ETV Bharat / state

ಕಾಂಗ್ರೆಸ್​ನವರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಇದೆ : ಮಂಜುನಾಥ್ ಕುನ್ನೂರು - MANJUNATH KUNNUR

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಂಜುನಾಥ್ ಕುನ್ನೂರು ಅವರು ಶಿಗ್ಗಾವಿ ಉಪಚುನಾವಣೆ ಕುರಿತು ಮಾತನಾಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್​ನವರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಇದೆ ಎಂದಿದ್ದಾರೆ.

manjunath-kunnur
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಂಜುನಾಥ್ ಕುನ್ನೂರು (ETV Bharat)
author img

By ETV Bharat Karnataka Team

Published : Oct 26, 2024, 10:33 PM IST

ಹಾವೇರಿ : ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನವರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಇದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಂಜುನಾಥ್ ಕುನ್ನೂರು ಆರೋಪಿಸಿದ್ದಾರೆ.

ಜಿಲ್ಲೆ ಶಿಗ್ಗಾವಿಯಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯವರಲ್ಲಿ ಒಳ ಒಪ್ಪಂದ ಆಗಿದೆ. ಅವರ ಸ್ನೇಹಿತರಿಗೆ ಸಹಾಯ ಮಾಡಲು ಹೀಗೆ ಟಿಕೆಟ್ ನೀಡಿದ್ದಾರೆ. ನನ್ನ ಮನವೊಲಿಸಿದರೂ ನಾಮಪತ್ರ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಕುನ್ನೂರು ತಿಳಿಸಿದ್ದಾರೆ.

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಂಜುನಾಥ್ ಕುನ್ನೂರು ಅವರು ಮಾತನಾಡಿದರು (ETV Bharat)

ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದೇನೆ. ನಾಮಪತ್ರ ವಾಪಸ್ ಪಡೆಯುವುದಿಲ್ಲ. ನಮ್ಮನ್ನು ಕಡೆಗಣನೆ ಮಾಡಿ ಈಗಾಗಲೇ ಅನುಭವಿಸಿದ್ದಾರೆ. ಈಗಲೂ ಅನುಭವಿಸುತ್ತಿದ್ದಾರೆ. ಅವರು ಗೆಲ್ಲಬೇಕು ಅಂತಿದ್ದರೆ ನಮ್ಮನ್ನು ಕಡೆಗಣನೆ ಮಾಡುತ್ತಿರಲಿಲ್ಲ. ನಮ್ಮಂತ ನಾಯಕರು ಅವರಿಗೆ ಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ರಾಸ್​ ವೋಟಿಂಗ್​ ನೆನಪಿಸಿದ ಕುನ್ನೂರು​; ನಾನು ಈ ದೇಶ ಉಳಿಸಿದ್ದೀನಿ ಅನ್ನೋದೆ ಅವರಿಗೆ ಅರಿವಿಲ್ಲ. ಕಾಂಗ್ರೆಸ್ ಪಕ್ಷ ನನ್ನದು ಅಂತ ನಾನು ಕ್ರಾಸ್ ವೋಟಿಂಗ್ ಮಾಡಿದ್ದೆ. ಆ ಸ್ಮರಣೆ ಇದ್ದಿದ್ದರೆ ನನ್ನ ಕಡೆಗಣನೆ ಮಾಡ್ತಿರಲಿಲ್ಲ ಎಂದು ಮಂಜುನಾಥ್​ ಕುನ್ನೂರು​ ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮಾಯಿ ಕುಂದಗೋಳದವರು. ಯಾಸೀರ್ ಖಾನ್ ಪಠಾಣ್ ಹಾನಗಲ್ ತಾಲೂಕು ಬೊಮ್ಮನಹಳ್ಳಿಯವರು. ಇವರು ಸ್ಥಳೀಯರಿಗೆ ಟಿಕೆಟ್ ಕೊಡಲಿಲ್ಲ. ನನ್ನ ಗುರಿ ಎರಡೂ ಪಕ್ಷ ಸೋಲಿಸೋದು. ಬಿಜೆಪಿ ಹಾಗೂ ಕಾಂಗ್ರೆಸ್ ಸೋಲಿಸೋದೇ ನನ್ನ ಗುರಿ ಎಂದು ತಿಳಿಸಿದರು.

ನನ್ನ ಮಗನಿಗೆ ಇನ್ನೂ ವಯಸ್ಸಿದೆ. ನನ್ನ ಮಗ ಕೆಲಸ ಮಾಡಿಲ್ಲ. ನಾನು ಕೆಲಸ ಮಾಡಿದ್ದೇನೆ. ಜನ ಸ್ಪರ್ಧೆ ಮಾಡಿ ಅಂದಿದ್ದಕ್ಕೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಇಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಅಂತ ಹಾದಿ ಹಾದಿಯಲ್ಲಿ ಜನ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಬಂಡಾಯ ಶಮನ : ಈಗಾಗಲೇ ಬಂಡಾಯ ಎದ್ದು ನಾಮಪತ್ರ ಸಲ್ಲಿಸಿರುವ ಅಜ್ಜಂಫೀರ್ ಖಾದ್ರಿ ಅವರನ್ನು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರು ಕರೆದು ಮನವೊಲಿಸಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ನೀಡುವ ಭರವಸೆಯನ್ನು ಸಹ ನೀಡಿದ್ದಾರೆ.

ಇದೀಗ ಕಾಂಗ್ರೆಸ್​ಗೆ ಮಾಜಿ ಸಂಸದ ಮಂಜುನಾಥ್​ ಕುನ್ನೂರು ಬಂಡಾಯ​ ಕಗ್ಗಂಟಾಗಿ ಪರಿಣಮಿಸಿದೆ. ನಾಮಪತ್ರ ವಾಪಸ್​ ಪಡೆಯಲ್ಲ ಎನ್ನುತ್ತಿರುವ ಕುನ್ನೂರು​ ಅವರನ್ನು ಪಕ್ಷದ ನಾಯಕರು ಯಾವ ರೀತಿ ಸಮಾಧಾನ ಪಡಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಶಿಗ್ಗಾವಿಯ ಕಾಂಗ್ರೆಸ್ ಅಭ್ಯರ್ಥಿ ಪರ ಮತಪ್ರಚಾರಕ್ಕೆ ಸಿಎಂ, ಡಿಸಿಎಂ ಆಗಮಿಸಲಿದ್ದಾರೆ : ಸತೀಶ್ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.