ETV Bharat / state

ಚಿಕ್ಕಬಳ್ಳಾಪುರದಲ್ಲಿ ಮಾರ್ಗದರ್ಶಿ ಚಿಟ್​​ ಫಂಡ್​ನ 115ನೇ ಶಾಖೆ ಆರಂಭ - MARGADARSHI CHIT FUND

ಮಾರ್ಗದರ್ಶಿ ಚಿಟ್​​ಫಂಡ್​​ ಸಂಸ್ಥೆಯು ಆರಂಭವಾಗಿ 62 ವರ್ಷ ತುಂಬಿದ ಬೆನ್ನಲ್ಲೇ, ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ 115ನೇ ಶಾಖೆ ಆರಂಭಿಸಿದೆ. ರಾಜ್ಯದಲ್ಲಿ ಇದು 24ನೇ ಬ್ರ್ಯಾಂಚ್​ ಆಗಿದೆ.

ಚಿಕ್ಕಬಳ್ಳಾಪುರದಲ್ಲಿ ಮಾರ್ಗದರ್ಶಿ ಚಿಟ್​​ ಫಂಡ್​ನ 115ನೇ ಶಾಖೆ ಆರಂಭ
ಚಿಕ್ಕಬಳ್ಳಾಪುರದಲ್ಲಿ ಮಾರ್ಗದರ್ಶಿ ಚಿಟ್​​ ಫಂಡ್​ನ 115ನೇ ಶಾಖೆ ಆರಂಭ (ETV Bharat)
author img

By ETV Bharat Karnataka Team

Published : Oct 7, 2024, 3:59 PM IST

Updated : Oct 7, 2024, 5:33 PM IST

ಚಿಕ್ಕಬಳ್ಳಾಪುರ: ರಾಮೋಜಿ ಸಮೂಹ ಸಂಸ್ಥೆಗಳ ಕಂಪನಿಗಳಲ್ಲಿ ಒಂದಾದ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಗೆ ಹೆಸರುವಾಸಿಯಾಗಿರುವ ಮಾರ್ಗದರ್ಶಿ ಚಿಟ್​​ಫಂಡ್​ ಪ್ರೈವೇಟ್​ ಲಿಮಿಟೆಡ್​​ನ 115ನೇ ಶಾಖೆಯನ್ನು ಚಿಕ್ಕಬಳ್ಳಾಪುರದಲ್ಲಿ ಆರಂಭಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು.

ಗ್ರಾಹಕರಿಂದ ಹಣವನ್ನು ಪಡೆದು ದಾಖಲೆಗಳನ್ನು ನೀಡುವ ಮೂಲಕ ಮಾರ್ಗದರ್ಶಿ ಚಿಟ್​ಫಂಡ್​​ನ ಹೊಸ ಶಾಖೆಯ ಕಾರ್ಯಚಟುವಟಿಕೆಗೆ ಶೈಲಜಾ ಕಿರಣ್​​ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಚಿಟ್​​ ಫಂಡ್​​ನ ಕರ್ನಾಟಕದ ನಿರ್ದೇಶಕರಾದ ಪಿ.ಎಲ್. ಲಕ್ಷ್ಮಣರಾವ್ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಭಾಗವಹಿಸಿದ್ದರು.

ನೂತನ ಶಾಖೆಯ ಬಗ್ಗೆ ಎಂಡಿ ಶೈಲಜಾ ಕಿರಣ್ ಅವರ ಮಾತುಗಳು (ETV Bharat)

