ಪ್ರವಚನವೂ ನಡೆಯಿತು. ಮುಸ್ಲಿಮರು ಹಾಗೂ ಹಿಂದೂಗಳು ಸೇರಿ ಸುಮಾರು 300 ಮಂದಿ ಪಾಲ್ಗೊಂಡಿದ್ದರು.

ಹರಿಹರದಲ್ಲಿ ಮಸೀದಿ ದರ್ಶನ
ಹರಿಹರದಲ್ಲಿ ಮಸೀದಿ ದರ್ಶನ (ETV Bharat)

ಹಿಂದೂಗಳು ಹೇಳಿದ್ದೇನು?: ದೇಶದಲ್ಲಿ ದ್ವೇಷ ಹಂಚುವ ಬದಲು ಈ ರೀತಿಯ ಪ್ರೀತಿ ಹಂಚಬೇಕೆಂದು ಮಸೀದಿಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲರೂ ಒಟ್ಟಾಗಿ ಬಾಳಬೇಕೆಂಬ ಸಂದೇಶ ಎಲ್ಲ ಧರ್ಮದಲ್ಲೂ ಇದೆ. ಕೆಲವರು ನಾವು, ಹೆಚ್ಚು ನಮ್ಮಿಂದಲೇ ಎಲ್ಲವೂ ಎನ್ನುವರಿರುತ್ತಾರೆ. ನನ್ನ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಸೀದಿಗೆ ಭೇಟಿ ಕೊಟ್ಟಿದ್ದೇನೆ. ನಾವು ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸುತ್ತೇವೆ‌. ಇಲ್ಲಿ ನಾಲ್ಕು ಗೋಡೆ ಮಧ್ಯೆ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವನೊಬ್ಬ ನಾಮ ಹಲವು ಎಂಬ ರೀತಿಯಲ್ಲಿ ಅವರ ಜನಾಂಗದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅಂತಹ ಇಲ್ಲಿಯೂ ನಡೆಯಿತು ಎಂದು ಹೆಚ್.ಕೆ. ಕೊಟ್ರಪ್ಪ ಹೇಳಿದರು.

ಅಲಿ ಮಸೀದಿ ದರ್ಶನ, ಜುಮ್ಮಾ ಪ್ರವಚನ ಆಯೋಜನೆ ಮಾಡಲಾಗಿತ್ತು. ಎಲ್ಲರ ಪ್ರಾರ್ಥನಾ ಸ್ಥಳಗಳಿಗೆ ಎಲ್ಲರಿಗೂ ಅವಕಾಶ ಕೊಡಬೇಕೆಂದು ಇದನ್ನು ಆಯೋಜನೆ ಮಾಡಿದ್ದೇವೆ. ನನ್ನ ಪ್ರವಚನಗಳು ಉರ್ದುವಿನಲ್ಲಿ ನಡೆಯುತ್ತವೆ. ಆದರೆ, ಎಲ್ಲರಿಗಾಗಿ ಎಲ್ಲ ಧರ್ಮೀಯ ಆರಾಧನಾಲಯಗಳಿಗೆ ಹೋಗಿ ಬರುವ ಅವಕಾಶ ಇರಬೇಕೆಂದು ಕನ್ನಡದಲ್ಲಿ ಪ್ರವಚನ ಆಯೋಜಿಸಿದ್ದೆವು. ವರ್ಷಕ್ಕೆ ಒಂದೆರೆಡು ಬಾರಿ ಕನ್ನಡದಲ್ಲಿ ಆಯೋಜಿಸುವಂತೆ ಮಸೀದಿಯವರೆಗೆ ತಿಳಿಸಿದ್ದೇವೆ ಎಂದು ಆಯೋಜಕ ಅಕ್ಬರ್ ಅಲಿ ತಿಳಿಸಿದರು.

ಹರಿಹರದಲ್ಲಿ ಮಸೀದಿ ದರ್ಶನ
ಹರಿಹರದಲ್ಲಿ ಮಸೀದಿ ದರ್ಶನ (ETV Bharat)

ಮುಂದುವರೆದು, ಮಸೀದಿ, ನಮಾಜ್ ಎಂದರೇನು ತಿಳಿದುಕೊಳ್ಳವುದರಿಂದ ಒಗ್ಗಟ್ಟು ಬರಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ದೇಶಾದ್ಯಂತ ಜಮಾಯತ್- ಎ-ಇಸ್ಲಾಮಿಯಾ ಹಿಂದ್ ಸಂಸ್ಥೆ ಹಮ್ಮಿಕೊಂಡು ಬಂದಿದೆ. ಹರಿಹರದ ಮಸೀದಿ ದರ್ಶನಕ್ಕೆ ಮಹಿಳೆಯರು ಸೇರಿ 300 ಜನ ಭೇಟಿ ನೀಡಿದ್ದರು. ಅದರಲ್ಲಿ 60-70ಕ್ಕೂ ಹೆಚ್ಚು ಜನ ಹಿಂದೂಗಳು ಆಗಮಿಸಿದ್ದರು. ನಮಾಜ್, ಮಸೀದಿ ಬಗ್ಗೆ ತಿಳಿಸಿದ್ದೇವೆ. ಸರ್ವಧರ್ಮೀಯರ ಹಬ್ಬಗಳನ್ನು ಕೂಡಿ ಆಚರಣೆ ಮಾಡಿದಲ್ಲಿ, ಈ ದೇಶ ಬಲಿಷ್ಠ ಆಗಲಿದೆ. ಸೌಹಾರ್ದಕ್ಕೆ ಬಲ ಬರಲಿದೆ. ಸಂವಿಧಾನದ ಹಕ್ಕುಗಳು ಬಲಿಷ್ಠ ಆಗಲಿವೆ ಎಂದು ಅಕ್ಬರ್ ಅಲಿ ವಿವರಿಸಿದರು.

ಇದನ್ನೂ ಓದಿ: ತಾಳವಾಡಿಯಲ್ಲಿ ಮಾರಮ್ಮನ ಜಾತ್ರೆ: ಮಸೀದಿ ಮುಂದೆ ಕೊಂಡ ಹಾಯ್ದು ಭಾವೈಕ್ಯತೆ

Last Updated : Jul 27, 2024, 12:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.