ವರ್ಷಕ್ಕೆ ಐದು ಶಾಖೆ ಆರಂಭ: ಬಳಿಕ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು, ಸಂಸ್ಥೆಯು 62 ವರ್ಷಗಳಿಂದ ಜನರ ನಂಬಿಕೆ, ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬಂದಿದೆ. ಪಾರದರ್ಶಕ ವಹಿವಾಟಿನಿಂದಾಗಿ ಮಾರ್ಗದರ್ಶಿ ಚಿಟ್​​ಫಂಡ್​ ಪ್ರೈವೇಟ್​ ಲಿಮಿಟೆಡ್​​ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿದೆ. ಸಂಸ್ಥೆಯು ಕರ್ನಾಟಕದ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ತನ್ನ 115ನೇ ಶಾಖೆಯನ್ನು ಆರಂಭಿಸಿದ್ದು ಸಂತಸದ ವಿಚಾರ. ಈ ಭಾಗದ ಪ್ರಗತಿ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ. ಪ್ರತಿ ಮನೆಗೂ ಸಂಸ್ಥೆಯನ್ನು ತಲುಪಿಸುವ ಗುರಿ ಹೊಂದಿದ್ದೇವೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಮೊದಲ ಮತ್ತು ಕರ್ನಾಟಕದಲ್ಲಿ 24ನೇ ಶಾಖೆ ಇದಾಗಿದೆ. ಅಕ್ಟೋಬರ್​​ 1ಕ್ಕೆ ಮಾರ್ಗದರ್ಶಿ ಚಿಟ್​​ಫಂಡ್​​ ಸಂಸ್ಥೆಯು ಆರಂಭವಾಗಿ 62 ವರ್ಷ ಸಂದಿದೆ. ಗ್ರಾಹಕರ ಹೆಚ್ಚಿನ ಸಹಭಾಗಿತ್ವದಿಂದಾಗಿ ಸಂಸ್ಥೆಯು ಇನ್ನಷ್ಟು ಶಾಖೆಗಳನ್ನು ತೆರೆಯಲಿದೆ. ಚಿಕ್ಕಬಳ್ಳಾಪುರದ ಜೊತೆಗೆ ಕರ್ನಾಟಕದಲ್ಲಿ ಇನ್ನೈದು ಶಾಖೆಗಳನ್ನು ಆರಂಭಿಸಲು ಯೋಜಿಸಲಾಗಿದೆ. ಬೆಂಗಳೂರಿನ ಕೆಂಗೇರಿ, ಜೆಪಿ ನಗರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಈ ಶಾಖೆ ಕಾರ್ಯಾರಂಭ ಮಾಡಲಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯು ವರ್ಷಕ್ಕೆ 5 ಹೊಸ ಶಾಖೆ ಆರಂಭಿಸುವ ಉದ್ದೇಶ ಹೊಂದಿದೆ. ಪ್ರತಿ ತಾಲೂಕಿನಲ್ಲಿ ಒಂದು ಮಾರ್ಗದರ್ಶಿ ಚಿಟ್​​ಫಂಡ್​​ ಶಾಖೆಯನ್ನು ಆರಂಭಿಸುವ ಗುರಿ ಇದೆ ಎಂದು ಶೈಲಜಾ ಕಿರಣ್ ಅವರು ತಿಳಿಸಿದರು.

ಸಂಸ್ಥೆಯ ಬಗ್ಗೆ ಗ್ರಾಹಕರ ಅಭಿಪ್ರಾಯಗಳು (ETV Bharat)

ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಬದ್ಧ;​ 6 ತಾಲೂಕು, 13 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆ ಚಿಕ್ಕಬಳ್ಳಾಪುರ. ಇಲ್ಲಿ 9 ಸಾವಿರ ಸಣ್ಣ ಕೈಗಾರಿಕೆಗಳು ಮತ್ತು 9 ಸಾವಿರ ಎಂಎಸ್​ಎಂಇಗಳು ಇವೆ. 14 ಸಾವಿರ ಕೋಟಿ ಜಿಡಿಪಿಯನ್ನು ಈ ಹೊಂದಿದೆ. ಜಿಲ್ಲೆಯ ಭವಿಷ್ಯದ ಅಭಿವೃದ್ಧಿಗೆ ನಾವು ಕೈಜೋಡಿಸುತ್ತೇವೆ ಎಂದು ಎಂಡಿ ಶೈಲಜಾ ಕಿರಣ್​ ತಿಳಿಸಿದರು.

ಗ್ರಾಹಕರ ಮನದಾಳದ ಮಾತು: 115ನೇ ಶಾಖೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಾಹಕರು ಸಂಸ್ಥೆಯ ಕಾರ್ಯ ಮತ್ತು ಆಗುತ್ತಿರುವ ಉಪಯೋಗಗಳ ಬಗ್ಗೆ ಮಾತನಾಡಿದರು. ಚಿಕ್ಕಬಳ್ಳಾಪುರದ ಕೃಷ್ಣಪ್ರಸಾದ್​​ ಎಂಬುವರು ಮಾತನಾಡಿ, ಮಾರ್ಗದರ್ಶಿಯು ನಂಬಿಕೆಗೆ ಅರ್ಹವಾದ ಸಂಸ್ಥೆಯಾಗಿದೆ. ಇಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು. ಚಿಕ್ಕಬಳ್ಳಾಪುರದಲ್ಲಿ ಶಾಖೆ ಆರಂಭವಾಗಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಗ್ರಾಹಕರಿಗೆ ದಾಖಲೆಗಳನ್ನು ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್
ಗ್ರಾಹಕರಿಗೆ ದಾಖಲೆಗಳನ್ನು ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ (ETV Bharat)

ಮಾರ್ಗದರ್ಶಿ ಚಿಟ್​​ಫಂಡ್​​ನಲ್ಲಿ ಇದೇ ಮೊದಲ ಬಾರಿಗೆ ಹೂಡಿಕೆ ಮಾಡುತ್ತಿದ್ದೇನೆ. ಚಿಕ್ಕಬಳ್ಳಾಪುರದಲ್ಲೇ ಶಾಖೆ ಆರಂಭವಾಗಿದ್ದು ಖುಷಿಯ ವಿಚಾರ. ಸ್ನೇಹಿತರ ಸಲಹೆಯಿಂದ ನಾನು ಹೂಡಿಕೆ ಆರಂಭಿಸಿದ್ದೇನೆ ಎಂದು ಮೋನಿಕಾ ಎಂಬುವರು ತಿಳಿಸಿದರು.

10 ವರ್ಷದಿಂದ ಮಾರ್ಗದರ್ಶಿ ಚಿಟ್​​​ಫಂಡ್​ನಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿ ಬಾರಿಯೂ ನನಗೆ ಉತ್ತಮ ಲಾಭವಾಗಿದೆ. ಬ್ಯಾಂಕ್​​ಗಳೇ 115 ಶಾಖೆಗಳನ್ನು ಹೊಂದಿಲ್ಲ. ಚಿಟ್​​ಫಂಡ್​ ಸಂಸ್ಥೆಯು ಇಷ್ಟು ಪ್ರಮಾಣದಲ್ಲಿ ಬೆಳೆದಿರುವುದು ವಿಶ್ವಾಸದ ಪ್ರತೀಕ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವುದರಿಂದ ಲಾಭವಿದೆ ಎಂದು ಮಂಜುನಾಥ್​ ರೆಡ್ಡಿ ಎಂಬ ಗ್ರಾಹಕರು ಅಭಿಪ್ರಾಯಪಟ್ಟರು.

4 ವರ್ಷದಿಂದ ನಾನು ಚಿಟ್​​ಫಂಡ್​​ನಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಬೇರೆ ಚಿಟ್​​ಫಂಡ್​ಗಳಿಗೆ ಹೋಲಿಕೆ ಮಾಡಿದಲ್ಲಿ ಇಲ್ಲಿ ಕಡಿಮೆ ಇಎಂಐ ಇದೆ. 4 ವರ್ಷಕ್ಕೆ ಇಲ್ಲಿ ಚೀಟಿಗಳು ಮುಗಿಯುತ್ತವೆ. ಬೇರೆಡೆ ಈ ಅನುಕೂಲ ಇಲ್ಲ ಎಂದು ಗ್ರಾಹಕ ಸಂತೋಷ್​ ತಿಳಿಸಿದರು.

ಮಾರ್ಗದರ್ಶಿ ಚಿಟ್​​ ಫಂಡ್​ನ ನೂತನ ಶಾಖೆ ಆರಂಭ
ಮಾರ್ಗದರ್ಶಿ ಚಿಟ್​​ ಫಂಡ್​ನ ನೂತನ ಶಾಖೆ ಆರಂಭ (ETV Bharat)

ಸಂಸ್ಥೆಯ ಬಗ್ಗೆ ಒಂದಿಷ್ಟು: 1962ರ ಅಕ್ಟೋಬರ್​ನಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯನ್ನು ಆರಂಭಿಸಲಾಗಿದೆ. 62 ವರ್ಷಗಳಿಂದ ಗ್ರಾಹಕರ ಅತ್ಯಂತ ನಂಬಿಕಾರ್ಹ ​ಸಂಸ್ಥೆಯಾಗಿದೆ​. ಉದ್ಯಮದ ಆರಂಭಿಕ ಹಂತದಿಂದಲೂ ರಾಮೋಜಿ ಗ್ರೂಪ್‌ ಅಧ್ಯಕ್ಷ ದಿವಂಗತ ರಾಮೋಜಿ ರಾವ್ ಅವರ ನಿಖರತೆ, ಬದ್ಧತೆ ಮತ್ತು ನಂಬಿಕೆಯಿಂದಾಗಿ ಸಂಸ್ಥೆಯು ಲಕ್ಷಾಂತರ ಗ್ರಾಹಕರ ನಂಬಿಕೆಯನ್ನು ಸಂಪಾದಿಸಿದೆ. ಕಳೆದ ಆರು ದಶಕಗಳಲ್ಲಿ ಮಾರ್ಗದರ್ಶಿ ಚಿಟ್​ ಫಂಡ್ ಸಾಕಷ್ಟು​ ಅಭಿವೃದ್ಧಿ ಕಂಡಿದೆ. ಈಗಾಗಲೇ 114 ಬ್ರಾಂಚ್​ಗಳಲ್ಲಿ ಲಕ್ಷಾಂತರ ಚಂದಾದಾರರಿದ್ದಾರೆ. ಸಂಸ್ಥೆಯಲ್ಲಿ 4,100 ಮಂದಿ ಉದ್ಯೋಗಿಗಳಿದ್ದು, 18 ಸಾವಿರ ಏಜೆಂಟರು​ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಸ್ಥೆ ಅನೇಕರಿಗೆ ಜೀವನೋಪಾಯದ ಮೂಲಾಧಾರವಾಗಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ 114ನೇ ಬ್ರ್ಯಾಂಚ್​​ ಆರಂಭಿಸಿದ ಮಾರ್ಗದರ್ಶಿ ಚಿಟ್​ ಫಂಡ್​ - Margadarsi Chit Fund New branch

Last Updated : Oct 7, 2024, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.